ಬೀದರ್ : ಏಷ್ಯ ಖಂಡದ ಬೆಳಕು, ಶಾಂತಿಧೂತರು ಆದ ತಥಾಗತ ಗೌತಮ ಬುಧ್ದರ ಜಯಂತಿಯು ಸರ್ಕಾರದ ವತಿಯಿಂದ ಆಚರಿಸಬೇಕೆಂದು ಹಲವಾರು ಬೌದ್ಧ ಸಂಘ ಸಂಸ್ಥೆಗಳು, ದಲಿತ ಸಂಘಟನೆಗಳು ಮತ್ತು ಪಕ್ಷಗಳು ಸರ್ಕಾರಕ್ಕೆ ನಿರಂತರವಾಗಿ ಒತ್ತಾಯಿಸಿದನ್ನು ಪರಿಗಣಿಸಿ ಪ್ರತಿ ವರ್ಷ ಬುಧ್ದ ಪೂರ್ಣಿಮಾ ದಿನದಂದು ಬುಧ್ದ ಜಯಂತಿಯನ್ನು ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಣೆ ಮಾಡುವಂತೆ ಆದೇಶ ನೀಡಿದ ಸರ್ಕಾರದ ಕ್ರಮಕ್ಕೆ ಹರ್ಷವ್ಯಕ್ತಪಡಿಸಿ ಅಭಿನಂದಿಸುವುದಾಗಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದಾರೆ.