ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರೀಸ್ ಕೇಂದ್ರದ ಸಂಚಾಲಕಿ ಬಿ.ಕೆ. ಸುನಂದಾ ಬೆಹೆನ್‌ಜಿ ಅವರು ಮಾತನಾಡಿ, ದಾದಿ ಪ್ರಕಾಶಮಣಿಯವರ ಜೀವನ, ಸೇವಾ ಚಟುವಟಿಕೆಗಳು ಹಾಗೂ ವಿಶ್ವಮಟ್ಟದಲ್ಲಿ ಬ್ರಹ್ಮಾಕುಮಾರೀಸ್ ಸಂಸ್ಥೆಯ ವಿಸ್ತರಣೆಯ ಕುರಿತು ಸ್ಮರಿಸಿದ್ದರು. ಅವರು 1922ರಲ್ಲಿ ಜನಿಸಿದ್ದು, 1969ರಲ್ಲಿ ಬ್ರಹ್ಮಾ ಬಾಬಾ ಅವರು ತಮ್ಮ ಶಕ್ತಿಯನ್ನು ದಾದಿ ಪ್ರಕಾಶಮಣಿಗೆ ಅರ್ಪಿಸಿದ ನಂತರ ಜಗತ್ತಿನಾದ್ಯಂತ ಸೇವಾಕಾರ್ಯದಲ್ಲಿ ಅವರು ಅಜರಾಮರರಾಗಿದ್ದರು ಎಂದು ಹೇಳಿದರು.

ಜಗತ್ತಿನ 140ಕ್ಕೂ ಹೆಚ್ಚು ದೇಶಗಳಲ್ಲಿ ಇಂದು ಸುಮಾರು 50 ಸಾವಿರ ಬಿ.ಕೆ. ಸಹೋದರಿಯರು ಹಾಗೂ 5,000ಕ್ಕೂ ಅಧಿಕ ಸಹೋದರರು ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿದ್ದಾರೆಂದು ವಿವರಿಸಿದರು. ಈ ತಿಂಗಳ 22ರಿಂದ 25ರ ವರೆಗೆ ಭಾರತ ಹಾಗೂ ನೇಪಾಳದ 6,000ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮಹಾ ರಕ್ತದಾನ ಅಭಿಯಾನ ನಡೆಯುತ್ತಿರುವುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ತೆಲಂಗಾಣ ಸಂಗಾರೆಡ್ಡಿ ಬ್ರಹ್ಮಾಕುಮಾರಿ ಕೇಂದ್ರದ ರೆಡ್ಡಿ ಸಂಚಾಲಕಿ ಬಿ.ಕೆ. ಸುಮಂಗಲಾ ಬಹೆನಜಿ ಅವರು ಮಾತನಾಡಿ ಸಂಗಾರೆಡ್ಡಿಯಲ್ಲಿ ಬ್ರಹ್ಮಾ ಬಾಬಾ ಅವರ ಕೇಂದ್ರ ನಿರ್ಮಾಣ ಮಾಡಬೇಕಿತ್ತು ತಮ್ಮ ಶುಭ ಕಾಮನೆ ಬೇಕೆಂದು ಕೇಳಿದಾಗ ಖಂಡಿತ್ತಾ ಆಗುತ್ತದೆ ಎಂದು ಭರವಸೆ ನೀಡಿದ್ದರು, ಅವರ ದೈವಿ ಶಕ್ತಿಯಿಂದ ಸಂಗಾರೆಡ್ಡಿಯಲ್ಲಿ ಬ್ರಹ್ಮಾಕುಮಾರಿ ಕೇಂದ್ರ ಸ್ಥಾಪನೆ ಜೋತೆಗೆ ಬೀದರ ತಾಲೂಕಿನ ಯೆದಲಾಪೂರ ಗ್ರಾಮದ ಹತ್ತಿರ ಸುಮಾರ 15 ಎಕರೆ ಜಮಿನಿನಲ್ಲಿ ವಿಸ್ತಾರವಾಗಿ ನಿರ್ಮಾಣಗೊಳ್ಳುತ್ತಿರುವ ರಿಟ್ರೀಟ್ ಕೇಂದ್ರ ಸ್ಥಾಪನೆ ಆಗಲು ದಾದಿಯವರ ದಿವ್ಯ ಶಕ್ತಿ ಗುಲ್ಜಾರ ದಾದಿ ಹಾಗೂ ಜಾನಕಿ ದಾದಿಯವರ ಪ್ರೇರಣಾ ಶಕ್ತಿಯಿಂದ ಸಾದ್ಯವಾಯಿತು ಎಂದು ತಿಳಿಸಿದ್ದರು.
