ಬೀದರ್: ಜಾಗತಿಕ ಸಮಸ್ಯೆಗಳಿಗೆ ಬಸವ ತತ್ವವೇ ಪರಿಹಾರವಾಗಿದೆ. ಬಸವಾದಿ ಶರಣರು ರಚಿಸಿದ ವಚನಗಳು ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತವೆ. ಎಲ್ಲಾ ಧರ್ಮಗಳಲ್ಲೂ ದೇವರು ಒಬ್ಬನೆ ಎಂಬ ನಂಬಿಕೆಯಿದೆ. ಪರಸ್ಪರ ಸಾಮರಸ್ಯದಿಂದ ಬದುಕುವುದು ಇಂದಿನ ಅವಶ್ಯಕತೆಯಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್ ತಿಳಿಸಿದರು.
ನಗರದ ಪಾಪನಾಶ ಗೇಟ್ ಸಮೀಪದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ರಾಷ್ಟಿಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕನಾಗಲಾಂಬಿಕಾ ಮಹಿಳಾ ಗಣ ಹಾಗೂ ಲಿಂಗಾಯತ ಸಮಾಜದ ವತಿಯಿಂದ ಜರುಗಿದ ಲಿಂಗಾಯತ ಧರ್ಮದ ಮಹಾದಂಡನಾಯಕರ ಸ್ಮರಣೋತ್ಸವದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಪೂಜ್ಯ ಮಾತೆ ಮಹಾದೇವಿಯವರು ಬದುಕಿದ್ದಾಗ ಅವರು ನೀಡಿದ ಸಲಹೆಗಳು ಇಂದಿಗೂ ನನಗೆ ನೆನಪಿದೆ. ಬಸವ ತತ್ವವನ್ನು ಅತ್ಯಂತ ಉತ್ತುಂಗ ಶಿಖರಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೀದರ ನಗರದಲ್ಲಿ ರಾಷ್ಟಿçÃಯ ಬಸವ ದಳವನ್ನು ಗಟ್ಟಿಯಾಗಿ ನೆಲೆಯೂರಲು ಮಾತಾಜಿ ಕಾರಣರಾಗಿದ್ದಾರೆ. ಇಂದು ಅವರ ಮಾರ್ಗದಲ್ಲಿ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಹಾಗೂ ಶರಣರೆಲ್ಲರೂ ಸಾಗುತ್ತಿರುವುದು. ಗುರುವಿನ ಋಣ ತೀರಿಸಲು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಮಾತನಾಡಿ ಮಾತೆ ಮಹಾದೇವಿಯವರು ಬೀದರನಲ್ಲಿ ಪ್ರವಚನ ಮಾಡುವ ಸಂದರ್ಭದಲ್ಲಿ ನಾನೂ ಕೂಡಾ ಕೆಲಕಾಲ ಕಾರ್ಯಕರ್ತನಾಗಿ ದುಡಿದಿದ್ದೆ. ಅವರ ಅಭಿನಂದನಾ ಸಮಾರಂಭ ಬೀದರನಲ್ಲಿ ನೆರವೇರಿಸಿ ಋಣ ತೀರಿಸುವ ಅವಕಾಶ ನನಗೂ ಸಿಕ್ಕಿದ್ದು ಸೌಭಾಗ್ಯ. ಬಸವ ತತ್ವವನ್ನು ವಿಶ್ವದಾದ್ಯಂತ ಪಸರಿಸಲು ಎಲ್ಲರೂ ಒಗ್ಗೂಡಿ ಸಾಗುವ ಅವಶ್ಯಕತೆ ಇದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಬೀದರ ಜಿಲ್ಲೆ ಇದು ರಾಷ್ಟಿçÃಯ ಬಸವ ದಳದ ತವರೂರು ಎಂದು ಮಾತೆ ಮಹಾದೇವಿಯವರು ಯಾವಾಗಲೂ ಹೇಳುತ್ತಿದ್ದರು. ಇಂತಹ ದಳವನ್ನು ಮತ್ತೆ ದೇಶದಾದ್ಯಂತ ಸಂಘಟಿಸುವುದು ನಮ್ಮ ಗುರಿಯಾಗಬೇಕು. ಪರಸ್ಪರ ವೈಮನಸ್ಸು, ಭಿನ್ನಾಭಿಪ್ರಾಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸುಗಳು ಒಡೆಯುವ ಬರಹಗಳನ್ನು ಬರೆಯಲು ಯಾರೂ ಆಸ್ಪದ ಕೊಡಬಾರದು. ಸಂಘಟನೆಯ ಕಡೆಗೆ ಗಮನ ಹರಿಸಬೇಕೆಂದು ತಿಳಿಸಿದರು. ಏಳನೆಯ ಮಹಾದಂಡನಾಯಕರ ಸ್ಮರಣೋತ್ಸವ ಗಂಗಾವತಿಯಲ್ಲಿ ದಳದ ವತಿಯಿಂದ ಆಯೋಜಿಸಲು ಒಪ್ಪಿಕೊಂಡಿದ್ದಾರೆ. ಅವರಿಗೆ ಧ್ವಜ ಹಸ್ತಾಂತರ ಮಾಡಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ಶೈಲೇಂದ್ರ ಬೆಲ್ದಾಳೆ ವಹಿಸಿದ್ದರು. ಮೆರವಣಿಗೆಯಲ್ಲಿ ಸಂಸದ ಸಾಗರ ಖಂಡ್ರೆಯವರು ಪಾಲ್ಗೊಂಡಿದ್ದರು. ಯುವಕರ ಜೊತೆ ಭರ್ಜರಿ ಹೆಜ್ಜೆ ಹಾಕಿದರು.
ಧಾರವಾಡ ಸುಜಾತಾ ಯರಗಟ್ಟಿ ಅವರಿಗೆ ಬಸವಾತ್ಮಜೆ ಪ್ರಶಸ್ತಿ ಹಾಗೂ ಖವಟಕೊಪ್ಪದ ರಾಷ್ಟಿçÃಯ ಬಸವ ದಳದ ಹಿರಿಯ ಶರಣ ಅಶೋಕ ನಾವಿ ಅವರನ್ನು ಲಿಂಗಾನAದ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಡ್ಯದ ಶಿವು ಜನ್ಯ ಹಾಗೂ ದೇವದುರ್ಗದ ಪುಟಾಣಿ ವಿನಾಯಕ ಗಾಯನ ಸಭೀಕರ ಮನಗೆಲ್ಲುವಂತೆ ಮಾಡಿತು. ಗಾಂಧಿನಗರದ ಪುಟಾಣಿ ಮಕ್ಕಳು ವಚನ ನೃತ್ಯ ನಡೆಸಿಕೊಟ್ಟರು.
ಸಮ್ಮುಖ ವಹಿಸಿದ್ದ ಪೂಜ್ಯ ಶ್ರೀ ಮಾತೆ ಸತ್ಯಾದೇವಿಯವರು ಆಶಿರ್ವಚನ ಮಾಡಿದರು. ಕೂಡಲ ಸಂಗಮದ ಹೂವನೂರಿನ ಪೂಜ್ಯ ಲಿಂಗಾರೂಢರು, ಲಿಂಗಪಟ್ಟಣದ ಓಂಕಾರೇಶ್ವರ ಸ್ವಾಮಿಗಳು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ರಾಜಶ್ರೀ ಶ್ರೀಕಾಂತ ಸ್ವಾಮಿ ಮಾತನಾಡಿದರು. ಇದೇ ವೇಳೆ ಕಾರ್ಯಕ್ರಮದ ಯಶಸ್ವಿಗೆ ದುಡಿದ ಶರಣ ಶರಣೆಯರಿಗೆ ಸನ್ಮಾನಿಸಲಾಯಿತು.
ನಿರ್ಣಯಗಳು: ರಾಷ್ಟಿಯ ಬಸವ ದಳವನ್ನು ರಾಷ್ಟçದಾದ್ಯಂತ ಸಂಘಟಿಸುವುದು, ಮೇ ತಿಂಗಳಿನಲ್ಲಿ ಇಂಗ್ಲೆಂಡಿನಲ್ಲಿ ಬಸವ ಶಾಂತಿಯಾತ್ರೆ ಕೈಗೊಳ್ಳುವುದು, ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆಯ ಹೋರಾಟ ತೀವ್ರಗೊಳಿಸುವುದು, ಪ್ರತೀ ವರ್ಷ ಒಂದೊAದು ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ ಹಮ್ಮಿಕೊಳ್ಳುವುದು, ಪ್ರತೀ ಎರಡು ವರ್ಷಗಳಿಗೊಮ್ಮೆ ವಿದೇಶಗಳಲ್ಲಿ ಅಂತರಾಷ್ಟಿಯ ಬಸವ ತತ್ವ ಸಮ್ಮೇಳನ ಆಯೋಜಿಸುವುದು ಈ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ನಿರ್ಣಯ ಮಂಡಿಸಿದರು. ಶ್ರೀಕಾಂತ ಸ್ವಾಮಿ ಅನುಮೋದಿಸಿದರು. ಶರಣರು ಕರತಾಡನ ಮೂಲಕ ಒಪ್ಪಿಗೆ ಸೂಚಿಸಿದರು.
ಮಹಾರುದ್ರ ಡಾಕುಳಗೆ ನಿರೂಪಿಸಿದರೆ, ಡಾ. ಪೂಜಾ ಸಿದ್ಧವೀರ ಸ್ವಾಗತಿಸಿದರು. ಶ್ರೀನಾಥ ಕೋರೆ ವಂದಿಸಿದರು. ವೇದಿಕೆ ಮೇಲೆ ಪ್ರಮುಖರಾದ ಬಸವರಾಜ ಪಾಟೀಲ ಶಿವಪುರ, ಶಿವರಾಜ ಶೆಟಕಾರ, ಕಲ್ಲಪ್ಪ ದೇಶಮುಖ, ಡಾ. ಮಹೇಶ ಬಿರಾದಾರ, ಶಿವರಾಜ ಪಾಟೀಲ, ಶಿವಶರಣಪ್ಪ ಪಾಟೀಲ, ಪ್ರಕಾಶ ದೇಶಮುಖ, ಬಸವರಾಜ ಪಾಟೀಲ ಚಿಕ್ಕಪೇಟ, ಧರ್ಮೇಂದ್ರ ಪೂಜಾರಿ, ಗಣಪತಿ ದೇಶಮುಖ, ಜಗನ್ನಾಥ ಮೂಲಗೆ, ಬಸವರಾಜ ಪಾಟೀಲ ಲಿಂಗದಳ್ಳಿ, ಬಸವರಾಜ ಸಂಗಮದ್, ಗಣಪತಿ ಬಿರಾದಾರ, ಸತೀಶ ಪಾಟೀಲ ಹಾರೂರಗೇರಿ ಸೇರಿದಂತೆ ಹಲವರಿದ್ದರು.
————–