ಬೀದರ್: ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಹಲ್ಲೆ ಮಾಡಿದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ.
ಗುರುವಾರ ಡಿ.ಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಮುಖೇನ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿ, ಒಬ್ಬ ಪತ್ರಕರ್ತನೆಂಬುದನ್ನು ಮರೆತು ಮನ ಬಂದಂತೆ ಥಳಿಸಿದಲ್ಲದೇ ಅವಾಚ್ಛ ಶಬ್ದಗಳಿಂದ ಹಾಗೂ ಜಾತಿ ನಿಂದನೆ ಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿಗಳಾದ ದಸ್ತಗೀರ್, ಶಾಂತಕುಮಾರ, ಸಂಗಮೇಶ ಹಾಗೂ ಗಜಾನಂದ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ, ಜಿಲ್ಲಾ ಪ್ರಧಾನ ಕಾಯ್ದರ್ಶಿ ಶಿವಕುಮಾರ ಸ್ವಾಮಿ, ಉಪಾಧ್ಯಕ್ಷ ನಾಗಶೆಟ್ಟಿ ಧರಂಪುರ, ಖಜಾಂಚಿ ಎಂ.ಪಿ ಮುದಾಳೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂತೋಷ ಚಟ್ಟಿ, ಹಿರಿಯ ಪತ್ರಕರ್ತರಾದ ಶಶಿಕಾಂತ ಶೆಂಬೆಳ್ಳಿ, ವಿಜಯಕುಮಾರ ಬೆಲ್ದೆ, ಸಂಜುಕುಮಾರ ಬುಕ್ಕಾ,ವಿಜಯಕುಮಾರ ಸೋನಾರೆ, ಮಹಾರುದ್ರ ಡಾಕುಳಗಿ, ಸುನೀಲ ಭಾವಿಕಟ್ಟಿ, ಶಕ್ತಿಕಾಂತ, ಹಲ್ಲೆಗೊಳಗಾದ ಪತ್ರಕರ್ತ ರವಿ ಭೂಸಂಡೆ ಹಾಗೂ ಇತರರು ಹಾಜರಿದ್ದರು.