ಸರ್ಕಾರಿ ಕನ್ನಡ, ಉರ್ದು ಮಾಧ್ಯಮದ ೫೦೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
ಬೀದರ್: ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮ ಶಾಲೆಗಳ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಶಾಹೀನ್ ವಿಶೇಷ ವಿದ್ಯಾರ್ಥಿ ವೇತನ’ ಯೋಜನೆಯನ್ನು ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ರಾಜ್ಯದ ತನ್ನ ಇನ್ನೂ ೧೨ ಪದವಿಪೂರ್ವ ಕಾಲೇಜುಗಳಿಗೆ ವಿಸ್ತರಿಸಲು ತೀರ್ಮಾನಿಸಿದೆ.
ಹೊಸದಾಗಿ ವಿಜಯಪುರ ಶಾಖೆಯಲ್ಲಿ ೩೫, ಕೋಲಾರ ೨೫, ನಿಪ್ಪಾಣಿ, ಹೊಸಪೇಟೆ, ಶಿಕಾರಿಪುರ, ಬೆಳಗಾವಿ, ಹುಬ್ಬಳ್ಳಿ, ಸಿಂದಗಿ, ಮಂಗಳೂರು, ರಾಮನಗರ, ತುಮಕೂರು ತಲಾ ೨೦ ಹಾಗೂ ಜೇವರ್ಗಿ ಶಾಖೆಯಲ್ಲಿ ೧೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.
ಈ ಹಿಂದೆ ಬೀದರ್ ಮುಖ್ಯ ಶಾಖೆ, ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ, ಔರಾದ್, ಬಸವಕಲ್ಯಾಣ, ಚಿಟಗುಪ್ಪ ಹಾಗೂ ಹುಮನಾಬಾದ್ ಸೇರಿ ೯ ಶಾಖೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶೇ ೭೫ ರಷ್ಟು ಶುಲ್ಕ ವಿನಾಯಿತಿ ರೂಪದಲ್ಲಿ ೨೫೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಲಾಗಿತ್ತು. ಹೊಸ ೧೨ ಶಾಖೆಗಳ ೨೫೦ ವಿದ್ಯಾರ್ಥಿಗಳು ಸೇರಿದಂತೆ ಇದೀಗ ರಾಜ್ಯದ ಒಟ್ಟು ೨೧ ಶಾಖೆಗಳಲ್ಲಿ ೫೦೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲು ನಿರ್ಣಯಿಸಲಾಗಿದೆ ಎಂದು ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ ೯೦ಕ್ಕೂ ಅಧಿಕ ಅಂಕ ಪಡೆದ ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಮೇ ೧೫ ರ ಒಳಗೆ ಸಮೂಹದ ಆಯಾ
ಶಾಖೆ ಅಥವಾ ಆನ್‌ಲೈನ್‌ನಲ್ಲಿ(ತಿತಿತಿ.shಚಿheeಟಿ
ಮೇ ೧೮ ರಂದು ಆಯಾ ಶಾಖೆಗಳಲ್ಲಿ ಸಂದರ್ಶನದ ಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ.
ಗ್ರಾಮೀಣ ಭಾಗದ, ಅಂಗವಿಕಲ ಹಾಗೂ ಅನಾಥ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ
ನೀಡಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ
ಕೋರ್ಸ್ ಕನಸು ನನಸಾಗಿಸಲು ಶಾಹೀನ್ ಹಿಂದಿನಿAದಲೂ ನೆರವಾಗುತ್ತ ಬಂದಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಬೀದರ್ ಮುಖ್ಯ ಕಚೇರಿ ಮೊಬೈಲ್ ಸಂಖ್ಯೆ ೯೯೬೪೭೬೩೦೧೮, ಕಲಬುರಗಿ- ೭೬೬೬೦೪೮೧೭೨, ಔರಾದ್- ೯೯೧೬೧೪೯೪೨೮, ಬಸವಕಲ್ಯಾಣ-
೯೮೪೫೦೫೮೦೧೮, ಚಿಟಗುಪ್ಪ- ೮೯೭೧೨೨೨೭೮೪, ಹುಮನಾಬಾದ್- ೭೦೨೬೯೫೧೦೫೬, ರಾಯಚೂರು-
೯೮೮೦೫೩೯೯೯೯, ಯಾದಗಿರಿ- ೯೯೮೬೬೭೦೨೮೬, ಬಳ್ಳಾರಿ- ೮೫೫೩೧೬೫೫೬೨, ನಿಪ್ಪಾಣಿ- ೯೯೧೬೮೨೩೨೧೯, ಹೊಸಪೇಟೆ- ೭೦೨೬೬೦೯೪೫೧, ಶಿಕಾರಿಪುರ- ೯೮೮೦೭೦೧೧೪೩, ಬೆಳಗಾವಿ- ೭೬೧೮೭೩೪೭೫೬, ಮಂಗಳೂರು- ೭೨೦೪೦೦೯೩೦೫, ರಾಮನಗರ- ೭೩೩೭೭೫೦೮೬೪, ಕೋಲಾರ-೮೫೫೩೬೪೨೦೭೫, ತುಮಕೂರು- ೯೮೮೬೦೭೦೦೮೩, ಹುಬ್ಬಳ್ಳಿ- ೮೫೫೩೪೭೭೫೬೬, ಸಿಂದಗಿ-
೯೪೮೩೦೨೭೫೩೦ ಮತ್ತು ವಿಜಯಪುರ ಶಾಖೆಯ ಮೊಬೈಲ್ ಸಂಖ್ಯೆ ೯೬೦೬೩೩೫೩೦೨ ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ