ಯಾದಗಿರಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕ್ ಉಗ್ರರ ದಾಳಿಯ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ಮಾಡಿ ಉಗ್ರರ ನೆಲೆ ಮೇಲೆ ದಾಳಿ ಮಾಡಿ ಉಗ್ರರ ಸಂಹಾರ ಮಾಡಿದಕ್ಕೆ ಯಾದಗಿರಿ ನಗರದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ನಗರದ ವಾಲ್ಮೀಕಿ ವೃತ್ತದ ಆಂಜನೇಯ ದೇಗುಲದಲ್ಲಿ ಮಾಜಿ ಸೈನಿಕ ಆನಂದ ಮಿಲ್ಟ್ರಿ ಹಾಗೂ ದೇಶ ಭಕ್ತರು ಸೇರಿ ಆಂಜನೇಯ ದೇಗುಲದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.
ಭಾರತೀಯ ಸೈನಿಕರಿಗೆ ಹಾಗೂ ಪಿಎಂ ನರೇಂದ್ರ ಮೋದಿ ಅವರಿಗೆ ಪಾಕ್ ಉಗ್ರರ ದಮನ ಮಾಡಲು ಭಗವಂತ ಹೆಚ್ಚಿನ ಶಕ್ತಿ ಕೊಡಲಿ ಎಂದು ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜ ಹೀಡಿದು ಭಾರತೀಯ ಸೈನಿಕರಿಗೆ ಯಾದಗಿರಿಯಲ್ಲಿ ದೇಶ ಭಕ್ತರು ಜೈಕಾರ ಹಾಕಿದರು.
ಈ ವೇಳೆ ರಾಜಶೇಖರ ಪಾಟೀಲ ಚಾಮನಾಳ ಅವರು ಮಾತನಾಡಿ, ಪಾಕ್ ಉಗ್ರರು ಪಹಲ್ಗಾಂವ್ ನಲ್ಲಿ ದಾಳಿ ಮಾಡಿ ಮಹಿಳೆಯರ ಸಿಂದೂರು ಕುಂಕ ಭಾಗ್ಯ ಅಳಿಸಿ ಹಾಕಿದರು. ಭಾರತೀಯ ಸೇನೆಯು ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂದೂರು ಹೆಸರಿನಲ್ಲಿ ಪಾಕ್ ಮೇಲೆ ಕ್ಷಿಪಣಿ ದಾಳಿ ಮಾಡಿ ಉಗ್ರರ ನೆಲೆ ಧ್ವಂಸ ಮಾಡಿ ಉಗ್ರರ ಸಂಹಾರ ಮಾಡಿದ್ದಾರೆ. ಇದು ಖುಷಿಯ ಸಂಗತಿಯಾಗಿದೆ. ಪಾಪಿ ಪಾಕಿಸ್ತಾನಕ್ಕೆ ಭಾರತೀಯ ಸೇನೆಯು ತಕ್ಕ ಪಾಠ ಕಲಿಸಿದೆ ಎಂದರು.
ಈ ವೇಳೆ ಸಮಾಜಿಕ ಕಾರ್ಯರ್ತ ಉಮೇಶ್ ಮುದ್ನಾಳ ಅವರು ಮಾತನಾಡಿ, ಆಪರೇಷನ್ ಸಿಂದೂರು ಹೆಸರಿನಲ್ಲಿ ಉಗ್ರರ ದಮನ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ.ಉಗ್ರರ ನೆಲೆ ಹುಡುಕಿ ಹುಡುಕಿ ನೆಲೆ ಧ್ವಂಸ ಮಾಡಿ ಉಗ್ರರ ಸಂಹಾರ ಮಾಡಬೇಕಿದೆ.ಉಗ್ರರ ದಮನ ಮಾಡಿದಕ್ಕೆ ವಿಜಯೋತ್ಸವ ಆಚರಣೆ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ದೊಡ್ಡಯ್ಯ ಸ್ವಾಮಿ, ಚನ್ನಬಸಪ್ಪ, ಚಂದ್ರಶೇಖರ, ಶರಣಗೌಡ ಪಾಟೀಲ್ ಶರಣಗೌಡ ಪಾಟೀಲ, ರಾಮು ರಾಠೋಡ್, ಅಯ್ಯಣ್ಣ ಗೌಡ, ಮಲ್ಲಣ್ಣ ಗೌಡ, ನಾಗೇಂದ್ರ ಪಾಟೀಲ್, ಸಾಯಿಬಣ್ಣ, ಶರಣಪ್ಪ ಸೇರಿದಂತೆ ಅನೇಕರು ಇದ್ದರು.