ಬೀದರ್: ಹನ್ನೊಂದು ದಿನಗಳ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಹಾಗೂ ಹಾವಗಿ ಸ್ವಾಮಿ ಜಾತ್ರಾ ಮಹೋತ್ಸವ ಭಾಲ್ಕಿ ತಾಲ್ಲೂಕಿನ ಶಿವಣಿ ಗ್ರಾಮದಲ್ಲಿ ಬುಧವಾರ ಸಂಭ್ರಮದ ಮಧ್ಯೆ ತೆರೆ ಕಂಡಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ರಥದಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ, ಪುರವಂತರ ಕುಣಿತ, ಭಜನೆ, ಕೋಲಾಟ, ಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆ ಮೆರುಗು ಹೆಚ್ಚಿಸಿದರು.
ರೇಣುಕಾಚಾರ್ಯರಿಗೆ ಜಯವಾಗಲಿ, ಹಾವಗಿ ಸ್ವಾಮಿ ಅವರಿಗೆ ಜಯವಾಗಲಿ ಎಂಬ ಘೋಷಣೆಗಳು ಮೊಳಗಿದವು. ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಿವಣಿ-ಹಲಬರ್ಗಾ- ಹೈದರಾಬಾದ್ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಮಾನವನಿಗೆ ಧರ್ಮದ ಬೆಳಕು ಅಗತ್ಯವಾಗಿದೆ ಎಂದು ಹೇಳಿದರು.
ಧರ್ಮವನ್ನು ಪಾಲಿಸುವವರು, ಧರ್ಮದ ಮಾರ್ಗದಲ್ಲಿ ಸಾಗುವವರನ್ನು ಧರ್ಮವೇ ರಕ್ಷಿಸುತ್ತದೆ. ಧರ್ಮದ ಮಾರ್ಗದಲ್ಲಿ ನಡೆಯದಿದ್ದರೆ ಮುಕ್ತಿ ಸಿಗದು ಎಂದು ಹೇಳಿದರು.

ಕೊಲನಪಾಕದ ವೀರಸೋಮೇಶ್ವರ ಉದ್ಭವ ಲಿಂಗದಲ್ಲಿ ಅವತರಿಸಿದ ರೇಣುಕಾಚಾರ್ಯರು ಎಲ್ಲೆಡೆ ಧರ್ಮ ಪ್ರಚಾರ ಮಾಡಿದ್ದರು. ರಂಭಾಪುರಿ ಪೀಠ ಸ್ಥಾಪಿಸಿದ್ದರು. ಜನರಿಗೆ ಲಿಂಗ, ವಿಭೂತಿ, ರುದ್ರಾಕ್ಷಿ ಕೊಟ್ಟಿದ್ದರು. ಆಧ್ಯಾತ್ಮದ ದಾರಿ ತೋರಿದ್ದರು. ಮಾನವ ಕಲ್ಯಾಣದ ಕಾರ್ಯಗಳನ್ನು ಮುಗಿಸಿ ಮತ್ತೆ ಲಿಂಗದಲ್ಲಿ ಐಕ್ಯರಾಗಿದ್ದರು ಎಂದು ತಿಳಿಸಿದರು.
ರೇಣುಕಾಚಾರ್ಯರು ಸಕಲ ಜೀವರಾಶಿಗಳಿಗೆ ಒಳಿತು ಬಯಸಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶ್ರೇಷ್ಠ ಸಂದೇಶ ನೀಡಿದ್ದರು ಎಂದು ನುಡಿದರು.
ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ರೇಣುಕಾಚಾರ್ಯರು ಸಕಲ ಜೀವರಾಶಿಗಳಿಗೆ ಒಳಿತು ಬಯಸಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶ್ರೇಷ್ಠ ಸಂದೇಶ ನೀಡಿದ್ದರು ಎಂದು ನುಡಿದರು.
ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
—————–