Friday, May 23, 2025
Homeಭಕ್ತಿಬೊಮ್ಮಗೊಂಡೇಶ್ವರ ಉತ್ಸವ: ಭಿತ್ತಿಪತ್ರ ಬಿಡುಗಡೆ

ಬೊಮ್ಮಗೊಂಡೇಶ್ವರ ಉತ್ಸವ: ಭಿತ್ತಿಪತ್ರ ಬಿಡುಗಡೆ

ಬೀದರ್: ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದಿಂದ ಮಾರ್ಚ್ 23 ರಂದು ಹಮ್ಮಿಕೊಂಡಿರುವ ಮಹಾತ್ಮ ಬೊಮ್ಮಗೊಂಡೇಶ್ವರ ಉತ್ಸವದ ಭಿತ್ತಿಪತ್ರ ಹಾಗೂ ಕರಪತ್ರ ನಗರದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು.
ನಾಡಿಗೆ ಬೊಮ್ಮಗೊಂಡೇಶ್ವರ ಕೊಡುಗೆ ಅನನ್ಯ. ಅವರ ಜೀವನ ಮತ್ತು ಸಾಧನೆಯನ್ನು ಜನರಿಗೆ ತಿಳಿಸಲು ನಗರದಲ್ಲಿ ಬೊಮ್ಮಗೊಂಡೇಶ್ವರ ಉತ್ಸವ ಆಯೋಜಿಸಿರುವುದು ಪ್ರಸಂಸನೀಯ ಎಂದು ಭಿತ್ತಿಪತ್ರ ಬಿಡುಗಡೆ ಮಾಡಿದ ಗೊಂಡ ಸಮಾಜದ ಹಿರಿಯ ಮುಖಂಡ ಭೀಮಸಿಂಗ್ ಮಲ್ಕಾಪುರ ಹೇಳಿದರು.
ಬೊಮ್ಮಗೊಂಡೇಶ್ವರ ಉತ್ಸವದ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರಪತ್ರ ಬಿಡುಗಡೆಗೊಳಿಸಿದ ಗಾಂಧಿಗಂಜ್‍ನ ಕನಕ ಭವನದ ಅಧ್ಯಕ್ಷ ನಾಗರಾಜ ನಂದಗಾಂವ್ ತಿಳಿಸಿದರು.
ಬೊಮ್ಮಗೊಂಡೇಶ್ವರ ಉತ್ಸವದ ಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಜಿಲ್ಲೆಯ ತಾಲ್ಲೂಕು ಕೇಂದ್ರಗಳು, ಗ್ರಾಮೀಣ ಪ್ರದೇಶಗಳಲ್ಲಿ ಭಿತ್ತಿಪತ್ರ, ಬ್ಯಾನರ್ ಅಳವಡಿಕೆ, ಕರಪತ್ರ ವಿತರಣೆ, ಸಭೆ, ಸಮಾರಂಭಗಳ ಮೂಲಕ ಉತ್ಸವದ ಪ್ರಚಾರ ಮಾಡಲಾಗುವುದು. ಅರ್ಥಪೂರ್ಣ ಉತ್ಸವದ ಸಂಘಟನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಹೇಳಿದರು.
ಮೈಲಾರ ಮಲ್ಲಣ್ಣ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ಕೆ.ಡಿ. ಗಣೇಶ, ಬೊಮ್ಮಗೊಂಡೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೊಗಲಪ್ಪ ಚಿಲ್ಲರ್ಗಿ, ಡಾ. ಉದಯಸಿಂಗ್, ಪ್ರಮುಖರಾದ ದೇವಪ್ಪ ಚಾಂಬೋಳೆ, ಎಂ.ಪಿ. ವೈಜಿನಾಥ, ವಿಜಯಕುಮಾರ ಬ್ಯಾಲಹಳ್ಳಿ, ಬಸವರಾಜ ಬಾವಗಿ, ರಮೇಶ ಮರ್ಜಾಪುರ, ಬಸವರಾಜ ನಂದಗಾಂವ್, ರಾಮಣ್ಣ ಗಾದಗಿ, ಸಂಜುಕುಮಾರ ತಳಘಟ, ಬಾಬು ಅಲ್ಲೂರೆ, ಬಕ್ಕಪ್ಪ ನಾಗೂರೆ, ಸುನೀಲ್ ಚಿಲ್ಲರ್ಗಿ, ಗೋವಿಂದ ದುರ್ಗೆ, ಪ್ರಕಾಶ್ ಚಿಲ್ಲರ್ಗಿ, ಕಲ್ಲಪ್ಪ ಶಹಾಪುರ, ಅಶೋಕ ನ್ಯಾಮತಾಬಾದ್, ಪ್ರಲ್ಹಾದ್ ಚಿಟ್ಟಾವಾಡಿ, ಪಂಢರಿ ಜಮಾದಾರ್, ನರಸಪ್ಪ ಸೋಲಪುರ, ಆನಂದ ಸೋಲಪುರ, ಸಿದ್ದು ಬಾವಗಿ, ಸುಧಾಕರ ಮಲ್ಕಾಪುರ, ಅನಿಲ್ ಚಿಲ್ಲರ್ಗಿ, ವಿಜಯಕುಮಾರ ಮಲ್ಕಾಪುರೆ ಮತ್ತಿತರರು ಇದ್ದರು.
——————–
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3