ಬೀದರ್ : ಚಿಟಗುಪ್ಪ ಪುರಸಭೆ ಕಾರ್ಯಾಲಯದಲ್ಲಿ ಬುಧವಾರ ಬೆಳಿಗ್ಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲಾಯಿತು.
ಪುರಸಭೆ ಅಧ್ಯಕ್ಷೆ ಶ್ರೀಮತಿ ರೋಜಮ್ಮ, ಉಪಾಧ್ಯಕ್ಷ ಮೀರ್ ಮುಜಾಫರ ಪಟೇಲ್ ಮತ್ತು ಮುಖ್ಯಾಧಿಕಾರಿ ಹುಸಾಮುದ್ದಿನ್ ರವರು “ಬಸವಣ್ಣ”ನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಪೂಜೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯರಾದ ದಿಲೀಪಕುಮಾರ ಬಗ್ದಲಕರ್, ರಹೇಮಾನ ಪಾಶಾ, ನಸೀರ ಖಾನ, ವಿಶಾಲ ಬೊರಳೆ, ಮಹ್ಮದ ನಿಸಾರೋದ್ದಿನ್, ಲಕ್ಷ್ಮೀಬಾಯಿ ಗಡಮಿ, ಮಹ್ಮದ ನಸೀರ ಹಕ್ಕೀಂ ಹಾಗೂ ಪ್ರಮುಖರಾದ ಅಶೋಕ ಸ್ವಾಮಿ, ಶರಣು ಗಡಮಿ, ವೀರೇಶ ತೂಗಾಂವ್, ಸಚಿನ ಮಠಪತಿ, ಮಂಜುನಾಥ ಮತ್ತು ಪುರಸಭೆಯ ಅಧಿಕಾರಿ ಸಿಬ್ಬಂದಿಗಳಾದ ಪೂಜಾ, ಪರಿಸರ ಅಭಿಯಂತರರು, ಚಿನದಾಂದ ಪತ್ರಿ ಪ್ರ.ದ.ಸ., ಸಂತೋಷ ಬಿರಾದರ ಪ್ರ.ದ.ಸ., ರವಿಕುಮಾರ ಹಿರಿಯ ಆರೋಗ್ಯ ನಿರೀಕ್ಷಕರು, ರಾಜಕುಮಾರ, ಕರವಸೂಲಿಗಾರರು, ನಥಾನಿಯೇಲ್, ಸಚಿನ, ಅಶ್ವಿನಿ, ಮಂಜುಳಾ, ನಾಗೇಂದ್ರ ಬಾಗಿ, ರವಿ ಶಾಖಾ, ಬಕ್ಕಪ್ಪಾ, ಭೀಮಶಾ ಮತ್ತು ಇತರೆ ಸಿಬ್ಬಂದಿಗಳು ಜಯಂತಿಯಲ್ಲಿ ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.