ಬೀದರ್ : ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ, ಆರೋಗ್ಯವೇ ನಮ್ಮ ಸಂಪತ್ತು ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸ್ತಿರೋಗ ತಜ್ಞ ಡಾ. ಸಂದೀಪ್ ಗಾಯಕವಾಡ್ ಅವರು ಕಾಡವಾದನಲ್ಲಿರುವ ವಿಂಟೇಜ್ ರೀಸಾರ್ಟ್ನಲ್ಲಿ ಗುರು ನಾನಕ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಗುರು ನಾನಕ ಗ್ರೂಪ್ ಆಫ್ ಸ್ಕೂಲ್ಸ್ ಸಿಬ್ಬಂದಿ ವರ್ಗಕ್ಕೆ ಆರೋಗ್ಯ ಜಾಗೃತಿ ಕಾರ್ಯಗಾರದಲ್ಲಿ ಉದ್ದೇಶಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತ ಯಾವುದಾದರೂ ಆರೋಗ್ಯದಲ್ಲಿ ಏರು-ಪೇರು ಕಂಡುಬಂದ ಕೂಡಲೆ ವೈದ್ಯರಿಗೆ ಸಂಪರ್ಕಿಸಿರಿ, ತ್ವರೆ ಮಾಡಬೇಡಿ, ಪ್ರತಿಯೊಂದು ಆರೋಗ್ಯ ಸಮಸ್ಯೆಗೆ ಪರಿಹಾರವಿದೆ ಮತ್ತು ನಮ್ಮ ಆರೋಗ್ಯ ಉತ್ತಮಗೊಳಿಸಲು ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ನಾವು ಹೊಂದ್ದಿದ್ದೇವೆ, ಸರಿಯಾದ ಸಮಯದಲ್ಲಿ ಊಟ ಮಾಡಬೇಕು. ವ್ಯಾಯಾಮ ಮತ್ತು ಯೋಗ ದಿನನಿತ್ಯ ಮಾಡಬೇಕು, ಇಲ್ಲದಿದ್ದಲ್ಲಿ ಬೇರೆ ರೀತಿಯ ರೋಗಗಳು ಉತ್ಪತ್ತಿಯಾಗುತ್ತವೆ ಎಂದು ನುಡಿದರು.

ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಅವರು ಮಾತನಾಡುತ್ತ ಗುರು ನಾನಕ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಗುರು ನಾನಕ ಆಸ್ಪತ್ರೆಯಲ್ಲಿ ರಿಯಾಯಿತಿ ಕೊಡಲಾಗುತ್ತಿದೆ. ಚಿಕಿತ್ಸೆಗಾಗಿ ನೆರೆ ರಾಜ್ಯಗಳಿಗೆ ಹೋಗುವುದನ್ನು ತಪ್ಪಿಸಲು ಗುರುನಾನಕ ಆಸ್ಪತ್ರೆಯಲ್ಲಿ ಡಯಾಲಸಿಸ್ ಕೇಂದ್ರ, ಕ್ಯಾಥ್ ಲ್ಯಾಬ್, ನ್ಯೂರೊ ಟ್ರಾಮಾ ಕೇರ್ ಸೆಂಟರ್ ಸೇರಿದಂತೆ ಅಗತ್ಯ ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಯರಾದ ಶ್ರೀಮತಿ ಆರೀಫ್ ಹಾದಿ, ಪ್ರಾಂಶುಪಾಲರಾದ ಶ್ರೀಮತಿ ನಲಿನಿ ಡಿ.ಜಿ., ಶ್ರೀ ಅಮಜದ ಅಲಿ, ಶ್ರೀ ಡೀನರಾದ ಹನುಮಾನ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.