ವೆಂಕಟೇಶ ಮೊರಖಂಡಿಕರ್ ಬೆಂಬಲಿಸಿ : ಅಶೋಕ ಹಾರನಹಳ್ಳಿ
ಬೀದರ್: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಡಳಿತ ಮಂಡಳಿಗೆ ಏ.13ರಂದು ಚುನಾವಣೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಾ. ಭಾನುಪ್ರಕಾಶ್ ಶರ್ಮಾ ಸ್ಪರ್ಧಿಸುತ್ತಿದ್ದು ಹಾಗೂ ಬೀದರ್ ಜಿಲ್ಲಾ ಪ್ರತಿನಿಧಿಯಾಗಿ ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಸ್ಪರ್ಧಿಸುತ್ತಿದ್ದಾರೆ. ಮಹಾಸಭೆಯ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೆಲಸ ನಿರ್ವಹಿಸುತ್ತಿರುವ ಇವರನ್ನು ಒಕ್ಕೋರಲಿನಿಂದ ಸದಸ್ಯರೆಲ್ಲರೂ ಬೆಂಬಲಿಸಬೇಕೆಂದು ಮಹಾಸಭೆಯ ಹಾಲಿ ಅಧ್ಯಕ್ಷರಾಗಿರುವ ಅಶೋಕ್ ಹಾರನಹಳ್ಳಿ (ಮಾಜಿ ಅಡ್ವೊಕೇಟ್ ಜೆನರಲ್) ಮನವಿ ಮಾಡಿದ್ದಾರೆ.

ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಅವರು ಬೀದರ್ ಜಿಲ್ಲೆಯಲ್ಲಿ 1982ರಲ್ಲಿ ಯುವ ಬ್ರಾಹ್ಮಣ ಸಂಘ ಆರಂಭಿಸಿ ಅಂದಿನಿಂದ ಇಂದಿನವರೆಗೆ 2500ಕ್ಕೂ ಅಧಿಕ ವಿಪ್ರರ ಉಚಿತ ಉಪನಯನ ಹಾಗೂ 10 ಬಾರಿ ಗಾಯತ್ರಿ ಜಪ ಮಹಾಯಾಗ ನಡೆಸಿರುವುದು ಹೀಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಬ್ರಾಹ್ಮಣ ಸಮಾಜದ ಸಂಘಟನೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿ ಅವರು ಉತ್ತಮ ಕಾರ್ಯ ನಿರ್ವಹಿಸಿದ್ದು ವಿವಿಧ ಜಿಲ್ಲೆಗಳ ಅನೇಕ ವಧು ವರ ವೇದಿಕೆಯ ಮೂಲಕ ಸಮ್ಮಿಲನ ಮಾಡಿಸಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಮಾಜ ಮುಖಿಯಾಗಿ ಕಾರ್ಯಪ್ರವೃತ್ತರಾಗಿರುವ ವೆಂಕಟೇಶ ಮೊರಖಂಡಿಕರ್ ಅವರನ್ನು ಎಲ್ಲಾ ಸದಸ್ಯರು ಒಕ್ಕೋರಲಿನಿಂದ ಬೆಂಬಲಿಸಬೇಕೆಂದು ಮುಂದಿನ ದಿನಗಳಲ್ಲಿ ಪ್ರಥಮ ಜಿಲ್ಲಾ ಸಮ್ಮೇಳನ ಮುಖಾಂತರ ಇನ್ನೂ ಹೆಚ್ಚಿನ ಸಮಾಜ ಮುಖಿ ಕಾರ್ಯಕ್ರಮಗಳ ಮುಖಾಂತರ ಬಲವಾದ ಬ್ರಾಹ್ಮಣರ ಸಂಘಟನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಹೇಳಿದರು.