ಬೀದರ್ ಜಿಲ್ಲೆಯಲ್ಲಿ ಶೆಲ್ NXplorers ತರಬೇತಿ: ATL ಶಿಕ್ಷಕರಿಗೆ ಹೊಸ ಚೈತನ್ಯ ಮಾದರಿ ಕಲಿಕೆ…!
ಬೀದರ್ ತಾಲೂಕಿನ ಬಗದಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್, ನೀತಿ ಆಯೋಗ ಮತ್ತು ಶೆಲ್ ಇಂಡಿಯಾ ಸಹಯೋಗದಲ್ಲಿ ಇತ್ತೀಚಿಗೆ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಗಾರದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಸಂಗೀತ ಬಿರಾದಾರ, ಅವರು ಕಾರ್ಯಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮುಂದಿನ ಯುವ ಪೀಳಿಗೆಯನ್ನ ಸಮರ್ಥ ನಾಯಕರನ್ನಾಗಿ ಪ್ರೇರೇಪಿಸಲು Shell NXplorers ಶಿಕ್ಷಕರನ್ನು ಸಜ್ಜುಗೊಳಿಸುತ್ತಿದೆ, ಯುವ ಮನಸ್ಸುಗಳನ್ನು ಪೋಷಿಸುವ ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡು ಹಿಡಿಯುವ ಮೂಲತಂತ್ರವಾಗಿದೆ, ಶಿಕ್ಷಕರಿಗೆ ಉತ್ತಮ ಪ್ರೇರಣೆ ನೀಡಲು ಸಹಕರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು, ಈ ತರಬೇತಿಯ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳಿಗೆ ತಾವು ಸಹಕಾರಿಯಾಗಬೇಕು ಎಂದು ತಿಳಿಸಿದರು.

ಭೀಮಾಶಂಕರ್ ಅವರು ಮಾತನಾಡಿ ಈ ಕಾರ್ಯಕ್ರಮವು ಭಾರತಾದ್ಯಂತ ಹಲವು ವರ್ಷಗಳಿಂದ ನಡೆಯುತ್ತಿದ್ದು ಈ ವರ್ಷ 2025 ರಿಂದ ಬೀದರನಲ್ಲಿ ಪ್ರಾರಂಭಗೊಳ್ಳುತ್ತಿರುವುದು ಈ ಜಿಲ್ಲೆಗೆ ಲಾಭದಾಯಕವಾಗಲಿದೆ, ಶೆಲ್ ಎನ್‌ಎಕ್ಸ್‌ಪ್ಲೋರರ್ಸ್ ಕಾರ್ಯಕ್ರಮದ ಮೂಲಕ ತರಬೇತಿ ಪಡೆಯುತ್ತಿರುವ ಎಲ್ಲಾ ಶಿಕ್ಷಕರು ತಮ್ಮನ್ನು ನಾವು ಹೊಸತನವನ್ನು ಕಂಡುಕೊಳ್ಳಲು ತಯಾರಾಗಬೇಕು, ಆ ಮೂಲಕ ವಿದ್ಯಾರ್ಥಿಗಳಿಗೆ ಹೊಸದಾಗಿ ನಾವು ಕಲಿಸಲು ತುಂಬಾನೇ ಉಪಯೋಗವಾಗಲಿದೆ, ಎಂದರು.
ಅದೇ ಸಂದರ್ಭದಲ್ಲಿ ಚೆನ್ನಬಸವ ಹೇಡೆ ಮಾತನಾಡಿದರು, ಜಿಲ್ಲಾ ಸಮನ್ವಯ ಸಮಿತಿಯ ಅಧಿಕಾರಿಗಳು, ಶಿಕ್ಷಕರು, ಉಪಸ್ಥಿತರಿದ್ದರು.
