ಬೀದರ್ : ಬಸವಕಲ್ಯಾಣ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯಚಟುವಟಿಕೆಗಳನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಕಸಾಪದ ನೂತನ ಅಧ್ಯಕ್ಷರನ್ನಾಗಿ ಡಾ. ರುದ್ರಮಣಿ ಮಠಪತಿ ಅವರನ್ನು ನೇಮಿಸಲಾಗಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅವರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶಾಂತಲಿಂಗ ಮಠಪತಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುತ್ತಾರೆ. ಕಳೆದ ಮೂರು ವರುಷಗಳಲ್ಲಿ ಮಠಪತಿ ಅವರು ಕ್ರಿಯಾಶೀಲವಾಗಿ ಅನೇಕ ಕಾರ‍್ಯಕ್ರಮಗಳನ್ನು ಸಂಘಟಿಸಿರುತ್ತಾರೆ. ಮುಖ್ಯವಾಗಿ ಕಸಾಪದ ನಿವೇಶನ ದಾನಿಗಳಾದ ಶ್ರೀ ಮಲ್ಲಿಕಾರ್ಜುನ ಕುರಕೊಟೆ ಅವರು ನೀಡಿರುವ ನಿವೇಶನವನ್ನು ನಗರಸಭೆಯಿಂದ ಸಾಹಿತ್ಯ ಪರಿಷತ್ತಿಗೆ ವರ್ಗಾಯಿಸಿರುತ್ತಾರೆ. ಜೊತೆಗೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಪ್ರತಿಯೊಂದು ಶಾಲಾ ಕಾಲೇಜಿನ ಹತ್ತನೆ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳಿಗೆ ಗೌರವ ಸನ್ಮಾನ ಮಾಡಿರುವ ಕಾರ್ಯ ಶ್ಲಾಘನೀಯ. ಶಾಂತಲಿಂಗ ಮಠಪತಿ ಅವರಿಂದ ತೆರವಾದ ಸ್ಥಾನಕ್ಕೆ ಉಳಿದ ಅವಧಿಗೆ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ‍್ಯರಾದ ಡಾ ರುದ್ರಮಣಿ ಮಠಪತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು,
ಡಾ ರುದ್ರಮಣಿ ಮಠಪತಿ ಅವರು ಸುಮಾರು ದಶಕಗಳಿಂದ ಸಾಂಸ್ಕೃತಿಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ಈ ಹಿಂದೆ ಬಸವಕಲ್ಯಾಣ ತಾಲ್ಲೂಕಿನ ಕಸಾಪ ಅಧ್ಯಕ್ಷರಾಗಿ ಹೊಸ ನಿವೇಶನ ಹಾಗೂ ಎರಡು ತಾಲ್ಲೂಕು ಸಮ್ಮೇಳನ ಯುವ ಸಮ್ಮೇಳನ ಸೇರಿದಂತೆ ಅನೇಕ ಕಾರ‍್ಯಕ್ರಮಗಳನ್ನ ಆಯೋಜಿಸಿದ್ದಾರೆ
ನಾಡು ನುಡಿಯ ನಿಷ್ಠ ಸೇವಕರಾಗಿ ಅನೇಕ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಡಾ ರುದ್ರಮಣಿ ಮಠಪತಿ ಅವರನ್ನ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು ಅವರು ಹುದ್ದೆಯನ್ನು ಸ್ವೀಕರಿಸಿ ಕಾರ‍್ಯ ಪ್ರವೃತ್ತರಾಗಲು ಸೂಚಿಸಿದೆ.