ಯಾದಗಿರಿ : ಜಿಲ್ಲೆಯ ವಡಗೇರಾ ತಾಲ್ಲೂಕಿನ ಹಿರೇ ತುಮಕೂರು ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ನವರ 45ನೇ ವರ್ಷದ ರಥೋತ್ಸವ ಬಹು ವಿಜೃಂಭಣೆಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳ ಪಠಣದೊಂದಿಗೆ ಸಹಸ್ರಾರು ಜನರ ಮಧ್ಯೆ ರಥೋತ್ಸವ ಜರಗಿತು.
ರವಿವಾರ ಬೆಳಿಗ್ಗೆ ನಿಜ ಶರಣ ಅಂಬಿಗರ ಚೌಡಯ್ಯನ ಭಾವಚಿತ್ರ ಪಲ್ಲಕ್ಕಿಯಲ್ಲಿಟ್ಟಿಕೊಂಡು ಭಾಜಿ,ಭಜಂತ್ರಿ ಮೂಲಕ ಗಂಗಸ್ನಾನಕ್ಕೆ ಹೋಗಿ ನಂತರ ಶಿವಲಿಂಗಕ್ಕೆ ವಿಶೇಷ ರುದ್ರಾ ಭಿಷೇಕ ಹಾಗೂ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾ ಯಿತು.

ಅಲಂಕೃತ ರಥವನ್ನು ಅಂಬಿಗರ ಚೌಡಯ್ಯನವರ ವಚನಗಳನ್ನು ಪಠಿಸುತ್ತ ಭಕ್ತಾದಿಗಳು ರಥ ಎಳೆದಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ರಾಜಗುರು ಸ್ವಾಮಿ ವೇದ ವ್ಯಾಸ ಪೀಠ ಕಕಳ್ಳಿ
ಉಮೇಶ ಕೆ ಮುನ್ನಾಳ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಭಾಗವಿಸಿದರುರಾಜ್ಯದಲ್ಲೇ 45ನೇ ವರ್ಷದ ನಿಜಶರಣ ಅಂಬಿಗರ ಚೌಡಯ್ಯನವರ ರಥೋತ್ಸವ ಮತ್ತು ಬೃಹತ್ ಆಕಾರ ದೇವಸ್ಥಾನ ಮಾಡಿರಿವುದು. ಸಮಾಜದ ಓಳ್ಳೆ ಬೆಳವಣಿಗೆ ಮತ್ತು ಶ್ಲಾಘನಿಯ ಎಂದು ಶ್ರೀ ರಾಜಗುರು ಸ್ವಾಮಿಜಿ ವೇದ ವ್ಯಾಸ ಪೀಠ ಕರ್ಕಕಳ್ಳಿ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ದೇವಿಂದ್ರಪ್ಪ, ಚೌಡಯ್ಯ, ಯಂಕಪ್ಪ, ಶಿವಪ್ಪ, ಸೈದಪ್ಪ, ಚನ್ನಪ್ಪ ವೆಂಕಟೇಶ, ಬಸ್ಸು, ಮೋನೇಶ, ಬಸವರಾಜ, ಮಲ್ಲಯ್ಯ ಸಾಬಣ್ಣ ಶರಣು, ಶ್ರೀನಿವಾಸ, ನಿಂಗಪ್ಪ, ವೆಂಕಟೇಶ, ದೇವಪ್ಪ, ಲಕ್ಷ್ಮೀರಡ್ಡಿ ಹೊನ್ನಪ್ಪ ಬಸವರಾಜ ಚಿನ್ನು ಪ್ರಭು, ಗಂಗಪ್ಪ, ಮೌನೇಶ ಸೇರಿದಂತೆ ಅನೇಕು ಭಾಗವಹಿಸಿದರು ಮತ್ತು ಅಂಬಗರ ಚೌಡಯ್ಯ ಸಂಘದ ಪಧಾಧಿಕಾರಿಗಳು ಹಾಗೂ ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಭಾಗಿವಹಿಸಿ ಅದ್ಧೂರಿ ರಥೋತ್ಸವಕ್ಕೆ ಸಾಕ್ಷಿಯಾದರು.