ಮೃತ ಯೋಗೇಶ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವಂತೆ ಸಿಎಂಗೆ ಮನವಿ
ಬೀದರ್, ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಎಸ್.ಟಿ. ಟೋಕರೆ ಕೋಳಿ ಸಮುದಾಯದ ದಿ. ಯೋಗೇಶ್ ಕೋಯಲೆ ಕೊಲೆಯಾದ ಪ್ರಕರಣದಲ್ಲಿ, ಮೃತರ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಗುರುವಾರ ಟೋಕರೆ ಕೋಳಿ ಸಮಾಜ ಸಂಘ ಪ್ರಮುಖರು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಗಣೇಶ ಹಬ್ಬದ ಅಂಗವಾಗಿ ತುಪ್ಪ ತರಲು ಹೊರಟಿದ್ದ ಯೋಗೇಶ್ ಕೋಯಲೆ (32) ಅವರನ್ನು ಆಗಸ್ಟ್ 27ರ ರಾತ್ರಿ ಹೊಳಸಮುದ್ರ ಗ್ರಾಮದ ಬಸ್ ನಿಲ್ದಾಣದ ಬಳಿ ರಾಹುಲ್ ಜಾಧವ್ ಎಂಬಾತ ಹರಿತವಾದ ವಸ್ತುವಿನಿಂದ ಕುತ್ತಿಗೆ ಮೇಲೆ ಹಲ್ಲೆ ಮಾಡಿದ್ದರಿಂದ ಅವರು ಸಾವನ್ನಪ್ಪಿದರು ಎಂದು ವಿವರಿಸಲಾಗಿದೆ.

ಈ ಘಟನೆ ಹಿನ್ನೆಲೆಯಲ್ಲಿ ಯೋಗೇಶ್ ಪತ್ನಿ ರೇಖಾಳಿಗೆ ಸರ್ಕಾರಿ ನೌಕರಿ, ಮೃತರ ಮೂರು ಮಕ್ಕಳ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸುವುದು ಹಾಗೂ ಕುಟುಂಬಕ್ಕೆ ತಕ್ಷಣವೇ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಘಟನೆಯ ಸಂಬAಧ ಕಮಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿ, ಪ್ರಕರಣ ಸಂಖ್ಯೆ 91/2025ರಡಿ ತನಿಖೆ ನಡೆಯುತ್ತಿದೆ.
“ಕೊಲೆಯಾದ ಯೋಗೇಶ್ ಕುಟುಂಬ ಈಗ ಬೀದಿಗೆ ಬಿದ್ದಂತಾಗಿದೆ. ಅವರು ಧಾಬಾದಲ್ಲಿ ಅಡಿಗೆ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು. ಈಗ ಪತ್ನಿ ಮತ್ತು ಮೂರು ಮಕ್ಕಳ ಭವಿಷ್ಯ ಅಂಧಕಾರದಲ್ಲಿದೆ. ಸರ್ಕಾರ ತಕ್ಷಣವೇ ನೆರವಿಗೆ ಬರಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್, ಸಮಾಜದ ಮುಖಂಡರಾದ ಸುನೀಲ ಖಾಸೆಂಪೂರ್, ಸುನೀಲ ಭಾವಿಕಟ್ಟಿ, ಶರಣಪ್ಪ ಖಾಂಶೆಪುರ್, ಮಾರುತಿ ಮಾಸ್ಟರ್, ಚಂದ್ರಕಾAತ ಹಳ್ಳಿಖೇಡಕರ್, ಶನ್ಮೂಖಪ್ಪಾ ವಾಲಿಕಾರ್ ಶೇಕಾಪೂರ ಇತರರು ಇದ್ದರು.
