Saturday, May 24, 2025
Homeಜಿಲ್ಲೆ೨೬ರಿಂದ ಫುಟ್ಬಾಲ್ ಚಾಂಪಿಯನ್ಶಿಪ್ ರಾಜ್ಯ ಮಟ್ಟದ ಸ್ಪರ್ಧೆ: ವಿ.ಎಂ ಜ್ಯೋತಿ

೨೬ರಿಂದ ಫುಟ್ಬಾಲ್ ಚಾಂಪಿಯನ್ಶಿಪ್ ರಾಜ್ಯ ಮಟ್ಟದ ಸ್ಪರ್ಧೆ: ವಿ.ಎಂ ಜ್ಯೋತಿ

ಬೀದರ್: ಬುದ್ಧ ಭೂಷಣ ಸ್ಪೋರ್ಟ್ಸ ಅಕೆಡಮಿ ಹಾರೂರಗೇರಿ ಬೀದರ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರರವರ ೧೩೪ನೇ ಜಯಂತೋತ್ಸವದ ಪ್ರಯುಕ್ತ ಫೂಟ್‌ಬಾಲ್ ಚಾಂಪಿಯನ್‌ಶಿಪ್ ರಾಜ್ಯ ಮಟ್ಟದ ಸ್ಪರ್ಧೆಯನ್ನು ಏ:೨೬ ಬೆಳಿಗ್ಗೆ ೭ ಗಂಟೆಯಿಂದ ಏ.೨೮ ಸಾಯಂಕಾಲ ೫ ಗಂಟೆಯ ವರೆಗೆ ಮೂರು ದಿನಗಳ ಕಾಲ ನಗರದ ನೇಹರು ಕ್ರೀಡಾಂಗಣ ಬೀದರದಲ್ಲಿ ಆಯೋಜಿಸಲಾಗಿದೆ ಎಂದು ನಿವೃತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಎಂ ಜ್ಯೋತಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಇಂದಿನ ಯುವಜನರು ಮೊಬೈಲ್‌ನಲ್ಲಿರುವ ವಾಟ್ಸಾಪ್, ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಹಾಗೂ ಇತರೆ ವಾಟ್ಸಪ್ ಗೇಮಗಳಿಗೆ ಮಾರು ಹೋಗಿ ದೈಹಿಕ ಚಟುವಟಿಕೆಗಳಿಂದ ವಿಮುಖರಾಗುತ್ತಿರುವರು. ಯುವಜನರಲ್ಲಿ ಕುಗ್ಗಿರುವ ದೈಹಿಕ ಸಾಮರ್ಥ್ಯವನ್ನು ಬಲಪಡಿಸಲು ಹಾಗೂ ಬೀದರ್ನಲ್ಲಿ ಫುಟ್ಬಾಲ್ ಕ್ರೀಡೆಯನ್ನಉ ಹೆಚ್ಚಿನ ರೀತಿಯಲ್ಲಿ ಪ್ರಚುರಪಡಿಸಲು ಈ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಧಾರವಾಡ ಹಾಗೂ ಕಲಬುರ್ಗಿಯಿಂದ ನಾಲ್ಕು, ಹೈದರಾಬಾದ್‌ನಿಂದ ನಾಲ್ಕು ತಂಡಗಳು, ಬೀದರ್ ನಿಂದ ಎರಡು ತಂಡಗಳು, ಪಕ್ಕದ ಮಹಾರಾಷ್ಟ್ರದ ಪರಭಣಿಯಿಂದ ಒಂದು ತಂಡ ಬರುವ ನಿರೀಕ್ಷೆಯಿದ್ದು ಈಗಾಗಲೇ ೧೦ ತಂಡಗಳು ನೊಂದಣಿ ಮಾಡಿಕೊಂಡಿರುತ್ತವೆ. ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡಕ್ಕೆ ನಗದು ೨೫,೦೦೦ ಬಹುಮಾನ, ಟ್ರೋಫಿ, ಪದಕ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು. ದ್ವಿತೀಯ ಬಹುಮಾನವಾಗಿ ರು.೧೫,೦೦೦ ನಗದು ಬಹುಮಾನ, ಪ್ರಶಸ್ತಿ ಫಲಕ, ಟ್ರೋಫಿ, ಮೆಡಲ್‌ಗಳನ್ನು ನೀಡಿ ಗೌರವಿಸಲಾಗುವುದು. ಅದೇ ರೀತಿ ಮ್ಯಾನ್ ಆಫ್ ದಿ ಮ್ಯಾಚ್, ಬೆಸ್ಟ್ ಗೋಲ್ಡ್ ಕೀಪರ್, ಬೆಡ್ಸ್ ಸ್ಕೋರರ್ ಇತ್ಯಾದಿ ವಯಕ್ತಿಕ ಸ್ಪರ್ಧಾಳುಗಳಿಗೂ ಪದಕ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ ಎಂದರು.

ಕ್ರೀಡಾಕೂಟದ ಉದ್ಘಾಟನೆಯನ್ನು ೨೬ರಂದು ಅರಣ್ಯ, ಪರಿಸರ, ಮತ್ತು ಜೀವಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆಯವರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಆಗಮಿಸುತ್ತಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್ ಉಪಸ್ಥಿತರಿರುವರು.

ಆದ ಕಾರಣ ಈ ಕ್ರೀಡಾಕೂಟದಲ್ಲಿ ಕ್ರೀಡಾಆಸ್ತಕರು, ಸಮಾಜದ ಬುದ್ದಿಜೀವಿಗಳು, ಚಿಂತಕರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಪಟುಗಳಿಗೆ ಹುರಿದುಂಬಿಸಿ ಕ್ರಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು. 

ದಲಿತ ಮುಖಂಡರಾದ ಮಾರೂತಿ ಬೌದ್ದೆ, ಅನಿಲಕುಮಾರ ಬೆಲ್ದಾರ್, ರಮೇಶ ಡಾಕುಳಗಿ ಮಾತನಾಡಿದರು. ರಾಷ್ಟç ಮಟ್ಟದ ಫುಟ್ಬಾಲ್ ಕ್ರೀಡಾಪಟು ವಸಂತ, ರಾಜ್ಯ ಮಟ್ಟದ ಫುಟ್ಬಾಲ್ ಕ್ರೀಡಾಪಟು ಶಾಮುವೆಲ್, ಮೌಲಪ್ಪ ಮಾಳಗೆ, ತಮ್ಮಣ್ಣ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3