ಬೀದರ್: ಬೀದರ ಜಿಲ್ಲೆ ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಕಲಾವಿದೆ ಕು. ವೈಷ್ಣವಿ ಅವರಿಗೆ ಸರಸ್ವತಿ ಸಾಧಕಸಿರಿ ರಾಷ್ಟಪ್ರಶಸ್ತಿ ಒದಗಿ ಬಂದಿದೆ. ದಾವಣಗೆರೆಯ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ ಈ ಪ್ರಶಸ್ತಿಯನ್ನು ಏ. 27ರಂದು ಭಾನುವಾರ ದಾವಣಗೆರೆಯ ಚನ್ನಗಿರಿ ವೀರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ನಾಗೇಶ, ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಮತ್ತು ಕಾರ್ಯದರ್ಶಿ ರಾಘವೇಂದ್ರ ಶೆಣೈ ಆಯ್ಕೆಪ್ರತಿ ಕಳುಹಿಸಿದ್ದಾರೆ.
