Friday, January 16, 2026
HomePopularಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ ಎಲ್ಲರಿಗೂ ಸ್ಫೂರ್ತಿ - ಸಿಇಓ ಡಾ.ಗಿರೀಶ ಬದೋಲೆ

ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ ಎಲ್ಲರಿಗೂ ಸ್ಫೂರ್ತಿ – ಸಿಇಓ ಡಾ.ಗಿರೀಶ ಬದೋಲೆ

ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ ಎಲ್ಲರಿಗೂ ಸ್ಫೂರ್ತಿ- ಸಿಇಓ ಡಾ.ಗಿರೀಶ ಬದೋಲೆ
ಬೀದರ್ : ಸಂಗೊಳ್ಳಿ ರಾಯಣ್ಣ ಬ್ರಿಟಿಷ್‌ರ ವಿರುದ್ಧ ಹೋರಾಡಿದ ಮಹಾನ್ ಹೋರಾಟಗಾರರಾಗಿದ್ದು ಅತ್ಯಂತ ಚಿಕ್ಕವಯಸ್ಸಿನಲ್ಲೇ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರಿಂದ ಮರಣದಂಡನೆಗೆ ಗುರಿಯಾಗುವ ಮೂಲಕ ಅಮರರಾಗಿದ್ದಾರೆ. ಸಂಗೊಳ್ಳಿ ರಾಯಣ್ಣನವರ ಜೀವನ ಯುವಕರಿಗೆ ಸ್ಫೂರ್ತಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು.
ಅವರಿಂದು 79ನೇಯ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಬೀದರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಗೊಳ್ಳಿ ರಾಯಣ್ಣನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು.
ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಕೇಳಿದೊಡನೆ ಯುವಕರಲ್ಲಿ ನವಶಕ್ತಿಯ ಪ್ರವಾಹ ಉಂಟಾಗುವಂತೆ ಸಂಗೊಳ್ಳಿ ರಾಯಣ್ಣನವರ ಹೆಸರು ಕೇಳಿದೊಡನೆ ಕರ್ನಾಟಕದ ತರುಣರಲ್ಲಿ ದೇಶಭಕ್ತಿಯ ಆವೇಶದ ಅಲೆಗಳೇಳುತ್ತವೆ. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಕಿತ್ತೂರು ರಾಣಿ ಚೆನ್ನಮ್ಮವರ ಬಲಗೈ ಬಂಟರಾಗಿ, ಕಿತ್ತೂರು ಸಾಮ್ರಾಜ್ಯದ ಸ್ವಾತಂತ್ರ‍್ಯ ಸೇನಾನಿಯಾಗಿ ಸಂಗೊಳ್ಳಿ ರಾಯಣ್ಣ ಹೋರಾಡಿದ ರೀತಿ ಅಪ್ರತಿಮವಾದುದು, ಅನುಪಮವಾದುದು. ಬಲಾಢ್ಯ ಬ್ರಿಟಿಷ್ ಸೈನ್ಯದ ಕಣ್ಣ ತಪ್ಪಿಸುತ್ತ ಗುಡ್ಡ ಕಾಡುಗಳಲ್ಲಿ ಅವಿತು ಗೆರಿಲ್ಲಾ ಮಾದರಿಯ ಯುದ್ಧ ಮಾಡುತ್ತ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.
ಯುದ್ಧದಲ್ಲಿ ಪಾಲ್ಗೊಂಡ ಸೈನಿಕರಿಗೆ ಅನ್ನ ವಸ್ತ್ರಗಳ ಸಂಗ್ರಹಣೆಗಾಗಿ ದಾಸೋಹ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದ ಸಂಗೊಳ್ಳಿ ರಾಯಣ್ಣ ಸಂಪನ್ಮೂಲಗಳ ಸದ್ಬಳಕೆ, ಸಂಪತ್ತಿನ ಸತ್ಪಾತ್ರದಾನದಂತಹ ಆರ್ಥಿಕ ಸಿದ್ಧಾಂತಗಳನ್ನು ಅಂದೇ ಅಳವಡಿಸಿಕೊಂಡು ಇಂದಿನ ನಮಗೆ ಮಾರ್ಗದಶಕರಾಗಿದ್ದಾರೆ” ಎಂದು ಕಿತ್ತೂರಿನ ಕೇಸರಿ ಸಂಗೊಳ್ಳಿ ರಾಯಣ್ಣನ ಧೀರೋದಾತ್ತ ವ್ಯಕ್ತಿತ್ವದ ಗುಣಗಾನ ಮಾಡಿದರು.
ಸಂಗೊಳ್ಳಿ ರಾಯಣ್ಣನವರ ಬಗ್ಗೆ ಉಪನ್ಯಾಸ ನೀಡಿದ ನಾಗೇಂದ್ರ ಧರಿಯವರು ಭಾರತದ ಸ್ವಾತಂತ್ರ‍್ಯ ಹೋರಾಟಗಾರರಿಗೆ ಸಂಗೊಳ್ಳಿ ರಾಯಣ್ಣ ಸ್ಫೂರ್ತಿಯಾದ ಕಥನವನ್ನು ಮನಮುಟ್ಟುವಂತೆ ಬಣ್ಣಿಸಿದರು. ಅಗಸ್ಟ್ 15 ರಂದು ಹುಟ್ಟಿ ಜನೆವರಿ 26 ರಂದು ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ‍್ಯ ಮತ್ತು ಸಂವಿಧಾನ ಎರಡಕ್ಕೂ ಸ್ಫೂರ್ತಿಯಾಗಿದ್ದಾರೆ’ ಎಂದು ಬಣ್ಣಿಸಿದರು.
ಈ ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಮುಖ್ಯಯೋಜನಾಧಿಕಾರಿ ಕಿಶೋರಕುಮಾರ ದುಬೆ, ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ, ಯೋಜನಾ ನಿರ್ದೇಶಕ ಸೂರ್ಯಕಾಂತ ಬಿರಾದರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವಾಜಿ ಡೋಣಿ,ಸಹಾಯಕ ಕಾರ್ಯದರ್ಶಿಗಳಾದ ರಮೇಶ ನಾಥೆ,ಬೀರೇಂದ್ರಸಿAಗ್, ಸಹಾಯಕ ನಿರ್ದೇಶಕ ಜಯಪ್ರಕಾಶ ಚೌಹಾಣ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು. ಪ್ರವೀಣಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3