ರಂಜಾನ್ ಪ್ರಾರ್ಥನೆಯಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲ್- ಮುಸ್ಲಿಂ ಬಾಂಧವರಿಗೆ ಶುಭ ಹಾರೈಕೆ
ಕಲಬುರಗಿ : ಕಲಬುರಗಿ ದಕ್ಷಿಣ ಮತಕ್ಷೇತ್ರ ಸಾಸಕರಾದ ಅಲ್ಲಂಪ್ರಭು ಪಾಟೀಲರು ನಗರದಲ್ಲಿರುವ ನಾಗನಹಳ್ಳಿ ವೃತ್ತದ ಬಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಿನ್ನೆಲೆಯಲ್ಲಿ ನಡೆದ ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.ರಂಜಾನ್ ಹಬ್ಬದ ಸಂಪ್ರದಾಯದಂತೆ ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ವ್ರತ ಆಚರಿಸಿದ್ದಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಬಿಟ್ಟು ಉಪವಾಸ ವ್ರತ ಆಚರಿಸುತ್ತಾರೆ. ಉಪವಾಸ (ರೋಜಾ) ಮಾತ್ರವಲ್ಲದೇ ದಾನ ( ಝಕಾತ್) ನಮಾಜ್, ಕುರಾನ್ ಪಠನ, ತರಾವೀಹ್ ಮಾಡುವ ಮೂಲಕ ದೇವರನ್ನು (ಅಲ್ಲಾಹ್ ನನ್ನು) ಸ್ಮರಿಸುತ್ತಾರೆ.ಈದ್ ಉಲ್ ಫಿತ್ರ್ ಹಬ್ಬ ಮನುಕುಲದ ಸೌಹಾರ್ಧತೆಯನ್ನು ಸಾರುವ ಹಾಗೂ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬ ಉದಾತ್ತ ಚಿಂತನೆಗಳನ್ನೊಳಗೊಂಡಿದ್ದಲ್ಲದೆ ಈ ಹಬ್ಬವು ಕೃತಜ್ಞತೆ, ಕರುಣೆ, ತ್ಯಾಗ ಮತ್ತು ದಾನಗಳ ತತ್ವಗಳನ್ನು ಹೇಳುತ್ತದೆ. ಈದ್ ಹಬ್ಬವು ನಾಡಿಗೆ ಶಾಂತಿ, ಸಮೃದ್ಧಿ ಹಾಗೂ ಸೌಹಾರ್ಧತೆಯನ್ನು ತರಲಿ ಎಂದು ಶಾಸಕ ಅಲ್ಲಂಪ್ರಭು ಪಾಟೀಲರು ಈ ಸಂದರ್ಭದಲ್ಲಿ ಸಮಸ್ತ ಮುಸ್ಲಿಂ ಬಾಂಧವರಿಗೆ ಹೇಳಿದರು.