Saturday, July 12, 2025
HomePopularಕುಮಾರಿ ಶಿವಾನಿ ಶಿವದಾಸ್ ಸ್ವಾಮಿಯ ಅಭಿನಂದನಾ ಸಮಾರಂಭ

ಕುಮಾರಿ ಶಿವಾನಿ ಶಿವದಾಸ್ ಸ್ವಾಮಿಯ ಅಭಿನಂದನಾ ಸಮಾರಂಭ

ಕುಮಾರಿ ಶಿವಾನಿ ಶಿವದಾಸ್ ಸ್ವಾಮಿಯ ಅಭಿನಂದನಾ ಸಮಾರಂಭ
ಬೀದರ್ : ಕಲ್ಯಾಣ ಕರ್ನಾಟಕ ಕಲಾವಿದರ ಸಂಘ ಬೀದರ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಬೀದರ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ ಇವರ ಸಂಯುಕ್ತಾಶ್ರಯದಲ್ಲಿ ಜಿ ಕನ್ನಡ ಸರಿಗಮಪ 21 ನೇ ಸೀಜನ್ ವಿಜೇತೆ ಕುಮಾರಿ ಶಿವಾನಿ ಶಿವದಾಸ್ ಸ್ವಾಮಿಯ ಅಭಿನಂದನಾ ಸಮಾರಂಭ ಮತ್ತು ಡಾ. ಸಂತೋಷ ಹಾನಗಲ್ಲ ಅವರ ಸಂಪಾದಿತ ಕೃತಿ ಭಾಷೆ- ಬದುಕು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಪೂಜ್ಯ ಡಾ ಚೆನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕರ್ನಾಟಕ ಸರಕಾರದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆಯವರು ನಮ್ಮ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಬೀಡಾಗಿದೆ . ಮನುಕುಲಕ್ಕೆ ವಚನ ಸಾಹಿತ್ಯದಂಥ ಶ್ರೇಷ್ಠ ಸಾಹಿತ್ಯವನ್ನು ಕೊಟ್ಟ ಶರಣರ ನೆಲವಿದು. ಈ ನೆಲದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಶಿವಾನಿ ಶಿವದಾಸ ಸ್ವಾಮಿಯವರ ಕುಟುಂಬಕ್ಕೆ ಯಾವ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಇರುವುದರಿಂದ ಅವರಿಗೆ ನೀವೇಶನದ ವ್ಯವಸ್ಥೆ ಮಾಡಲಾಗುತ್ತದೆ. ಎಂದರು. ಮತ್ತು ಬೀದರಿನಲ್ಲಿರುವ ಎಲ್ಲ ಸಂಗೀತ ಕಲಾವಿದರು ಓಣಿ ಓಣಿಗೆ ಹೋಗಿ ವಚನ ಗಾಯನ ಮಾಡುವ ಮೂಲಕ ಜನರಿಗೆ ವಚನ ಸಾರವನ್ನು ಉಣ ಬಡಿಸುವ ಮೂಲಕ ಸಂಗೀತ ಸೇವೆ ಮಾಡಬೇಕು ಎಂದರು.
ಅದೇ ರೀತಿಯಾಗಿ ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ ಅವರು ಮಾತನಾಡಿ ಇಡೀ ಕರ್ನಾಟಕ ಬೀದರಿನತ್ತ ತಿರುಗಿ ನೋಡುವಂತೆ ಮಾಡಿದ ಶಿವಾನಿ ಅದ್ಭುತ ಪ್ರತಿಭೆ. ತಾಯಿ ಕಣ್ಣಿಗೆ ಹಚ್ಚುವ ಕಪ್ಪು ತಯ್ಯಾರಿಸಿ ತನ್ನ ಕಂದನ ಹಣೆಗೆ ಬೊಟ್ಟಿಟ್ಟು ಓ ಆಯಿ ಎಂದು ಹಾಡಿದ ದಿನವೇ ಮೊದಲ ಸಂಗೀತ ಹುಟ್ಟಿಕೊಂಡಿತು. ತಾಯಿ ಹಾಡುತ್ತಲೇ ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ನಮ್ಮ ಸುತ್ತ ಮುತ್ತಲಿನ ಪರಿಸರದ ಪರಿಚಯ ಮಾಡಿಸಿ ಕೊಡುತ್ತಾಳೆ. ಇವತ್ತು ಇಡೀ ಪರಿಸರವನ್ನೇ ನಾಶ ಮಾಡಿ ಜೀವ ಜಗತ್ತಿಗೆ ಸಂಚಾಕಾರ ತರುವ ಹೊತ್ತಿನಲ್ಲಿ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲ ಹೆಗಲ ಮೇಲಿದೆ ಎಂದರು. ಮತ್ತು ಎಲ್ಲಿಗ್ಹೋದವೋ ಕಣ್ಣಿಗೆ ಕಾಣದಾದವೋ ಎಂದು ಕಣ್ಮರೆಯಾಗುತ್ತಿರುವ ಪ್ರಾಣಿ ಸಂಕುಲದ ಮೇಲಿರುವ ಕಾಳಜಿಯನ್ನು ವ್ಯಕ್ತಪಡಿಸಿದರು.
ಕೃತಿ ಪರಿಚಯ ಮಾಡಿಕೊಟ್ಟ ಕಲ್ಯಾಣರಾವ ಜಿ ಪಾಟೀಲ್ ಡಾ. ಸಂತೋಷ ಹಾನಗಲ್ಲ ಅವರ ಭಾಷೆ ಮತ್ತು ಬದುಕು ಪುಸ್ತಕದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಯಾವ ಭಾಷೆ ಕಲಿಯುವ ಅವಶ್ಯಕತೆ ಇದೆ. ಎಂಬುದನ್ನು ತಿಳಿದುಕೊಳ್ಳಲು ಈ ಪುಸ್ತಕ ತುಂಬಾ ಸಹಕಾರಿಯಾಗಿದೆ ಎಂದರು.
ಮಾನ್ಯ ಪೌರಾಡಳಿತ ಸಚಿವರಾದ ಸನ್ಮಾನ್ಯ ಶ್ರೀ ರಹೀಂ ಖಾನ್, ರಜನೀಶ ವಾಲಿ,ಬಸವರಾಜ ಧನ್ನೂರ,ಸಿದ್ರಾಮ ಸಿಂಧೆ, ಶಿವಯ್ಯ ಸ್ವಾಮಿ,ರಾಜೇಂದ್ರ ಸಿಂಗ್ ಪವಾರ, ಮುಂತಾದವರು ಉಪಸ್ಥಿತರಿದ್ದರು. ಪೂಜ್ಯ ಶ್ರೀ ಗುರು ಬಸವ  ಪಟ್ಟದ್ದೇವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರೆ ಪೂಜ್ಯಶ್ರೀ ಡಾ ಶಿವಾನಂದ ಮಹಾಸ್ವಾಮಿಗಳು ದಿವ್ಯ ನೇತೃತ್ವವನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರಿಗೆ ಗೌರವ ಸನ್ಮಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ನಾಡಗೀತೆಯನ್ನು ಶ್ರೀಮತಿ ಭಾನುಪ್ರೀಯಾ ಮತ್ತು ಸಂಗಡಿಗರು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವರಾಜ ಜಾಬಶೆಟ್ಟಿ ಅವರು ಮಾತನಾಡಿ  ಅವರ ಕಾಲೇಜ ವತಿಯಿಂದ ಶಿವಾನಿ ಶಿವದಾಸ್ ಸ್ವಾಮಿ ಅವರಿಗೆ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವಿದ್ಯಾಬ್ಯಾಸದ ಪೂರ್ಣ ಜವಾಬ್ದಾರಿಯನ್ನು ಕಾಲೇಜಿನ ಆಡಳಿತ ಮಂಡಳಿಯಿಂದ ವಹಿಸಲಾಗುವುದು ಎಂದರು.
ಶ್ರೀ ಸುರೇಶ ಚೆನ್ನಶೆಟ್ಟಿಯವರು ಸ್ವಾಗತಿಸಿದರೆ, ಆಶಯ ನುಡಿಯನ್ನು ವಿಜಯಕುಮಾರ ಸೋನಾರೆಯವರು ನುಡಿದರು. ಶಿವಕುಮಾರ ಕಟ್ಟೆಯವರು ವಂದಿಸಿದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3