ಮನೆ ಮನೆಗೆ ಮಾಚಿದೇವ ಕಾರ್ಯಕ್ರಮ: ಡಾ. ಬಸವ ಮಾಚಿದೇವ ಸ್ವಾಮೀಜಿ ಕಿವಿಮಾತು
ಮಡಿವಾಳ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ
ಬೀದರ್: ಮಡಿವಾಳ ಸಮಾಜದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಚಿತ್ರದುರ್ಗದ ಮಾಚಿದೇವ ಮಹಾ ಸಂಸ್ಥಾನ ಮಠದ ಡಾ. ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ಜಿಲ್ಲಾ ಮಡಿವಾಳ ಸಮಾಜದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ನಗರದ ಕಾಜಿ ಫಂಕ್ಷನ್ ಹಾಲ್‍ನಲ್ಲಿ ಸೋಮವಾರ ಆಯೋಜಿಸಿದ್ದ ಮನೆ ಮನೆಗೆ ಮಾಚಿದೇವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶಿಕ್ಷಣದಿಂದಲೇ ಸಮಾಜದ ಉನ್ನತಿ ಸಾಧ್ಯವಿದೆ ಎಂದು ತಿಳಿಸಿದರು.
ಶಿಕ್ಷಣದ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ತಂದೆ- ತಾಯಿ, ಗುರು- ಹಿರಿಯರಿಗೆ ಗೌರವ ಕೊಡುವುದನ್ನು ಹೇಳಿಕೊಡಬೇಕು ಎಂದು ಹೇಳಿದರು.
ಸಮಾಜದವರು ಮಾಚಿದೇವರ ಆದರ್ಶಗಳನ್ನು ಪಾಲಿಸಬೇಕು. ಸತ್ಯ ಶುದ್ಧ ಕಾಯಕದ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ದುಶ್ಚಟಗಳಿಂದ ದೂರ ಇರಬೇಕು ಎಂದು ತಿಳಿಸಿದರು.
ಚಿಂತಕ ಶಿವಶರಣಪ್ಪ ಹುಗ್ಗಿ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷ ಸುಭಾಷ್ ಮಡಿವಾಳ ಅಧ್ಯಕ್ಷತೆ, ಗೌರವಾಧ್ಯಕ್ಷ ದಿಗಂಬರ ಮಡಿವಾಳ ನೇತೃತ್ವ ವಹಿಸಿದ್ದರು. ಪಿಎಸ್‍ಐ ಗಂಗಮ್ಮ ಮಡಿವಾಳ ಉಪಸ್ಥಿತರಿದ್ದರು.

ಸಮಾಜದ ಪ್ರಮುಖರಾದ ಧನರಾಜ ಮಡಿವಾಳ, ನಾಗರಾಜ ಮಡಿವಾಳ, ಶಿವಕುಮಾರ ಚೌದ್ರಿ, ಶಿವಕುಮಾರ ಪರಿಟ್, ಶಿವಕುಮಾರ ಮಡಿವಾಳ, ಬಸವರಾಜ ಟಿಪ್ ಟಾಪ್, ಭೀಮಣ್ಣ ಮಡಿವಾಳ, ಮನೋಹರ ಮಡಿವಾಳ, ರಾಮಣ್ಣ ಮಡಿವಾಳ, ಗೋವಿಂದ ಮಡಿವಾಳ, ಸಂಗಮೇಶ ಮಡಿವಾಳ ಮೈಲೂರ, ತಿಪ್ಪಣ್ಣ ಮಡಿವಾಳ, ಲಲಿತಮ್ಮ ಚಟ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಮಡಿವಾಳ ಕಪಲಾಪುರ ಸ್ವಾಗತಿಸಿದರು. ಮಹೇಶ ಮಡಿವಾಳ ನಿರೂಪಿಸಿದರು.
***
ಮಡಿವಾಳ ಸಮಾಜ ತಾಲ್ಲೂಕು ಘಟಕಕ್ಕೆ ಆಯ್ಕೆ
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ಬೀದರ್ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ಹೆಸರು ಹೀಗಿವೆ. ಮಲ್ಲಿಕಾರ್ಜುನ ಮಡಿವಾಳ ಕಪಲಾಪುರ (ಅಧ್ಯಕ್ಷ), ನಿಲೇಶ್ ಮಡಿವಾಳ, ಸಂಜು ಕೋಟೆ (ಉಪಾಧ್ಯಕ್ಷ), ಗೋಪಾಲ್ ಮಡಿವಾಳ (ಪ್ರಧಾನ ಕಾರ್ಯದರ್ಶಿ), ಸಂದೀಪ್ ಮಡಿವಾಳ (ಸಂಘಟನಾ ಕಾರ್ಯದರ್ಶಿ), ಸಿದ್ದು ಮಡಿವಾಳ (ಸಹ ಕಾರ್ಯದರ್ಶಿ), ಪ್ರವೀಣ್ ಮಡಿವಾಳ (ಖಜಾಂಚಿ), ಶಿವ ಮಡಿವಾಳ, ಗುರುನಾಥ ಮಡಿವಾಳ, ಮಹೇಶ ಮಡಿವಾಳ ಆಣದೂರ ಹಾಗೂ ಷಣ್ಮುಖ ಮಡಿವಾಳ (ಸದಸ್ಯರು).
———————
