Saturday, May 24, 2025
Homeಬೀದರ್ಬೀದರನಲ್ಲಿ ಬೋಮ್ಮಗೊಂಡೇಶ್ವರ ಉತ್ಸವ

ಬೀದರನಲ್ಲಿ ಬೋಮ್ಮಗೊಂಡೇಶ್ವರ ಉತ್ಸವ

ಬೀದರ್: ಮಹಾತ್ಮ ಬೊಮ್ಮಗೊಂಡೇಶ್ವರ ತತ್ವಗಳ ಹೆಚ್ಚು ಹೆಚ್ಚು ಪ್ರಚಾರ ಆಗಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಹಾತ್ಮ ಬೊಮ್ಮಗೊಂಡೇಶ್ವರ ಉತ್ಸವದಲ್ಲಿ ಅವರು ಮಾತನಾಡಿದರು.
ಎಲ್ಲರೂ ಬೊಮ್ಮಗೊಂಡೇಶ್ವರ ಇತಿಹಾಸ ಅರಿಯಬೇಕು. ಅವರ ಆದರ್ಶ ತತ್ವಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಬೊಮ್ಮಗೊಂಡೇಶ್ವರ ಕುರಿತು ಹೆಚ್ಚಿನ ಕೃತಿಗಳು ಹೊರ ಬರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿ, ಬೊಮ್ಮ ಗೊಂಡೇಶ್ವರ ಜೀವನ ಮತ್ತು ಸಾಧನೆಗಳನ್ನು ಯುವ ಪೀಳಿಗೆಗೆ ತಿಳಿಸಲು ಉತ್ಸವ ಹಮ್ಮಿಕೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಉತ್ಸವ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಮಹಾತ್ಮ ಬೊಮ್ಮಗೊಂಡೇಶ್ವರ ಪ್ರಶಸ್ತಿ ಸ್ವೀಕರಿಸಿದ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಎಂ. ಮೇತ್ರಿ ಅವರು ಬೊಮ್ಮಗೊಂಡೇಶ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾರಕರ್ ಮಾತನಾಡಿದರು.
ಸಾಹಿತಿ ಸುನಿತಾ ಕೂಡ್ಲಿಕರ್ ರಚಿತ ಸಾಂಸ್ಕøತಿಕ ವೀರ ಬೊಮ್ಮಗೊಂಡೇಶ್ವರ ಕೃತಿ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ನಾಟ್ಯಶ್ರೀ ನೃತ್ಯಾಲಯ ಹಾಗೂ ವಿವಿಧ ಕಲಾ ತಂಡಗಳ ಕಲಾವಿದರು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮ ಸಭಿಕರ ಮನ ರಂಜಿಸಿತು.
ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಉತ್ಸವವನ್ನು ಉದ್ಘಾಟಿಸಿದರು. ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಕನಕ ಗುರುಪೀಠ ತಿಂಥಣಿ ಬ್ರಿಡ್ಜ್‍ನ ಬೀರಲಿಂಗದೇವರು, ಸಿದ್ಧಯ್ಯ ಆಧುನಿಕ ಒಡೆಯರ್, ಭಂತೆ ಸಂಘರಖ್ಖಿತ, ಉಚ್ಚಾದ ಬಾಲ ತಪಸ್ವಿ ಗೋಪಾಲ್ ಮುತ್ಯಾ, ಸರ್ದಾರ್ ಮನ್‍ಮೀತ್ ಸಿಂಗ್ ಗ್ರಂಥಿ ಮುಖಂಡರಾದ ಪಂಡಿತರಾವ್ ಚಿದ್ರಿ, ಗೀತಾ ಚಿದ್ರಿ, ಮಲ್ಲಿಕಾರ್ಜುನ ಬಿರಾದಾರ (ಪರಿಹಾರ), ಬಸವರಾಜ ಧನ್ನೂರ, ಸೋಮಶೇಖರ ಬಿರಾದಾರ, ಮಾಳಪ್ಪ ಅಡಸಾರೆ, ಸುರೇಶ್ ಚನಶೆಟ್ಟಿ, ಡಾ. ಸುಚಿತಾನಂದ್ ಮಲ್ಕಾಪುರೆ, ಡಾ. ಜಿ.ಬಿ. ಮಲ್ಲಿಕಾರ್ಜುನ, ಬಾಬುರಾವ್ ಬರಿದಾಬಾದ್, ಸಂಜೀವಕುಮಾರ ಅತಿವಾಳೆ, ದೇವಪ್ಪ ಜಾಂಬೋಳೆ, ವಿಜಯಕುಮಾರ ಸೋನಾರೆ, ಡಾ. ರಾಜಕುಮಾರ ಹೆಬ್ಬಾಳೆ, ಸುಭಾಷ್ ನಾಗೂರೆ, ಡಾ. ಶರಣಪ್ಪ ಮಲಗೊಂಡ, ಪ್ರಕಾಶ ದೇಶಮುಖ, ಹಣಮಂತ ಮಲ್ಕಾಪುರ, ವಿಜಯಕುಮಾರ ಡುಮ್ಮೆ, ವಿಜಯಕುಮಾರ ಮಲ್ಕಾಪುರೆ, ರವಿ ದುರ್ಗೆ, ಬಾಬುರಾವ್ ಕಾಶೆಂಪುರೆ, ಕೆ.ಡಿ. ಗಣೇಶ್, ಕಲ್ಲಪ್ಪ ರಾಯಗೊಂಡ, ತುಕಾರಾಮ ಚಿಮಕೋಡೆ, ಸಚಿನ್ ಮಲ್ಕಾಪುರ, ಮಲ್ಲಿಕಾರ್ಜುನ್ ಮುರ್ಕಿ, ಎಂ.ಪಿ. ವೈಜಿನಾಥ, ಸಿದ್ದು ಬಾವಗಿ ಮತ್ತಿತರರು ಇದ್ದರು.
ನಾಗಪ್ಪ ಜಾನಕನೋರ ನಿರೂಪಿಸಿದರು. ವಿಜಯಕುಮಾರ ಬ್ಯಾಲಹಳ್ಳಿ ಸ್ವಾಗತಿಸಿದರು. ಸುನಿಲ್ ಚಿಲ್ಲರ್ಗಿ ವಂದಿಸಿದರು.
————-
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3