ಬೀದರ್: ನಗರದ ಕ್ರಿಷ್ಣಾ ರೇಜೆನ್ಸಿ ಹೊಟೆಲ್‌ನಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಪಡೆ (ರಿ) ಬೀದರ ಜಿಲ್ಲಾ ಘಟಕದ ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷತೆ ವಹಿಸಿದ ಶ್ರೀ ಶಿವಶರಣಪ್ಪ ಪಾಟೀಲ, ಗೌರವಾಧ್ಯಕ್ಷರು, ಕ.ಕ. ಕಆರ್ಮಿಕ ಪಡೆ ಬೀದರ ಇವರು ಮಾತನಾಡುತ್ತಾ, ಖಾಸಗಿ ಕಂಪನಿಗಳಲ್ಲಿ ಕಾರ್ಮಿಕರಿಗೆ ವೇತನ ಹೆಚ್ಚಿಸಬೇಕು, ಪಿ.ಎಫ್., ಇ.ಎಸ್.ಐ. ಕಟ್ಟಬೇಕೆಂದು ಸಲಹೆ ನೀಡಿದರು ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸೋಮನಾಥ ಎಂ. ಪಂಚಾಳ ರವರು ಮಾತನಾಡುತ್ತಾ, ಬೀದರ ಜಿಲ್ಲೆಯಲ್ಲಿ ಖಾಸಗಿ ಕಂಪನಿಯವರು 60% ಸ್ಥಳೀಯರನ್ನು ಆದ್ಯತೆ ನೀಡಬೇಕೆಂದು ತಿಳಿಸಿದರು ಹಾಗೂ ಕಲಬುರಗಿ ಜಿಲ್ಲೆಯಲ್ಲಿದ್ದಂತಹ ಇ.ಎಸ್.ಐ. ಆಸ್ಪತ್ರೆಯಂತೆ ನಮ್ಮ ಬೀದರ ಜಿಲ್ಲೆಯಲ್ಲಿಯೂ ಕೂಡ ಇ.ಎಸ್.ಐ. ಆಸ್ಪತ್ರೆ ವ್ಯವಸ್ಥೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಎಂ.ಡಿ. ಗೌಸ್ ನಗರಸಭೆ ಅಧ್ಯಕ್ಷರು ನಗರಸಭೆ ಬೀದರ ಇವರು ಮಾತನಾಡುತ್ತಾ, ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು, ಕಾರ್ಮಿಕರ ಒಂದು ದೊಡ್ಡ ಶಕ್ತಿ ಇದೆ, ಕಾರ್ಮಿಕರ ದಿನಾಚರಣೆ ಮಾಡುವ ಸಮಯದಲ್ಲಿ ಕಾರ್ಮಿಕ ಅಧಿಕಾರಿಗಳು ಉಪಸ್ಥಿತರಿರಬೇಕೆಂದು ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ದೇವಿಂದ್ರಪ್ಪ ಸೋನಿ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಜೆ.ಡಿ.ಎಸ್. ಎಸ್.ಸಿ. ವಿಭಾಗ ಬೀದರ ಇವರು ಮಾತನಾಡುತ್ತಾ, ಬೀದರ ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳಲ್ಲಿ ಬೀದರ ಜಿಲ್ಲೆಯ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬೀದರ ಜಿಲ್ಲೆಯವರನ್ನೇ ಕಂಪನಿಗಳಲ್ಲಿ ಕೆಲಸ ನೀಡುವುದಾಗಿ ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆ.ಕೆ. ದೇವೇಂದ್ರಪ್ಪಾ ಇವರು ಮಾತನಾಡುತ್ತಾ ವ್ಯವಸ್ಥಾಪಕ ನಿರ್ದೇಶಕರು, ಶ್ರೀವೆಣ ಫರ್ಮ್ ಪ್ರೆöÊ.ಲಿ, ಬೀದರ ಹಾಗೂ ಅಧ್ಯಕ್ಷರು ಬಿ.ಡಿ.ಸಿ.ಪಿ.ಐ, ಇವರು ಮಾತನಾಡುತ್ತಾ, ಬೀದರ ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳಲ್ಲಿ ಬೀದರ ಸ್ಥಳೀಯವರನ್ನೇ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿಜಯಕುಮಾರ ಪಾಂಚಾಳ ಜಿಲ್ಲಾ ಉಪಾಧ್ಯಕ್ಷರು ಕಾರ್ಮಿಕ ಪಡೆ, ರಾಘವೇಂದ್ರ, ಸಲೋಮಿ ಡಾಂಗೆ ಹುಮನಾಬಾದ ತಾಲೂಕಾಧ್ಯಕ್ಷರು, ವಿದ್ಯಾಸಾಗರ ಬಿರಾದಾರ ಜಾಂತಿ ಉಪಾಧ್ಯಕ್ಷರು ಜೈ ಕರ್ನಾಟಕ ಜನಪರ ಸಂಘ ಬೀದರ, ಸಂತೋಷ ಪಾಟೀಲ ಚಿಟ್ಟಾ, ಧನರಾಜ ಟೈಗರ್ ಹಳ್ಳಿಖೇಡ (ಬಿ) ವಲಯ ಅಧ್ಯಕ್ಷರು ಕಾರ್ಮಿಕರ ಪಡೆ, ಸುಲೋಚನಾ ಪಂಚಾಳ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕ ಜಿಲ್ಲಾಧ್ಯಕ್ಷರು, ಕವಿತಾ ಪಂಚಾಳ ಇನ್ನೀತರರು ಉಪಸ್ಥಿತರಿದ್ದರು.