ಬೀದರ್ : ಇಂದು ಮಧ್ಯಾಹ್ನ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ. ಖಂಡ್ರೆ ಅವರು ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ.) ಯೋಜನೆಯಡಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣ್ಮಾತಕ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿದರು.
ಸ್ಥಳ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಸಚಿವರು ಹೊನ್ನಿಕೆರಿ ಪರಿಸರ ಪ್ರವಾಸೋದ್ಯಮ ಯೋಜನೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿದೆ. ಈ ಪ್ರವಾಸೋದ್ಯಮ ಸಾರ್ವಜನಿಕರಿಗೆ ಕೈ ಬಿಸಿ ಕರೆಯುವಂತಾಗಬೇಕು ಎಂದು ಹೇಳಿದರು.

ಈ ಭಾಗದಲ್ಲಿ ಅರಣ್ಯ ಪ್ರದೇಶದ ಜೊತೆಗೆ ಪ್ರವಾಸೋದ್ಯಮ ಬೆಳೆಯುವ ನಿಟ್ಟಿನಲ್ಲಿ ಒಂದು ಕ್ರಿಯೆ ಯೋಜನೆ ತಯಾರು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ, ಅದರಂತೆ ಅವರು ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಹೊನ್ನಿಕೆರಿ ಪರಿಸರ ಪ್ರವಾಸೋದ್ಯಮ ಯೋಜನೆಯ ಕ್ರಿಯೆ ಯೋಜನೆಯನ್ನು ತಯಾರು ಮಾಡಿದ್ದಾರೆ. ಅದರಂತೆ ಇವಾಗ ಕೆ.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ಸುಮಾರು 13 ಕೋಟಿ 50 ಲಕ್ಷ ರೂ. ಈಗಾಗಲೇ ಮಂಜೂರಾಗಿದೆ ಎಂದು ತಿಳಿಸಿದರು.
ಈ ಕಾಮಗಾರಿಯಿಂದ ಸ್ಥಳೀಯರಿಗೆ ಅನೇಕ ಲಾಭ ಆಗಲಿದೆ. ಹಾಗೆಯೇ ವಿದ್ಯಾರ್ಥಿ, ಕೂಲಿ ಕಾರ್ಮಿಕ, ಕೈಗಾರಿಕಾ ಉದ್ಯಮಿ ಹೀಗೆ ಅನೇಕ ವರ್ಗದವರಿಗೆ ಟ್ರಕ್ಕಿಂಗ್ ಪಾತ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಈ ಯೋಜನೆ ಅಡಿಯಲ್ಲಿ ಪ್ರವಾಸಿಗರಿಗಾಗಿ ಕಲ್ಯಾಣಿಗಳ ಪುನರ್ ಚೇತನ, ದೋಣಿಯಲಿ ತರಗತಿ, ನಕ್ಷತ್ರ ವೀಕ್ಷಣೆ, ಕಾವಲು ಗೋಪುರ, ಮಾಹಿತಿ ಕೇಂದ್ರ, ಝರಿಗಳ ಪುನಶ್ಚೇತನ, ಶಿಬಿರದ ವಸತಿಗಳು ಸೇರಿದಂತೆ 5 ಕೀ. ಮೀ ಸೈಕ್ಲಿಂಗ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಭಾಗೀಯ ಅರಣ್ಯ ಅಧಿಕಾರಿಗಳಾದ ವಾನತಿ ಎಂ.ಎಂ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕನಕಟ್ಟಾ, ವಲಯ ಅರಣ್ಯಧಿಕಾರಿ ಮಹೇಂದ್ರಕುಮಾರ್ ಮೋರೆ, ವಿನಯಕುಮಾರ್ ಮಾಳಗೆ, ಮಳಚಾಪುರ್ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಕುಮಾರ್ ಪಾಟೀಲ್, ಕಪಲಾಪುರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶಕುಮಾರ್, ವಿಜಯಕುಮಾರ್ ಜಾಧವ್, ಶ್ರೀಕಾಂತ್ ರಾಠೋಡ್ ಹಾಗೂ ಸಂತೋಷ್ ಸುತಾರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
******