ಬೀದರ್: ತೆಲಂಗಾಣ ಬೋರ್ಡ್ ಆಫ್ ಇಂಟರ್‍ಮಿಡಿಯೇಟ್ ಎಜುಕೇಷನ್ ನಡೆಸಿದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಚನ್ನಬಸವ ಮಲ್ಲಿಕಾರ್ಜುನ ಮರಕಲೆ ಶೇ 99.07 ರಷ್ಟು ಅಂಕ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.
ಹೈದರಾಬಾದ್‍ನ ಮಾದಾಪುರದ ಶ್ರೀ ಚೈತನ್ಯ ಕಾಲೇಜಿನ ವಿದ್ಯಾರ್ಥಿಯಾಗಿರುವ ಚನ್ನಬಸವ ಗಣಿತ, ಭೌತವಿಜ್ಞಾನ ಹಾಗೂ ರಸಾಯನ ವಿಜ್ಞಾನದಲ್ಲಿ ಗರಿಷ್ಠ ಅಂಕ ಪಡೆದಿದ್ದಾರೆ. ಸಂಸ್ಕøತದಲ್ಲಿ ಶೇ 98 ಹಾಗೂ ಇಂಗ್ಲಿಷ್‍ನಲ್ಲಿ ಶೇ 97 ಅಂಕ ಗಳಿಸಿದ್ದಾರೆ.
ಚನ್ನಬಸವ 1 ರಿಂದ 10ನೇ ವರೆಗೆ ಬೀದರ್‍ನ ಜ್ಞಾನಸುಧಾದಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರ ತಂದೆ ಮಲ್ಲಿಕಾರ್ಜುನ ಮರಕಲೆ ಹಿರಿಯ ಪತ್ರಕರ್ತರಾಗಿದ್ದಾರೆ.
ಸನ್ಮಾನ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಕ್ಕಾಗಿ ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಶಾಲು ಹೊದಿಸಿ ಸತ್ಕರಿಸಿದರು. ಬೀದರ್‍ನಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಸನ್ಮಾನಿಸಿ ಪ್ರೋತ್ಸಾಹಿಸಿದರು.
ಮಹಾನಂದ ರವಿ ಪಾಟೀಲ, ಶ್ರೀಕಾಂತ, ತಾಯಿ ಸವಿತಾ, ರತ್ನಮ್ಮ ಮತ್ತಿತರರು ಇದ್ದರು.