ಬೀದರ್: ಹುಮನಾಬಾದ ನಿಂದ ಗಡವಂತಿ ಗ್ರಾಮದವರೆಗೆ ಇತ್ತೀಚೆಗೆ ಆರಂಭಿಸಲಾದ ಬಸ್ಸನ್ನು, ಪ್ರಯಾಣಿಕರ ಅನುಕೂಲ ಹಾಗೂ ಇಲಾಖೆಗೆ ಹೆಚ್ಚಿನ ಆದಾಯವನ್ನು ತಂದು ಕೊಡುವ ಉದ್ದೇಶದಿಂದ, ಹುಮನಾಬಾದ ಗಡವಂತಿ- ಆರ್ ಟಿ ಓ ಚೆಕ್ ಪೋಸ್ಟ್ – ರಾಜೇಶ್ವರ ಅಥವಾ ಬಸವಕಲ್ಯಾಣವರೆಗೆ ವಿಸ್ತರಿಸಬೇಕೆಂಬ ಮನವಿ ಯನ್ನು ಮಾಡಲಾಯಿತು.
ಇಂದು ಕಲಬುರ್ಗಿಯ ಸಾರಿಗೆ ಸದನದಲ್ಲಿ ಕ.ಕ. ರ. ಸಾ.ಸ. ಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ರಾಚಪ್ಪ ನವರಿಗೆ ಈ ಸಂಬಂಧ ಮನವಿಯನ್ನು ಸಲ್ಲಿಸಲಾಯಿತು. ಕೇವಲ ಗಡವಂತಿವರೆಗೆ ಬಸ್ ಓಡಿಸಿದರೆ ಇಲಾಖೆಗೆ ಆದಾಯ ಸಾಕಷ್ಟು ಬರುವುದಿಲ್ಲ. ಅದೂ ಅಲ್ಲದೆ ಬಸವಕಲ್ಯಾಣ ರಾಜೇಶ್ವರ ಮೊಳಕೆರಾ, ಚೆಕ್ ಪೋಸ್ಟ್ ನ ಪ್ರಯಾಣಿಕರು ಗ್ರಾಮೀಣ ಭಾಗದ ಸಂಪರ್ಕ ದಿಂದ ವಂಚಿತರಾಗುತ್ತಾರೆ. ಇದನ್ನು ಸರಿ ಪಡಿಸಲು ಹುಮ್ನಾಬಾದ -ಗಡವಂತಿ- ರಾಜೇಶ್ವರ – ಬಸವ ಕಲ್ಯಾಣ ವರೆಗೆ ಬಸ್ಸನ್ನು ವಿಸ್ತರಿಸಬೇ ಕೆಂದು ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ ರವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಪ್ರಯಾಣಿಕರ ಹಿತ ದೃಷ್ಟಿಯಿಂದ ಸೂಕ್ತ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಚಿತ್ರದಲ್ಲಿ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ, ಹಿರಿಯ ಆಪ್ತ ಕಾರ್ಯದರ್ಶಿ ಪ್ರಭುಲಿಂಗ ಸ್ವಾಮಿ, ಮುಖ್ಯ ಸಂಚಾರ ವ್ಯವಸ್ಥಾಪಕರಾದ ಸಂತೋಷ ಕುಮಾರ, ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಆನಂದ ಭದ್ರಕಾಳಿ ಮತ್ತು ಇನ್ನಿತರ ಸಿಬ್ಬಂದಿಗಳು ಚಿತ್ರದಲ್ಲಿದ್ದಾರೆ