ಬೀದರ್: ಈ ತಿಂಗಳ 26ರಂದು ನಗರದ ಪೂಜ್ಯ ಡಾ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಮಧ್ಯಾಹ್ನ 12 ಗಂಟೆಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಭಾರತ ರತ್ನ ಬಾಬಾ ಸಾಹೇಬ್ ಭೀಮರಾವ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ಮತ್ತು ಅಭಿನಂದನಾ ಸಮಾರಂಭ ಜರುಗಲಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಮಾಳಗೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಅಂದು ನಡೆಯಲಿರುವ ಸಮಾರಂಭವನ್ನು ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪೌರಾಡಳಿತ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಶಾಸಕರಾದ ಬಿ ಕೆ ಹರಿಪ್ರಸಾದ್ ಹಾಗೂ ಸಂಸದ ಸಾಗರ್ ಖಂಡ್ರೆ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ತಾನಾಜಿ ಸಗರ್ ವಹಿಸುವರು. ಅತಿಥಿಗಳಾಗಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೊಡೆ, ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಮುನ್ನಾನ ಸೇಟ್, ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್, ಹಿಂದುಳಿದ ಜಾತಿಗಳ ಒಕ್ಕೂಟ ಕಲಬುರ್ಗಿ ಅಧ್ಯಕ್ಷ ಮಹದೇವ ವಕೀಲ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ ಢಾಕೊಳಗಿ ಭಾಗವಹಿಸುವರು.

ಜನವಾರಿ ಮಹಿಳಾ ಸಂಘದ ಅಧ್ಯಕ್ಷ ಪ್ರೊ ವಿಜಯಲಕ್ಷ್ಮಿ ಗಡ್ಡೆ, ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳುವರು. ತಾನು ಪ್ರಾಸ್ತಾವಿಕ ನುಡಿ ನುಡಿಯುದಾಗಿ ಮಾಳಗೆ ತಿಳಿಸಿದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಈ ಸಂದರ್ಭದಲ್ಲಿ ಮಾತನಾಡಿ, ಹಿಂದುಳಿದ ಜಾತಿಗಳ ಒಕ್ಕೂಟದ ಹಿರಿಯ ಮುಖಂಡ ಗಂಧರ್ವ ಸೇನಾ, ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಬಾಬುರಾವ್ ಪಾಸ್ವಾನ್, ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ಬಂಜಾರಾ ಸಮಾಜದ ಅಧ್ಯಕ್ಷ ಗೋವರ್ಧನ್ ರಾಥೋಡ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಹೇಶ ಪಾಂಚಾಳ್, ಕೋರವಾ ಸಮಾಜದ ಅಧ್ಯಕ್ಷ ರಘುನಾಥ್ ಮರ್ಕಲ್, ಗೊಂಡಪರ ಸಂಘಟನೆಗಳ ಒಕ್ಕೂಟದ ಮುಖಂಡ ತುಕಾರಾಮ ಚಿಮಕೋಡೆ, ಗಾಣಿಗ ಸಮಾಜದ ಅಧ್ಯಕ್ಷ ಬಸವರಾಜ ಚಿಕ್ಲೆ, ಟೋಕ್ರಿ ಕೋಳಿ ಸಮಾಜದ ಉಪಾಧ್ಯಕ್ಷ ಸುನಿಲಕುಮಾರ ಕಾಶೆಂಪುರ, ಹಡಪದ ಸಮಾಜದ ಅಧ್ಯಕ್ಷ ಪ್ರಭುರಾವ ತರನಳ್ಳಿ ವಕೀಲರು, ಮಡಿವಾಳ ಸಮಾಜದ ಧನರಾಜ ಮಡಿವಾಳ, ಕರ್ನಾಟಕ ಮರಾಠ ಸೇವಾ ಸಂಘದ ಅಧ್ಯಕ್ಷ ಶಂಕರರಾವ್ ಬಿರಾದಾರ, ಪದ್ಮಶಾಲಿ ಸಮಾಜದ ಅಧ್ಯಕ್ಷ ಮೋಹನ್ ಭಾಚಾ, ಖಾಟಿಕ ಸಮಾಜದ ಅಧ್ಯಕ್ಷ ಸಾಯಿಕುಮಾರ್, ಸಕುಳ ಸಾಳಿ ಸಮಾಜದ ಮುಖಂಡ ಯೋಗೇಶ, ಡೋಹರ್ ಕಕ್ಕಯ್ಯ ಸಮಾಜದ ಪ್ರಧಾನ ಕಾರ್ಯದರ್ಶಿ ರಮೇಶ ಪೋಳ್, ಭೋವಿ ವಡ್ಡರ ಸಮಾಜದ ಅಧ್ಯಕ್ಷ ಮಾಣಿಕರಾವ್ ವಾಡೇಕರ್, ಮೇದರ ಕೇತಯ್ಯ ಸಮಾಜದ ಅಧ್ಯಕ್ಷ ಸುರೇಶ್ ಮೇಧಾ, ಹೇಳವ ಸಮಾಜದ ಅಧ್ಯಕ್ಷ ಸುಭಾಷ್ ಹಳ್ಳಿಖೇಡ, ಹರಳಯ್ಯ ಸಮಾಜದ ಅಧ್ಯಕ್ಷ ಸುಭಾಷ್ ಹಮಿಲಪುರೆ, ಭೋಯಿ ಸಮಾಜದ ಅಧ್ಯಕ್ಷ ಶೈಲೇಂದ್ರ ಹಿವಾರೆ, ಭಾವುಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಸಂಜೀವಕುಮಾರ ಘನಾತೆ, ಹಟಕರ್ ಸಮಾಜದ ಅಧ್ಯಕ್ಷ ಶರಣಪ್ಪ ಹಾವಗೊಂಡೆ ಗೊಲ್ಲ ಸಮಾಜದ ಅಧ್ಯಕ್ಷ ಹೇಮಂತ ಯಾದವ್, ಈಡಿಗ ಸಮಾಜದ ಪ್ರಧಾನ ಕಾರ್ಯದರ್ಶಿ ಸುಭಾಷ ಚೌದ್ರಿ ಹಾಗೂ ಇತರರು ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಬೇಲ್ದಾರ್ ವಿವರಿಸಿದರು.
ಮೂವರಿಗೆ ಅಭಿನಂದನೆ:- ಇದೇ ಸಂದರ್ಭದಲ್ಲಿ ಸತಿಪತಿಗಳೊಂದಾದ ಭಕ್ತಿ ಹಿತವಪ್ಪದು ಶಿವಂಗೆ ಎನ್ನುವಂತೆ ಪತಿಯ ಸೇವೆಯಲ್ಲಿ ಕೈಜೋಡಿಸಿ ತನ್ನ ಕರ್ತವ್ಯದಲ್ಲಿದ್ದಾಗ ಅನೇಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ನಿವೃತ್ತ ಶಿಕ್ಷಕಿ ಶಶಿಕಲಾ ಮಾಳಗೆ, ಗ್ರಾಮೀಣ ಭಾಗದಲ್ಲಿ ಉಚಿತವಾಗಿ ಆರೋಗ್ಯ ಸೇವೆ ನೀಡಿ ಭೇಷ್ ಅನಿಸಿಕೊಂಡ ಡಾ ರಾಜಶೇಖರ ಸೇಡಂಕರ್ ಹಾಗೂ ರಾಜ್ಯ ಸಹಕಾರ ರತ್ನ ಪ್ರಶಸ್ತಿ ವಿಜೇತರಾದ ಬಾಬುರಾವ್ ಕುಂಬಾರ್ ಇವರಿಗೆ ಅಭಿನಂದನಾ ಸಮಾರಂಭ ಜರುಗಲಿದೆ ಎಂದು ಕಾರ್ಯಕ್ರಮದ ಇನ್ನೋರ್ವ ಸಂಘಟಕರಾದ ಗಂಧರ್ವ ಸೇನಾ ಈ ಸಂದರ್ಭದಲ್ಲಿ ತಿಳಿಸಿದರು.
ಡಾ ರಾಜಶೇಖರ್ ಸೇಡಂಕರ್, ರಮೇಶ ಡಾಕುಳಗಿ, ಗೋವರ್ಧನ ರಾಠೋಡ, ಶಂಕರರಾವ ಬಿರಾದಾರ್ ಮಾತನಾಡಿದರು.
ಬಾಬುರಾವ ಕುಂಬಾರ್, ಸುಭಾಷ ಹಮಿಲಪುರ, ರಮೇಶ ಕೊಳೇಕರ್, ತಾನಾಜಿ ಸಗರ, ಸಿನಿಲ ಖಾಶೆಂಪುರ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.