Friday, January 16, 2026
HomePopularಬಸವ ಜಯಘೋಷ ದೊಂದಿಗೆ ಬೀದರ್-ಬೆಂಗಳೂರು ವಿಶೇಷ ರೈಲು ಸೇವೆಗೆ ಸಂಸದ ಸಾಗರ ಖಂಡ್ರೆ ಚಾಲನೆ

ಬಸವ ಜಯಘೋಷ ದೊಂದಿಗೆ ಬೀದರ್-ಬೆಂಗಳೂರು ವಿಶೇಷ ರೈಲು ಸೇವೆಗೆ ಸಂಸದ ಸಾಗರ ಖಂಡ್ರೆ ಚಾಲನೆ

ಬಸವ ಜಯಘೋಷ ದೊಂದಿಗೆ ಬೀದರ್-ಬೆಂಗಳೂರು ವಿಶೇಷ ರೈಲು ಸೇವೆಗೆ ಸಂಸದ ಸಾಗರ ಖಂಡ್ರೆ ಚಾಲನೆ
ಬೀದರ್ : ಬೆಂಗಳೂರನಲ್ಲಿ ನಾಳೆ ನಡೆಯಲಿರುವ “ಬಸವ ಸಂಸ್ಕೃತಿ ಅಭಿಯಾನ” ಸಮಾರೋಪ ಸಮಾರಂಭಕ್ಕೆ ಬೀದರ ಲೋಕಸಭಾ ಕ್ಷೇತ್ರದಿಂದ ಬಸವ ಭಕ್ತರಿಗೆ ತೆರಳಲು ಸಂಸದರಾದ ಸಾಗರ ಖಂಡ್ರೆ ಅವರು ವಿಶೇಷ ರೈಲು ಸೇವೆಯ ವ್ಯವಸ್ಥೆಯನ್ನು ಮಾಡಿದ್ದರು, ಆ ರೈಲ್ವೆಗೆ ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆಯನ್ನು ನೀಡಿ, ಬಸವ ಭಕ್ತರ ಪ್ರಯಾಣ ಆರಾಮದಾಯಕವಾಗಲಿ ಎಂದು ಶುಭ ಹಾರೈಸಿದರು.
ಮಾಧ್ಯಮ ಮಿತ್ರರನ್ನು ಮಾತಾಡುತ್ತಾ, ಗುರು ಬಸವಣ್ಣನವರ ಜನ್ಮ ಸ್ಥಳ ಬಸವನ ಬಾಗೇವಾಡಿಯಿಂದ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ, ಅಕ್ಟೋಬರ್ 5 ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿರುವ “ಬಸವ ಸಂಸ್ಕೃತಿ ಅಭಿಯಾನಕ್ಕೆ” ಬಸವಣ್ಣ ನವರ ಕರ್ಮ ಭೂಮಿಯಾಗಿರುವ ನಮ್ಮ ಬೀದರ ಲೋಕಸಭಾ ಕ್ಷೇತ್ರದಿಂದ ಸಾವಿರಾರು ಬಸವ ಭಕ್ತ ಭಗವಾಹಿಸಲಿರುವ ನಮ್ಮ ಜನರ ಅರಾಮದಾಯಕ ಪ್ರಯಾಣದ ಸಲುವಾಗಿ ನಾನು ವಿಶೇಷ ರೈಲು ಸೇವೆಯನ್ನು ಮಾಡಿ ಇಂದು ಅದಕ್ಕೆ ಚಾಲನೆಯನ್ನು ನೀಡಿದ್ದೆನೆ ಎಂದು ತಿಳಿಸಿದರು.

12ನೇ ಶತಮಾನದಲ್ಲಿ ವಿಶ್ವದ ಮೊದಲನೇ ಪಾರ್ಲಿಮೆಂಟ್ “ಅನುಭವ ಮಂಟಪವನ್ನು” ಸ್ಥಾಪಿಸಿ, ಜಾತಿ ಪದ್ಧತಿ ನಿರ್ಮೂಲನೆಯನ್ನು ಮಾಡಿ, ಸಮ ಸಮಾಜದ ನಿರ್ಮಾಣ ಮಾಡಿದ ಮಹಾನ ಮಾನವತಾವಾದಿ ವಿಶ್ವಗುರು ಬಸವಣ್ಣ ನವರನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಗುರು ಬಸವಣ್ಣ ನವರನ್ನು ಕರ್ನಾಟಕ ರಾಜ್ಯದ ಸಂಸ್ಕೃತಿಕ ನಾಯಕ ಎಂದು ಘೋಷಣೆಯನ್ನು ಮಾಡಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಮಠಾಧೀಶರು “ಬಸವ ಸಂಸ್ಕೃತಿಕ ಅಭಿಯಾನ” ವನ್ನು ಹಮ್ಮಿಕೊಂಡಿದ್ದು ಬಹಳ ಸಂತೋಷದ ವಿಷಯವಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಸಮಾರಂಭ ಮುಗಿದ ಮೇಲೆ ಬಸವ ಭಕ್ತರು ಇದೇ ರೈಲ್ವೆ ಯಿಂದ ಬೆಂಗಳೂರಿಂದ ಬೀದರಗೆ ಬರಬಹುದು.
—————
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3