ಬೀದರ್: ಪತ್ರಕರ್ತರು ಯಾರೆ ಆಗಿರಲಿ ಅವರು ನಮ್ಮವರು. ಅವರ ಮೇಲೆ ಹಲ್ಲೆಯಾದರೆ ಇಡೀ ಪತ್ರಕರ್ತ ಸಮೂಹದ ಮೇಲೆ ಹಲ್ಲೆಯಾದಂತೆ. ನಾವು ನಮ್ಮಲ್ಲಿರುವ ಕಚ್ಚಾಟ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ಹಿರಿಯ ಸದಸ್ಯರು ಆದ ಬಾಬು ವಾಲಿ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮೊನ್ನೆಯಷ್ಟೆ ಪತ್ರಕರ್ತ ರವಿ ಭೂಸಂಡೆಯವರ ಮೇಲೆ ಹಲ್ಲೆಗೈದ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಲು ಹಮ್ಮಿಕೊಂಡ ಪ್ರತಿಭಟನಾ ಸಭೆ ಉದ್ದೇಸಿಸಿ ಮಾತನಡಿದರು.
ಪತ್ರಕರ್ತರೆಂದರೆ ಬೀದರ್‌ನಲ್ಲಿ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಭಯವೇ ಇಲ್ಲದಂತಾಗಿದೆ. ನಾವು ನಮ್ಮ ಸ್ವಾಭಿಮಾನ ಕಾಪಾಡಿಕೊಂಡು ವೃತ್ತಿ ಧರ್ಮ ಪಾಲಿಸಬೇಕು. ಯಾರ ಮೇಲು ಹಗೆತನ ಸಾಧಿಸದೆ ನಮ್ಮೊಳಗೆ ಏನೆ ಮತಭೇದವಿದ್ದರೂ ಪರಸ್ಪರ ಬಗೆ ಹರಿಸಿಕೊಳ್ಳಬೇಕು. ಹೊರಗಿನವರಿಗೆ ಆಸ್ಪದ ನೀಡಬಾರದೆಂದು ಕಿವಿ ಮಾತು ಹೇಳಿದ ಬಾಬು ವಾಲಿ, ಹಲ್ಲೆ ಮಾಡಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಬಮಧಿಸಿ ಅವರನ್ನು ಸೇವೆಯಿಂದ ಅಮಾನತು ಆಗುವ ವರೆಗೆ ಹೋರಾಟ ನಿಲ್ಲದು ಎಂದು ತಿಳಿಸಿದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟಿಯ ಮಂಡಳಿ ಸದಸ್ಯ ಅಪ್ಪಾರಾವ ಸೌದಿ ಮಾತನಾಡಿ, ರವಿ ಮೇಲೆ ಹಲ್ಲೆ ಮಾಡಿರುವ ಅರಣ್ಯ ಸಿಬ್ಬಂದಿಗಳ ಕ್ರಮ ಅತ್ಯಂತ ಖಂಡನಿಯ. ಈಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕೂಡಲೇ ಹಲ್ಲೆ ಮಾಡಿದ ನಾಲ್ಕು ಜನ ಸಿಬ್ಬಂದಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.
ಸಂಘದ ಹಿರಿಯ ಸದಸ್ಯ ಆನಂದ ದೇವಪ್ಪ ಮಾತನಾಡಿ, ಪತ್ರಕರ್ತರ ಮೇಲೆ ಹಲ್ಲೆ ಆದರೆ ಒಂದು ಮನವಿ ಕೊಡುವಷ್ಟೆ ನಮ್ಮ ಚಟುವಟಿಕೆಯಾಗದೇ ಅದನ್ನು ಫಾಲೋ ಮಾಡಿ ತಪ್ಪಿತಸ್ತರಿಗೆ ಕ್ರಮ ಆಗುವ ವರೆಗೆ ಹೋರಾಟ ಮುಂದುವರೆಸಬೇಕೆಂದು ಕರೆ ನೀಡಿದರು.
ಸಂಘದ ಜಿಲ್ಲಾ ಅಧ್ಯಕ್ಷ ಡಿ.ಕೆ ಗಣಪತಿ ಮಾತನಾಡಿ, ಪತ್ರಕರ್ತ ರವಿ ಮೇಲೆ ಹಲ್ಲೆ ಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿಗಳ ವಿರೂದ್ಧ ಇಂದು ಇಡೀ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುತ್ತಿದೆ. ತಪ್ಪಿತಸ್ತರಿಗೆ ಶಿಕ್ಷೆ ಆಗುವ ವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು. ಶಶಿಕಾಂತ ಶೆಂಬೆಳ್ಳಿ ಮಾತನಾಡಿದರು. ಹಲ್ಲೆಗೊಳಗಾದ ರವಿ ಭೂಸಂಡೆ ತಮ್ಮ ಮೇಲಿನ ಹಲ್ಲೆ ಬಗ್ಗೆ ವಿವರಿಸಿದರು.
ಪತ್ರಕರ್ತರಾದ ಸಿದ್ರಾಮಯ್ಯ ಸ್ವಾಮಿ, ರವಿಂದ್ರ ಸ್ವಾಮಿ ಹಾಗೂ ಇತರರು ವೇದಿಕೆಯಲ್ಲಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರಾದ ಶಶಿಕಾಂತ ಬಂಬುಳಗಿ, ವಿಜಯಕುಮಾರ ಸೋನಾರೆ, ಪ್ರವಿಣ ಮೇತ್ರೆ, ಶಕ್ತಿಕಾಂತ, ಎಂ.ಪಿ.ಮುದಾಳೆ, ಸುನೀಲ ಭಾವಿಕಟ್ಟಿ, ಮಹಮ್ಮದ್ ಆಸಿಫ್, ಜಯಕುಮಾರ, ನಂದುಕುಮಾರ ಕರಂಜೆ, ಸುನಿಲ ಚಿಲ್ಲರ್ಗಿ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಭವನದ ಮುಂಭಾಗದಲ್ಲಿ ಸೇರಿ ಎಲ್ಲರು ತಪ್ಪಿತಸ್ತರ ವಿರೂದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.