ಬೀದರ್ : ಬೀದರ ನಗರದ ಕಮಠಾಣ ರಸ್ತೆಯಲ್ಲಿರುವ ಚಿದ್ರಿಯ ಶ್ರೀ ಬುತ್ತಿ ಬಸವಣ್ಣ ದೇವಾಲಯದ 25ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಎಪ್ರಿಲ್ 27ರಿಂದ ಪ್ರಾರಂಭಗೊಂಡ ಜಾತ್ರೆಯಲ್ಲಿ ಶ್ರೀ ಬಸವಲಿಂಗ ಅವಧೂತರು , ಡಾ, ರಾಜಶೇಖರ ಸ್ವಾಮಿ ಗೋರ್ಟಾ, ಪೂಜ್ಯ ಶ್ರೀ ಮಾತೇ ಬಸವಾಂಜಲಿ ತಾಯಿ ಅವರಿಂದ ಪ್ರವಚನ ಕಾರ್ಯಕ್ರಮ ನಡೆದವು. 5 ದಿವಸಗಳ ನಿರಂತರ ಮಹಾ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ.
ಸುಮಾರು 1200 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಬುತ್ತಿ ಬಸವಣ್ಣ ದೇವಾಲಯದಲ್ಲಿ 12ನೇ ಶತಮಾನದ ಶಿವಶರಣ ಮೇದಾರ ಕೇತಯ್ಯಾ ಆಗಮಿಸಿ ಈ ಮಂದಿರದಲ್ಲಿ ಬುತ್ತಿ ಬಿಚ್ಚಿಕೊಂಡು ಪ್ರಸಾದ ಸ್ವೀಕರಿಸಿ ಇಲ್ಲಿರುವ ಪವಿತ್ರ ತೀರ್ಥಕುಂಡದಲ್ಲಿ ಜಲಾಮೃತ ಸವಿದು ವಿಶ್ರಾಂತಿ ಪಡೆದು ಬಸವಕಲ್ಯಾಣಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದರು. ಅಲ್ಲಿ ತಾವು ತಯಾರಿಸಿರುವ ರೊಟ್ಟೆ ಬುಟ್ಟಿ, ತೊರಾಬುಟ್ಟಿ, ಮೊರಾ ಇತ್ಯಾದಿ ಬಿದರಿನ ವಸ್ತುಗಳನ್ನು ಮಾರಾಟ ಮಾಡಿ ಅನುಭವ ಮಂಟಪಕ್ಕೆ ಹೋಗಿ ಅನುಭವ ಕೇಳಿ ಬೀದರಿಗೆ ವಾಪಸ್ಸಾಗುತ್ತಿದ್ದರು. ಕಾಶಿ ಜಗದ್ಗುರುಗಳು ಮಂದಿರದ ಆವರಣದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ ಆರ್ಶಿವಚನ ಮಾಡಿದರು.
ಚಿದ್ರಿಯಲ್ಲಿ ಶರಣರ ಸಮಾಧಿ ಇದೆ. ಅಲ್ಲಿಂದಲೇ ಇಂದು ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಬುತ್ತಿ ಬಸವಣ್ಣ ಮಂದಿರದ ವರೆಗೆ ನಡೆಯಿತು. ನಂತರ ಅಗ್ನಿ ಪ್ರವೇಶ , ಅಗ್ಗಿ ತುಳಿಯುವಿಕೆ ಜರುಗಿತು. ಭಕ್ತಾದಿಗಳಿಗೆ ಮಹಾ ಪ್ರಸಾದ ವಿತರಣೆ ಮಾಡಲಾಯಿತು. ಮೇ.1 ರಂದು ರಾತ್ರಿ ರಥೋತ್ಸವ ಕಾರ್ಯಕ್ರಮ , ಮೇ 2 ರಂದು ಬೆಳಿಗ್ಗೆ ಜಂಗಿ ಕುಸ್ತಿ ನಡೆಯಲಿದೆ ಎಂದು ಬುತ್ತಿ ಬಸವಣ್ಣ ದೇವಾಲಯದ ಟ್ರಸ್ಟ ಅಧ್ಯಕ್ಷ ರಮೇಶ ಮಾಶೆಟ್ಟಿ ಸಂಗಶೆಟ್ಟಿ ಬಿರಾದಾರ, ಸಂದೀಪ ಮಾಶೆಟ್ಟಿ, ತುಕಾರಾಮ ಕರಾಟೆ ಚಿಮಕೋಡೆ, ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೊಮ್ಮಾ , ಮಂಜು ಪಾಟೀಲ, ಸೋಮಶೇಖರ ಬಿರಾದಾರ ಚಿದ್ರಿ, ರಾಜಶೇಖರ ಬಿರಾದಾರ ಚಿದ್ರಿ. ರಾಜಕುಮಾರ ಬಿರಾದಾರ, ಅಮೃತ ಬಿರಾದಾರ, ಜಗನ್ನಾಥ ಪಾಟೀಲ ಸೋಮಶೇಖರ ಪಾಟೀಲ ಕಾಡವಾದ ಸೇರಿದಂತೆ ಅನೇಕರು ಭಾಗವಹಿಸಿದ್ದರು.