ಬೀದರ್: ಆದಿ ಶಂಕರಾಚಾರ್ಯರ ಜಯಂತಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಶಕೀಲ್ ಅಹಮ್ಮದ್ ಹಾಗೂ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರೂ ಆದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಕುಲಕರ್ಣಿ ಹುಮನಾಬಾದ್ ಅವರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು.
ಶಾಮಕಾಂತ ಕುಲಕರ್ಣಿ ಅವರು ಶಂಕರಾಚಾರ್ಯರ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂದೆ, ಮುಖಂಡರಾದ ಮನೋಹರ ದಂಡೆ, ರಾಜೇಶ ಕುಲಕರ್ಣಿ, ಸೂರ್ಯಕಾಂತ ಕುಲಕರ್ಣಿ, ಸುಧೀಂದ್ರ ಕುಲಕರ್ಣಿ, ಪ್ರಶಾಂತ ಜ್ಯಾಂತಿಕರ್, ಪ್ರಭಾಕರ ಕುಲಕರ್ಣಿ, ಅನಿಲ್ ಚಿಕ್ಕಮಣೂರ, ಮಾಖರ್ಂಡ ಕುಲಕರ್ಣಿ, ರಾಜೇಂದ್ರ ಕುಲಕರ್ಣಿ, ಗಿರೀಶ್ ಕುಲಕರ್ಣಿ, ಸತ್ಯದೀಪ ಮಂಗೋಲಿ, ಶ್ರೀಕಾಂತ ಕುಲಕರ್ಣಿ, ಪುರುಷೋತ್ತಮ ಪುರೋಹಿತ, ದತ್ತಾತ್ರೇಯ ಕುಲಕರ್ಣಿ, ಕಿಶೋರ ಕುಲಕರ್ಣಿ, ರಮೇಶ ಮೀನಕೇರಾ ಮತ್ತಿತರರು ಇದ್ದರು.