ಬೀದರ್ : ಕರ್ನಾಟಕ ಜಾನಪದ ಅಕಾಡೆಮಿ ಕೇಂದ್ರ ಕಛೇರಿಯಲ್ಲಿ ಇತ್ತಿಚೆಗೆ ನಡೆದ ಸಭೆಯಲ್ಲಿ ಸರ್ವಸದಸ್ಯರ ನಿರ್ಣಯದಂತೆ 2025-2026ನೇ ಸಾಲಿನ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ರಜಿಸ್ಟರ್ ನಮ್ರತಾ ಅವರು ತಿಳಿಸಿದ್ದಾರೆ.
ಆದರಿಂದ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಹಿರಿಯ ಕಲಾವಿದ ಶಂಭುಲಿಂಗ ವಾಲದೊಡ್ಡಿ, ಪ್ರಮುಖರಾದ ಸುನೀಲ ಕಡ್ಡೆ, ದೇವದಾಸ ಚಿಮಕೋಡೆ, ಪತ್ರಕರ್ತ ಸುನೀಲ ಭಾವಿಕಟ್ಟಿ, ರವಿ ಕಾಂಬಳೆ, ಮಾರುತಿ ಮಾಸ್ಟರ್, ಮಾರುತಿ ಏಣಕೂರೆ, ಚಂದ್ರಕಾಂತ ಹಳ್ಳಿಖೇಡ್ಕರ್, ಸಂತೋಷ ಏಣಕೂರೆ, ಅಂಬರೀಷ ಮಲ್ಲೇಶಿ, ಸೇರಿದಂತೆ ಜಿಲ್ಲೆಯ ಕಲಾವಿದರು, ಸಾಹಿತಿಗಳು, ಪ್ರಗತಿಪರ ಚಿಂತಕರು ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.