Saturday, May 24, 2025
Homeಜಿಲ್ಲೆವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ನಗರದಲ್ಲಿ ಜಗಜಾಗೃತಿ ರ‍್ಯಾಲಿ

ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ನಗರದಲ್ಲಿ ಜಗಜಾಗೃತಿ ರ‍್ಯಾಲಿ

ಬೀದರ್ :- ಜಿಲ್ಲೆಯಲ್ಲಿ ಅಲಲ್ಲಿ ಮಳೆಯಾಗುತ್ತಿರುವುದರಿಂದ ಹಾಗೂ ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುತ್ತದೆ ನಾಗರೀಕರು ಮಲೇರಿಯ ರೋಗವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮತ್ತು ಸೊಳ್ಳೆ ಕಡಿತದಿಂದ ರಕ್ಷಣೆ, ಸೊಳ್ಳೆ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಂಡು ಮಲೇರಿಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಧ್ಯಾನೇಶ್ವರ ನಿರಗುಡೆ ಮನವಿ ಮಾಡಿದರು.
ಅವರು ಮಂಗಳವಾರದAದು 25ನೇ ಏಪ್ರಿಲ್ 2025 ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ರ‍್ಯಾಲಿಗೆ ಬಾವೂಟ ತೋರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಮಲೇರಿಯಾ ರೋಗವು ಇಳಿಮುಖವಾಗಿದ್ದು, ಕಳೆದ 2024ನೇ ಸಾಲಿನಲ್ಲಿ ಕೇವಲ 04 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಅವು ಹೊರರಾಜ್ಯಗಳಿಂದ 04 ಜನ ವಲಸಿಗರಿಗೆ ಮಲೇರಿಯಾ ಧೃಡಪಟ್ಟಿದ್ದು, ಎಲ್ಲಾ ಮಲೇರಿಯಾ ಪ್ರಕರಣಗಳಿಗೆ ತೀವ್ರಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಲಾಗಿದೆ.
ಜಿಲ್ಲೆಯಲ್ಲಿ ಮಲೇರಿಯಾದಿಂದ ಇಲ್ಲಿಯವರೆಗೆ ಯಾವುದೇ ತರಹದ ಸಾವು ಸಂಭವಿಸಿರುವುದಿಲ್ಲ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಿದಲ್ಲಿ ಸೊಳ್ಳೆಗಳ ಬೆಳವಣಿಗೆ ನಿಯಂತ್ರಿಸಿ ಮಲೇರಿಯ ಹಾಗೂ ಇತರ ಸೊಳ್ಳೆ ಜನಿತ ರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ.ರಾಜಶೇಖರ್ ಪಾಟೀಲ ಮಾತನಾಡಿ, ಜಿಲ್ಲೆಯಾದ್ಯಂತ ತಾಲ್ಲೂಕು ಮಟ್ಟದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಗ್ರಾಮ ಪಂಚಾಯತ, ಶಾಲಾ-ಕಾಲೇಜುಗಳುಗಳಲ್ಲಿ ಮರು ಹೂಡಿಕೆ ಮಾಡಿ, ಮರು ಚಿಂತಿಸಿ, ಮರು ಚೇತನಗೊಳಿಸಿ” ಎಂಬ ಘೋಷಣೆಯೊಂದಿಗೆ ವಿಶ್ವ ಮಲೇರಿಯ ದಿನ ಜನಜಾಗೃತಿಗಾಗಿ ಜಾಥಾ ಮತ್ತು ಸಭೆಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಮಲೇರಿಯಾ ಹರಡದಂತೆ ಜ್ವರ ಸಮೀಕ್ಷೆ ಹಾಗೂ ಸೊಳ್ಳೆ ತಾಣಗಳ ಸಮೀಕ್ಷೆ ಕಾರ್ಯವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಸತತವಾಗಿ ಒಂದು ವಾರಗಳವರೆಗೆ ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಯಿಟ್ಟು ತನ್ನ ಸಂತಾನವನ್ನು ಅಭಿವೃದ್ಧಿಪಡಿಸಿ ಮಲೇರಿಯಾ, ಡೇಂಗ್ಯೂ, ಚಿಕ್ಕುಂಗುನ್ಯಾ ಹರಡಲು ಕಾರಣವಾಗುತ್ತದೆ ಸಾರ್ವಜನಿಕರು ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು. ಮಲೇರಿಯಾ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕ್ಕಂಗುನ್ಯಾ, ಆನೆಕಾಲು ರೋಗಗಳನ್ನು ಹರಡಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಂಡು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.ರ‍್ಯಾಲಿಯು ನಗರದ ಅಂಬೇಡ್ಕರ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ಹಳೆ ಬಸ್ ನಿಲ್ದಾಣ ಮಾರ್ಗದ ಮುಖಾಂತರ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ಆವರಣದಲ್ಲಿ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ರಾಜಶೇಖರ್ ಪಾಟೀಲ್ ಡಾ.ಕಿರಣ ಪಾಟೀಲ್, ಡಾ.ಅನೀಲಕುಮಾರ ಚಿಂತಾಮಣಿ, ಡಾ.ದಿಲೀಪ ಡೊಂಗ್ರೆ, ಡಾ.ಸಂಗಾರೆಡ್ಡಿ .ಕೆ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಾದ ಮೌನದಾಸ, ಸಂಗಪ್ಪಾ ಕಾಂಬ್ಳೆ, ಅನೀತಾ, ಸತೀಷಕುಮಾರ ಪಾಂಡೆ, ವೀರಶಟ್ಟಿ ಸಿ, ಎಂ.ಅಬುಬಕರ್, ಬಾಬು ಪ್ರೀಯಾ, ಹಾದಿ ತಬ್ರೇಜ್, ದೇವಿದಾಸ, ಮುಹ್ಮದ್ ರಫೀಯುದ್ದಿನ್, ಗೋರಖನಾಥ್, ಜಾವೇದ್ ಕಲ್ಯಾಣಕರ್, ದೇವಿದಾಸ, ಬಸವರಾಜ ಸೇರಿದಂತೆ ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮತ್ತು ಜಿಲ್ಲಾ ಮಲೇರಿಯ ಕಛೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
******
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3