ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ ಕೊಡಿಸಿ – ಸುನೀಲ ಭಾವಿಕಟ್ಟಿ
ಬೀದರ್ : ಬೀದರ ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ಮೀನುಗಾರಿಕೆಗಾಗಿ ಟೋಕರೆ ಕೋಳಿ (ಕೋಲಿ-ಕಬ್ಬಲಿಗ) ಸಮಾಜದ ಬಾಂಧವರಿಗೆ ಅವಕಾಶ ಒದಗಿಸಿಕೊಟ್ಟರೇ ಅವರು ಆರ್ಥಿಕವಾಗಿ ಪ್ರಗತಿ ಸಾಧಿಸಿ ಅದರಿಂದ ತಮ್ಮ ಕುಟುಂಬದ ನಿರ್ವಹಣೆಯೊಂದಿಗೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಡಿಸಿಸಿಐ ಮೀನುಗಾರರ ಘಟಕದ ಅಧ್ಯಕ್ಷರು ಶ್ರಮಿಸಬೇಕಾಗಿದೆ ಎಂದು ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಬೀದರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶೇಕಾಪೂರ್ (ಯರನಳ್ಳಿ) ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆಯಿಂದ ಏರ್ಪಡಿಸಿದ ಸ್ವಾಗತ ಮತ್ತು ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಮಿನುಗಾರರ ಬೀದರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಸುನೀಲಕುಮಾರ ತುಕಾರಾಮ್ ಖಾಸೆಂಪೂರ್ ಅವರಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ, ಗೌರವಿಸಿ, ಮಾತನಾಡುತ್ತಿದ್ದರು.
ಮೀನುಗಾರಿಕೆ ಇಲಾಖೆಯಿಂದ ಸಿಗುವ ಸಕಲ ಸೌಲತ್ತುಗಳು ಮತ್ತು ಮೀನುಗಾರಿಕೆ ಅಭಿವೃದ್ದಿ ನಿಗಮದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ಸಮಾಜ ಬಾಂಧವರಿಗೆ ಕೊಡಿಸಲು ನೂತನ ಅಧ್ಯಕ್ಷರಾದ ಖಾಸೆಂಪೂರ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾದರೇ ನಮ್ಮ ಸಮಾಜ ಅಭಿವೃದ್ದಿಯತ್ತ ಸಾಗುತ್ತದೆ. ಮುಂಬರುವ ದಿನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸಲು ಈ ಕಾರ್ಯದಿಂದ ಅವಕಾಶ ದೊರಕಬಹುದಾಗಿದೆ ಎಂದು ಭಾವಿಕಟ್ಟಿ ನುಡಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಟೋಕರೆ ಕೋಳಿ ಸಮಾಜ ಸಂಘದ ಬೀದರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಶನ್ಮೂಖಪ್ಪಾ ಶೇಕಾಪೂರ್, ನರಸಪ್ಪ ಜಾನಪ್ಪನೋರ್, ಸೇನೆಯ ಪ್ರಮುಖರಾದ ರಮೇಶ ಖಾಸೆಂಪೂರ್, ಸೂರ್ಯಕಾಂತ ಕಾಗೆ, ರಾಜಕುಮಾರ ರೇಕುಳಗಿ, ಸೂರ್ಯಕಾಂತ ಚಾಂಗಲೇಲಾ, ಸಿದ್ದು ಖಾಸೆಂಪೂರ್, ಲಾಲಪ್ಪಾ ಮಂಗಲಗಿ, ಜಿತೇಂದ್ರ ವ್ಮರ್ಜಾಪೂರ್, ರಮೇಶ ಬರೂರ್, ಮೊಗಲಪ್ಪಾ ಬರೂರ್, ಸಂತೋಷ ಚೌಕಿ, ರಮೇಶ ಮನ್ನಳ್ಳಿ, ಆನಂದ ಶೇಕಾಪೂರ್, ಲೋಕೆಶ ಫತ್ತೇಪೂರ್, ಶಶಿಕಾಂತ ಭಾವಿಕಟ್ಟಿ ಸೇರಿದಂತೆ ಇತರರು ಇದ್ದರು.
————-