ಬೀದರ್: ಇಂಟರನ್ಯಾಶನಲ್ ಹ್ಯೂಮನ್ ಡೆವೆಲಪ್‌ಮೆಂಟ್ ಕೌನ್ಸಿಲ್ ವತಿಯಿಂದ ಪ್ರತೀ ವರ್ಷ ಸಾಧಕರಿಗೆ ಕೊಡಮಾಡಲ್ಪಡುವ “ಅಂತರಾಷ್ಟಿಯ ಗ್ಲೋಬಲ್ ಐಕಾನ್” ಪ್ರಶಸ್ತಿಯನ್ನು ಈ ಬಾರಿ ಚಿಮಕೋಡ ಗುರುಕೃಪಾ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಮತ್ತು ರಾಷ್ಟçಮಟ್ಟದ ಸಂಘಟಕಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಹಶಿಕ್ಷಕಿ ಡಾ. ಶಾಂತಾಬಾಯಿ ಎಸ್ ಬಿರಾದಾರ ಅವರಿಗೆ ಲಭಿಸಿದೆ. ಪುಣೆಯ ಜವಾಹರಲಾಲ್ ನೆಹರೂ ಮೆಮೊರಿಯಲ್ ಹಾಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿ ಒದಗಿ ಬಂದಿದ್ದಕ್ಕೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.