ಕನ್ನಡದ ಮೊದಲ ಕವಯಿತ್ರಿಯಾಗಿ, ಸಾವಿರಾರು ವಚನಗಳನ್ನು ರಚಿಸಿದ್ದಾರೆ ಎಂದು ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ತಿಳಿಸಿದರು.
ರಾಷ್ಟಿಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ವತಿಯಿಂದ ನಗರದ ಬಸವ ಮಂಟಪದಲ್ಲಿ ಜರುಗಿದ ವೀರವಿರಾಗಿಣಿ ಅಕ್ಕಮಹಾದೇವಿ ಜಯಂತಿ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಇದೇ ವೇಳೆ ಮಹಿಳಾ ಗಣದ ಪ್ರಮುಖರಾದ ನಿರ್ಮಲಾ ನಿಲಂಗೆ, ಶೀತಲ ಸೂರ್ಯವಂಶಿ, ವಿದ್ಯಾವತಿ ನಿಡಗುಂದೆ, ಸರೋಜಿನಿ ಪಾಟೀಲ, ನಿರ್ಮಲಾ ಸ್ವಾಮಿ, ಬಸಮ್ಮ ಬಿರಾದಾರ, ಪೂಜಾ ಸೂರ್ಯವಂಶಿ, ಸರಸ್ವತಿ ಶೆಟಕಾರ, ಇಂದುಮತಿ ತಗಾರೆ ಸೇರಿದಂತೆ ಹಲವರು ಅಕ್ಕಮಹಾದೇವಿ ತಾಯಿಯ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಲಾ ಭೋಸ್ಲೆ ಸ್ವಾಗತಿಸಿದರು. ಪೂಜಾ ಸೂರ್ಯವಂಶಿ ನಿರೂಪಿಸಿದರು. ಸುನಿತಾ ಬಿರಾದಾರ ವಂದಿಸಿದರು.