ಬೀದರ್: ಕಟ್ಟಡಗಳು ನಗರದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವಂತೆ ನಿರ್ಮಿಸುವ ಬಹುದೊಡ್ಡ ಜವಾಬ್ದಾರಿ ಸಿವಿಲ್ ಇಂಜಿನಿಯರ್ ಅವರ ಮೇಲಿದೆ. ಜೊತೆಗೆ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಕಾರ್ಮಿಕರಿಗೆ ಗ್ಲೌಜ್, ಶೂಸ್, ಹೆಲ್ಮೆಟ್ ಹಾಗೂ ಇನ್ನಿತರ ಸುರಕ್ಷಿತ ವಸ್ತುಗಳನ್ನು ನೀಡುವ ಅವಶ್ಯಕತೆ ಇದೆ ಎಂದು ಲೋಕಸಭಾ ಸದಸ್ಯ ಸಾಗರ ಖಂಡ್ರೆ ತಿಳಿಸಿದರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ವತಿಯಿಂದ ನಗರದ ಲಾವಣ್ಯ ಕನ್ವೆನ್ಶನ್ ಹಾಲ್‌ನಲ್ಲಿ ನಡೆಯುತ್ತಿರುವ ಮೂರು ದಿವಸಗಳ ಸ್ಪೆöÊಕಾನ್-4 ರಾಷ್ಟಿಯ ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಕೆರೆ ಹಾಗೂ ನದಿಯಲ್ಲಿ ಸಿಗುವ ರೇತಿ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಇದರಿಂದ ಪ್ರಕೃತಿ ನಾಶವಾಗುತ್ತಿದೆ. ಅದಕ್ಕೂ ಮೀರಿ ರೋಬೊ ರೇತಿ ಹಾಗೂ ಇನ್ನಿತರ ಕಟ್ಟಿಗೆಯ ಕಟ್ಟಡದ ಕಡೆಗೆ ಒಲವು ತೋರುತ್ತಿಲ್ಲ. ನದಿಯ ರೇತಿಯಿಂದ ನೀರಿನೊಳಗಿನ ಜಲಚರ ಪ್ರಾಣಿಗಳು ಹಾಗೂ ಭೂಮಿಯ ಒಡಲು ನಾಶವಾಗುತ್ತಿದೆ. ಆದ್ದರಿಂದ ಆಸ್ಟೆಲಿಯಾ ದೇಶದಂತೆ ಹಗುರವಾದ ವಸ್ತುಗಳಿಂದಲೂ ಕಟ್ಟಡ ನಿರ್ಮಾಣದ ಕಡೆಗೆ ಗಮನ ಹರಿಸಬೇಕೆಂದು ತಿಳಿಸಿದರು.
ಸುರಕ್ಷಿತ ಕಟ್ಟಡಗಳ ನಿರ್ಮಾಣ, ಬಳಸುವ ವಸ್ತುಗಳ ಕುರಿತು ಬಹಳ ಮಾರ್ಮಿಕವಾಗಿ ಮೂರು ದಿವಸಗಳ ವಿಚಾರ ಸಂಕಿರಣ ಆಯೋಜನೆ ಮಾಡಿದ್ದು ಖುಷಿ ತಂದಿದೆ. ಸಿವಿಲ್ ಇಂಜಿನಿಯರ್ ಹಾಗೂ ಸರ್ಕಾರ ಒಟ್ಟಾಗಿ ಸೇರಿಕೊಂಡು ರಸ್ತೆ, ಸಮುದಾಯ ಭವನ, ಶೌಚಾಲಯ, ಶಾಲೆಗಳ ಕಟ್ಟಡ ಹಾಗೂ ಇನ್ನಿತರ ಸರ್ಕಾರಿ ಕಟ್ಟಡಗಳ ಕೆಲಸ ಗುಣಮಟ್ಟದಿಂದ ಮಾಡಿದರೆ ಗಟ್ಟಿಮುಟ್ಟಾದ ಕಾಮಗಾರಿಗಳನ್ನು ಮಾಡಬಹುದು ಎಂದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ ಬೆಲ್ದಾಳೆ ಮಾತನಾಡಿ ಕಟ್ಟಡಗಳ ಜೊತೆಗೆ ವ್ಯಕ್ತಿ ಭಾನಾತ್ಮಕವಾಗಿ ಬೆಸೆದುಕೊಂಡಿರುತ್ತಾನೆ. ಹೀಗಾಗಿ ಒಮ್ಮೆ ನಿರ್ಮಿಸಿದ ಮನೆಯಲ್ಲಿ ನಾಲ್ಕು ತಲೆಮಾರಿನವರು ಜೀವಿಸುವಷ್ಟು ಬಾಳಿಕೆಗೆ ಬರಬೇಕೆಂದು ಜನರು ಆಸೆ ಪಡುತ್ತಾರೆ. ಹೀಗಾಗಿ ಪ್ರಕೃತಿ ಸ್ನೇಹಿ ವಸ್ತುಗಳನ್ನು ಬಳಸಿ ಕಟ್ಟಡಗಳನ್ನು ನಿರ್ಮಿಸಬೇಕೆಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ)ದ ಅಧ್ಯಕ್ಷ ವೀರಶೆಟ್ಟಿ ಮಣಗೆ ಕಾರ್ಯಕ್ರಮದ ಯಶಸ್ವಿಗೆ ಸಾಕಷ್ಟು ಜನ ಉದ್ಯಮಿಗಳು ಹಾಗೂ ವಿವಿಧ ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟದ ಅಂಗಡಿಗಳ ಮಾಲಿಕರು ಸಹಕಾರ ನೀಡಿದ್ದಾರೆ. ಒಂದು ಯಶಸ್ವೀ ಕಟ್ಟಡ ನಿರ್ಮಿಸುವಲ್ಲಿ ಸಿವಿಲ್ ಇಂಜಿನಿಯರ್ ಹಿಡಿದು ಕಾರ್ಮಿಕರವರೆಗೆ ಸಾಕಷ್ಟು ಜನರ ಪರಿಶ್ರಮ ಇರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ವಿನೂತನ ಕಟ್ಟಡಗಳ ನಿರ್ಮಾಣಕ್ಕೆ ಎಲ್ಲರೂ ಕೂಡಿ ಶ್ರಮಿಸೋಣ ಎಂದರು.

ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಹೈದರಾಬಾದನ ಡಾ. ಎಸ್.ಪಿ.ಅಂಚೂರಿ, ಅಜೀಜ್ ಖಾನ್, ಸರ್ದಾರ್ ಪವಿತ್ ಸಿಂಗ್, ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಸಂತೋಷ ತಾಳಂಪಳ್ಳಿ, ಅಶೋಕ ಉಪ್ಪೆ ಉಪಸ್ಥಿತರಿದ್ದರು.
ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆಯ ಮುಖಪುಟವನ್ನು ಶಾಸಕ ಡಾ. ಶೈಲೇಂದ್ರ ಕೆ ಬೆಲ್ದಾಳೆ ಬಿಡುಗಡೆ ಮಾಡಿದರು. ಎಸಿಸಿಇಐ ಅಧ್ಯಕ್ಷ ವೀರಶೆಟ್ಟಿ ಮಣಗೆ ಸ್ವಾಗತಿಸಿದರು. ಅಪರ್ಣ ನಿರೂಪಿಸಿದರು. ಎಸಿಸಿಇಐ ಅಶೋಕ ಉಪ್ಪೆ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಓಂಕಾರ ಪಾಟೀಲ, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಶಿವಕುಮಾರ ಯಲಾಲ್, ಸಂದೀಪ ಕಾಡವಾದ, ಅಮಿತ ನಾಗೂರೆ, ಸದಸ್ಯರಾದ ಮಹೇಶ ಹೊರಂಡೆ, ದಿಲೀಪ ನಿಟ್ಟೂರೆ ಹಾಗೂ ಇತರರು ಉಪಸ್ಥಿತರಿದ್ದರು.