ಬೀದರ್: ಏಪ್ರಿಲ್ ತಿಂಗಳ 4ರಂದು ಸಾಯಂಕಾಲ 5.30 ಗಂಟೆಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಎಲ್ಲರ ಅಂಬೇಡ್ಕರ್, ಸಂಘಂ ಶರಣಂ ಗಚ್ಚಾಮಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂವಿಧಾನ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ ಹೇಳಿದರು.
ನಗರದ ಜಿಲ್ಲಾ ಪತ್ರಿಕ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಅಭ್ಯುದಯ ಆರ್ಟ್ಸ ಅಕಾಡೆಮಿ ಹೈದ್ರಾಬಾದ್ ಅವರ ಸಹಯೋಗತ್ವದಲ್ಲಿ ಜರುಗಲಿರುವ ನಾಟಕ ಕಾರ್ಯಕ್ರಮವು 90 ನಿಮಿಷಗಳ ಕಾಲ ನಿರಂತರವಾಗಿ ನಡೆಯಲಿದೆ. ಇದರಲ್ಲಿ ಬುದ್ದ, ಬಸವ ಹಾಗೂ ಅಂಬೇಡದಕರ್ ಅವರ ತತ್ವಗಳು ಪ್ರಚಲಿತವಾಗಿವೆ ಎಂದರು.
ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತç ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ, ರಾಜ್ಯದ ಪೌರಾಡಲಿತ ಸಚಿವ ರಹಿಮ್ ಖಾನ್, ಸಂಸದ ಸಾಗರ ಖಂಡ್ರೆ, ಜಿಲ್ಲೆಯ ಇತರೆ ಜನಪ್ರತಿನಿಧಿಗಳು, ಪಕ್ಷಾತೀತವಾಗಿ ಎಲ್ಲರನ್ನು ಅವ್ಹಾನಿಸಲಾಗಿದೆ ಎಂದವರು ಹೇಳಿದರು.
ಈಗಾಗಲೇ ತೆಲಂಗಣಾ ಹಾಗೂ ಆಂದ್ರಪ್ರದೇಶದಲ್ಲಿ ಅಲ್ಲಿಯ ಸರ್ಕರ ಹಾಗೂ ಅಧಿಕಾರಿಗಳು ಖುದ್ದು ಮುತಿವರ್ಜಿ ವಹಿಸಿ ತೆಲುಗಿನಲ್ಲಿ ಈ ನಾಟಕ ಪ್ರದರ್ಶನ ಮಾಡುತ್ತಿದ್ದು, ಅದನ್ನು ಕನ್ನಡದಲ್ಲಿ ಅನುವಾದಿಸಲಾಗಿದೆ. ಕನ್ನಡದಲ್ಲಿ ಇದನ್ನು ಪ್ರಚುರಪಡಿಸಲಾಗುತ್ತಿದೆ. ಅಂಬೇಡ್ಕರ್‌ರು ಯಾವುದೇ ಜಾತಿಗೆ ಸೀಮಿತವಲ್ಲದ ಮಹಾನುಭಾವರು. ಎಲ್ಲರಿಗೂ ಬೇಕಾದ ನೇತಾರ. ಹಾಗಾಗಿ ಜಿಲ್ಲೆಯ ಎಲ್ಲ ಚಿಂತಕರು, ಸಾಹಿತಿಗಳು, ವಿದ್ವಾಂಸರು, ಶಿಕ್ಷಣ ಪ್ರೇ,ಮಗಳು, ಸಮಘಟನೆಗಳ ಪ್ರಮುಖರು ಈ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬೆಲ್ದಾರ್ ಕರೆ ಕೊಟ್ಟರು.
ಹುಮನಾಬಾದ್ ಮಾಜಿ ತಾಲೂಕು ಪಂಚಾಯತ ಅಧ್ಯಕ್ಷ ರಮೆಶ ಡಾಕುಳಗಿ ಮಾತನಾಡಿ, ವಿಕಸಸಸೌಧದ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ಡಾ.ಬಿ.ಆರ್ ಅಂಬೇಡದಕರ್ ಸ್ಪೂರ್ತಿ ಸೌಧ ಹಾಗೂ ವಸ್ತು ಸಂಗ್ರಹಾಲಯ ನಿರ್ಮಿಸಲು ಮುಖ್ಯಮಂತ್ರಿಗಳು ಮುಂದಾಗಿರುವುದು ತುಂಬ ಖುಷಿ ವಿಚಾರ. ಅದಕ್ಕೆ 87 ಕೋಟಿ ಅನುದಾನ ಸಹ ಒದಗಿಸಿ ನಮ್ಮ ಬಹು ದಿನಗಳ ಕನಸ್ಸು ಸಾಕಾರಗೊಳಿಸಿರುವರು ಎಂದರು.
ಈಗಾಗಲೇ ನಾಗಮೋಹನದಾಸ ಸಮಿತಿಗೆ ಎರಡು ತಿಂಗಳು ಕಾಲಾವಕಶ ನೀಡಿ ಮತ್ತೊಮ್ಮೆ ರಾಜ್ಯಾದ್ಯಂತ ಸಕರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ ಅವರ ನೇತೃತ್ವದಲ್ಲಿ ದತ್ತಾಂಶ ಸಂಗ್ರಹಿಸಿ ಎಲ್ಲ ಜಾತಿಗಳ ಪುನರ ಸವೇ ಕಾರ್ಯ ನಡೆಸಿ ಒಳ ಮೀಸಲಾತಿ ಜಾರಿ ಮಾಡಲು ತಿರ್ಮನಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಬಣ್ಣಿಸಿದರು. ದಲಿತ ಮುಖಂಡರಾದ ಬಾಬುರಾವ ಪಾಸ್ವಾನ ಮಾತನಾಡಿದರು.
ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಪ್ರದೀಪ ನಾಟೇಕರ್, ಸಂದೀಪ ಕಾಂಟೆ, ರಮೇಶ ಮಂದಕನಳ್ಳಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.