ಬೀದರ್ : ಬೀದರಿನ ಅರವಿಂದ ಕುಮಾರ್ ಕುಲಕರ್ಣಿ ಯವರಿಗೆ ಅವರ ಸಾಹಿತ್ಯ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ, ಹಾಗೂ ಸಾಹಿತಿಗಳಾದ ಓಂಕಾರ್ ಪಾಟೀಲ್ ಅವರಿಗೆ ಬೆಂಗಳೂರಿನ ಅಕ್ಷರನಾದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ, ರಾಜ್ಯ ಮಟ್ಟದ ಆದಿಕವಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಪ್ರಶಸ್ತಿಯನ್ನು ಏ. 12 ರಂದು ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿ ಜರುಗಲಿರುವ ಪ್ರಸ್ತುತ ಸಾಲಿನ, ಅಕ್ಷರ ನಾದದ ಕವಿ ಕಾವ್ಯ ಕಥಾ ಸಂಗಮ 3 ರ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರಾದ ಡಾ. ಶ್ರುತಿ ಮಧುಸೂದನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಮಟ್ಟದ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಬೀದರನ ಖ್ಯಾತ ಮಕ್ಕಳ ರೋಗ ತಜ್ಞರಾದ ಡಾ. ಸಿ ಆನಂದ್ ರಾವ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನಶೆಟ್ಟಿ , ಹಿರಿಯ ಸಾಹಿತಿಗಳಾದ ಡಾ. ಎಂ ಜಿ ದೇಶಪಾಂಡೆ, ನಿವೃತ್ತ ಅಧಿಕಾರಿಗಳಾದ ವೀರಭದ್ರಪ್ಪ ಉಪ್ಪಿನ್, ಸೂರ್ಯಕಾಂತ್ ಸಂಗೋಳ್ಕರ್, ಸಂತೋಷ್ ಶಿಂಧೆ, ಸುನೀಲ ಭಾವಿಕಾಟ್ಟಿ, ವೆಂಕಟರಾವ್ ಕುಲಕರ್ಣಿ ಸುನಿಲ್ ಕುಲಕರ್ಣಿ ರಾಜೇಶ್ ಕುಲಕರ್ಣಿ, ನಿಜಲಿಂಗ ರಗಟೆ, ಸಂಗಮೇಶ್ ಜಾಂತೆ, ನಾಗೇಶ್ ಸ್ವಾಮಿ, ಸುನಿತಾ ಆನಂದ್ ಹರ್ಷ ವ್ಯಕ್ತಪಡಿಸಿದ್ದಾರೆ.