ಬೀದರ್ : ಜಿಲ್ಲಾ ಭೋವಿ ವಡ್ಡರ ಸಮಾಜ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಸಂತೋಷ ಎಣಕೂರೆ ಆಯ್ಕೆಯಾಗಿದ್ದಾರೆ.
ಇತ್ತಿಚೆಗೆ ಬೀದರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ಕೆಳಕಂಡ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಚಂದ್ರಕಾಂತ ಸಂಪಂಗೆ, ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರಾಬಾಯಿ ಪೂಜಾರಿ, ಸಹ ಕಾರ್ಯದರ್ಶಿಯಾಗಿ ತುಕಾರಾಮ ಏಣಕುರೆ, ಖಜಾಂಚಿಯಾಗಿ ಶಾಂತರಾಮ ರಾಜೋಳೆ, ಸದಸ್ಯರುಗಳಾಗಿ ಅನೀಲ ಒಡೇಯರ್, ಲಕ್ಷ್ಮಣ ಒಡೇಯರ್, ಅವಿನಾಶ ಪವಾರ, ಅಭಿಷೇಕ ವಾಡೇಕರ್, ಬಸವರಾಜ ಪವಾರ, ಮಾರುತಿ ಎಣಕುರೆ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂತೋಷ ಎಣಕುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ