ಬೀದರ್: ಇಂಟರ್‍ನ್ಯಾಷನಲ್ ನೆಚರೋಪಥಿ ಆರ್ಗನೈಸೇಷನ್ ಬೀದರ್ ಘಟಕದ ಸಲಹೆಗಾರರಾಗಿ ಕಾಮಶೆಟ್ಟಿ ಚಿಕ್ಕಬಸೆ ಅವರನ್ನು ನೇಮಕ ಮಾಡಲಾಗಿದೆ.
ಆರ್ಗನೈಸೇಷನ್ ರಾಷ್ಟ್ರೀಯ ಅಧ್ಯಕ್ಷ ಅನಂತ ಬಿರಾದಾರ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ನವೀನ್ ಪಬ್ಲಿಕ್ ಶಾಲೆಯ ಅಧ್ಯಕ್ಷರಾಗಿರುವ ಚಿಕ್ಕಬಸೆ, ಹಲವು ಸಂಘ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದಾರೆ. ಸಾಮಾಜಿಕ ಚಟುವಟಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಇಂಟರ್‍ನ್ಯಾಷನಲ್ ನೆಚರೋಪಥಿ ಆರ್ಗನೈಸೇಷನ್ ಯೋಗ ಹಾಗೂ ನಿಸರ್ಗ ಚಿಕಿತ್ಸಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. 12 ದೇಶ ಹಾಗೂ ಭಾರತದ ಹಲವು ರಾಜ್ಯಗಳಲ್ಲಿ ತನ್ನ ಸಂಪರ್ಕ ಜಾಲವನ್ನು ಹೊಂದಿದೆ.
ನೇಮಕಾತಿ ಪತ್ರ ವಿತರಣೆ: ನಗರದ ಸಿದ್ಧಾರೂಢ ಮಠದಲ್ಲಿ ಆರ್ಗನೈಸೇಷನ್ ರಾಷ್ಟ್ರೀಯ ಅಧ್ಯಕ್ಷ ಅನಂತ ಬಿರಾದಾರ ಅವರು ಕಾಮಶೆಟ್ಟಿ ಚಿಕ್ಕಬಸೆ ಅವರಿಗೆ ಶುಕ್ರವಾರ ನೇಮಕಾತಿ ಆದೇಶ ಪತ್ರ ವಿತರಿಸಿದರು.
ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಗೋರಕನಾಥ ಇದ್ದರು.