ಬೀದರ್: ಹುಟ್ಟುವುದು ಆಕಸ್ಮಿಕ, ಸಾಯುವುದು ಖಚಿತ. ಹುಟ್ಟು ಸಾವುಗಳ ಮಧ್ಯೆ ಇರುವ ಅಮೂಲ್ಯ ಜೀವನ ಮಹತ್ವದ್ದಾಗಿದೆ. ಸಮಾಜಕ್ಕಾಗಿ ಏನಾದರೂ ಮಾಡಿ ಹೆಸರು ಗಳಿಸಿಕೊಳ್ಳುವುದು ಪವಿತ್ರಕಾರ್ಯ, ಇಂತಹ ಸೇವೆಯನ್ನು ಡಾ. ಗುರಮ್ಮಾ ಸಿದ್ದಾರೆಡ್ಡಿ ತಾಯಿಯವರು ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾ ತಿಳಿಸಿದರು.
ಡಾ. ಎಸ್.ಎಸ್. ಸಿದ್ದಾರೆಡ್ಡಿ ಫೌಂಡೇಶನ್ ಬೀದರ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಡಾ.ಎಸ್.ಎಸ್.ಸಿದ್ದಾರೆಡ್ಡಿಯವರ 9ನೇ ವರ್ಷದ ಸ್ಮರಣಾರ್ಥವಾಗಿ 2023-24ನೇ ಸಾಲಿನ ರಾಜ್ಯ ಪುರಸ್ಕಾರ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಗೆ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಣ ಸಂಪಾದನೆ ಮಾಡಿ ಅದನ್ನು ಉಳಿಸುವ ಕಾರ್ಯ ಎಲ್ಲರೂ ಮಾಡುತ್ತಾರೆ. ಆದರೆ ಡಾ. ಗುರಮ್ಮಾ ಸಿದ್ದಾರೆಡ್ಡಿಯವರು ತಮ್ಮಲ್ಲಿರುವ ಸಂಪತ್ತನ್ನು ವಿದ್ಯಾರ್ಥಿಗಳಿಗಾಗಿ, ಸಮಾಜೋಧಾರ್ಮಿಕ ಕಾರ್ಯಗಳಿಗಾಗಿ ವ್ಯಯ ಮಾಡುತ್ತಿರುವುದು ಅಭಿನಂದನೀಯ. ಈ ಹಿಂದೆ ಎಂ.ಸಿ.ಮೋದಿಯವರು ಸಾವಿರಾರು ಕಣ್ಣಿನ ಶಸ್ತçಚಿಕಿತ್ಸೆ ಮಾಡಿ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅದೇ ರೀತಿ ಸಿದ್ದಾರೆಡ್ಡಿ ಕಣ್ಣಿನ ಆಸ್ಪತ್ರೆ ಹೆಸರು ಮಾಡಲಿ. ಇಂದು ಮಕ್ಕಳಿಗೆ ಡಾ. ಎಸ್.ಎಸ್.ಸಿದ್ದಾರೆಡ್ಡಿ ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.

ಭಾರತ ಸ್ಕೌಟ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ ಡಾ. ಸಿದ್ದಾರೆಡ್ಡಿಯವರು ಬದುಕಿದ್ದಾಗಲೇ ಸ್ಕೌಟ್ ಮತ್ತು ಗೈಡ್ಸ್ನ ಕಾರ್ಯಕ್ಕೆ ತನು ಮನ ಧನದಿಂದ ಸಹಕಾರ ನೀಡಿದ್ದರು. ಅವರ ಹೆಗಲಿಗೆ ಹೆಗಲಾಗಿ ಜಿಲ್ಲೆಯಲ್ಲಿ ಡಾ. ಗುರಮ್ಮಾ ಸಿದ್ದಾರೆಡ್ಡಿಯವರು ಸ್ಕೌಟ್ ಮತ್ತು ಗೈಡ್ಸ್ನ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದರು.
ಭಾರತ ಸ್ಕೌಟ್ ಮತ್ತು ಗೈಡ್‌ನ ಜಿಲ್ಲಾ ಮುಖ್ಯ ಆಯುಕ್ತೆ ಡಾ. ಗುರಮ್ಮಾ ಸಿದ್ದಾರೆಡ್ಡಿ ಮಾತನಾಡಿ ಸಿದ್ದಾರೆಡ್ಡಿಯವರ ಸ್ಮರಣಾರ್ಥವಾಗಿ ಇಂದು 150ಕ್ಕೂ ಹೆಚ್ಚು ಮಕ್ಕಳಿಗೆ ರಾಜ್ಯ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಮಕ್ಕಳು ಉತ್ತಮ ನಾಗರಿಕರಾಗಿ ಬದುಕಬೇಕು. ಶಿಕ್ಷಣ, ಸಂಸ್ಕಾರ, ಸದ್ವಿನಯ ಅಳವಡಿಸಿಕೊಂಡು ಭಾರತದ ಹೆಸರು ವಿಶ್ವದಲ್ಲಿ ಪಸರಿಸಬೇಕೆಂಬುದು ನಮ್ಮ ಮೂಲ ಉದ್ದೇಶವಾಗಿದೆ. ಹೀಗಾಗಿ ಪ್ರತೀ ವರ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಲಾಗುತ್ತಿದೆ. ನಮ್ಮ ಮಕ್ಕಳು ಹಾಗೂ ಸೊಸೆ ಕೂಡಾ ನನಗೆ ಕೈಜೋಡಿಸಿರುವುದು ಸಮಾಜ ಸೇವೆ ಮಾಡುವ ನಮ್ಮ ಉತ್ಸಾಹ ಇಮ್ಮಡಿಗೊಂಡಿದೆ ಎಂದರು.
ವೇದಿಕೆ ಮೇಲೆ ಡಾ. ರಾಜಶ್ರೀ ವಿಶ್ವನಾಥರೆಡ್ಡಿ, ಬಾಬುರಾವ ನಿಂಬೂರೆ, ಅನೀಲ ಶಾಸ್ತಿç, ಲೀಲಾವತಿ ಚಾಕೋತೆ, ಡಾ. ವಿಕ್ರಮ ಸಿದ್ದಾರೆಡ್ಡಿ, ಡಾ. ಜಗನ್ನಾಥ ಹೆಬ್ಬಾಳೆ, ಡಾ. ಹಣಮಂತ ಭರಶೆಟ್ಟಿ, ಸಂಧ್ಯಾರಾಣಿ ಪಾಟೀಲ, ಮಂಗಲಾ ಭಾಗವತ, ಭಾರತ ಸ್ಕೌಟ್ ಮತ್ತು ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿ ರಮೇಶ ತಿಬಶೆಟ್ಟಿ, ಪ್ರಮುಖರಾದ ಲಕ್ಷಿö್ಮÃ ಗಾದಗೆ, ಗೀತಾ ಗಡ್ಡಿ, ಭಾರತಿ ವಸ್ತçದ, ಪುಣ್ಯವತಿ ವಿಸಾಜಿ, ಎಸ್.ಬಿ.ಕುಚಬಾಳ, ಕುಚಬಾಳ, ಬಸವ ಬಾಂಧವ್ಯ ಬಳಗದ ಬಾಬುರಾವ ದಾನಿ, ಮಹೇಶ ಮಜಗೆ, ಸಂಗಮೇಶ್ವರ ಜಾಂತೆ, ಶಂಕರರಾವ ಸಜ್ಜನಶೆಟ್ಟಿ, ಲಕ್ಷಿಮಿ ಗಾದಗೆ, ಶ್ರೀದೇವಿ ಬಿರಾದಾರ, ಸಿದ್ದಾರೂಢ ಭಾಲ್ಕೆ ಸೇರಿದಂತೆ ಹಲವರು ಉಪಸ್ಥಿತಿದ್ದರು. ಕಲ್ಯಾಣರಾವ ಚಳಕಾಪುರೆ ನಿರೂಪಿಸಿದರು. ರಮೇಶ ತಿಬಶೆಟ್ಟಿ ಸ್ವಾಗತಿಸಿದರು. ಮಂಗಲಾ ಭಾಗವತ್ ವಂದಿಸಿದರು.