ಜು. 6 ರಂದು ಸಾಯಂಕಾಲ ರಂಗಮಂದಿರದಲ್ಲಿ ಶಿವಾನಿ ಸ್ವಾಮಿಗೆ ಅಭಿನಂದನಾ ಸಮಾರಂಭ
ಡಾ.ಸಂತೋಷ ಹಾನಗಲ್ ವಿರಚಿತ ಭಾಷೆ ಬದುಕು ಗ್ರಂಥ ಬಿಡುಗಡೆ : ವಿಜಯಕುಮಾರ ಸೋನಾರೆ
ಬೀದರ್: ಜು. 6ರಂದು ನಗರದ ಜಿಲ್ಲಾ ರಂಗಮಂದಿರದಲ್ಲಿ ಸಾ. 5 ಗಂಟೆಗೆ ಜೀ ಕನ್ನಡ ಸರಿಗಮಪ ಸೀಜನ್ 21ರ ವಿಜೇತೆ ಕಉ. ಶಿವಾನಿ ಸ್ವಾಮಿಗೆ ಅಭಿನಂದನಾ ಸಮಾರಂಭ ಮತ್ತು ಡಾ. ಸಂತೋಷ ಹಾನಗಲ್ ವಿರಚಿತ ಭಾಷೆ ಬದುಕು ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಶಿವಾನಿ ಸ್ವಾಮಿ ತನ್ನ ಗಾಯನದ ಮೂಲಕ ಬೀದರ ಜಿಲ್ಲೆಯ ಹೆಸರು ರಾಷ್ಟçಮಟ್ಟದಲ್ಲಿ ಬೆಳೆಸಿದ್ದಾಳೆ. ಹೀಗಾಗಿ ಆಕೆಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಅರಣ್ಯ ಜೀವಿಶಾಸ್ತç ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದು, ಪುಸ್ತಕ ಲೋಕಾರ್ಪಣೆಯನ್ನು ಪೌರಾಡಳಿತ ಹಜ್ ಸಚಿವ ರಹಿಂಖಾನ್ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಷ್ಟಿಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ವಹಿಸಲಿದ್ದು, ಕೃತಿ ಪರಿಚಯವನ್ನು ಕಲಬುರಗಿಯ ನಿ. ಪ್ರಾಧ್ಯಾಪಕ ಡಾ. ಕಲ್ಯಾಣರಾವ ಜಿ ಪಾಟೀಲ ಮಾಡಿಕೊಡಲಿದ್ದಾರೆ. ದಿವ್ಯ ಸಾನಿಧ್ಯವನ್ನು ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ವಹಿಸಲಿದ್ದು, ನೇತೃತ್ವವನ್ನು ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶೈಲೇಂದ್ರ ಬೆಲ್ಧಾಳೆ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ ನಾರಾಯಣರಾವ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ, ಡಾ. ಸಂತೋಷ ಹಾನಗಲ್, ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.
ಇದೇ ವೇಳೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರಿಗೆ ಸನ್ಮಾನ ನೆರವೇರಲಿದೆ. ನಾಡಗೀತೆಯನ್ನು ಸವಿಗಾನ ಸಂಗೀತ ಅಕಾಡೆಮಿ ವತಿಯಿಂದ ನಡೆಯಲಿದ್ದು, ಆಶಯ ನುಡಿ ಸುರೇಶ ಚನಶೆಟ್ಟಿ, ಸ್ವಾಗತವನ್ನು ವಿಜಯಕುಮಾರ ಸೋನಾರೆ, ವಂದನಾರ್ಪಣೆಯನ್ನು ಶಿವಕುಮಾರ ಕಟ್ಟೆ ನೆರವೇರಿಸಲಿದ್ದಾರೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಕ.ರಾ.ಶಿ ಸಂಸ್ಥೆಯ ನಿರ್ದೇಶಕ ಸಿದ್ಧರಾಜ ಪಾಟೀಲ ಮಾತನಾಡಿ ಶಿವಾನಿ ಸ್ವಾಮಿ ನಮ್ಮ ಕರ್ನಾಟಕ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡುತ್ತಿದ್ದು, ಆಕೆಯ ಶಿಕ್ಷಣ ಸಂಪೂರ್ಣವಾಗಿ ನಾವು ಉಚಿತವಾಗಿ ನೀಡುತ್ತಿದ್ದೇವೆ. ಆಕೆ ಪಿಯುಸಿಯಲ್ಲಿ ಇದ್ದಾಗ ಹಿಂದಿ ಇಂಡಿಯನ್ ಐಡೋಲ್‌ಗೆ ಆಯ್ಕೆಯಾಗಿದ್ದಳು. ಇದೀಗ ಪದವಿ ಓದುತ್ತಿದ್ದಾಗ ಜೀ ಕನ್ನಡದ ಸರಿಗಮಪಗೆ ಆಯ್ಕೆಯಾಗಿ ಕೊನೆಗೆ ಸೀಜನ್ 21ರ ವಿನ್ನರ್ ಆಗಿ ಹೊರಹೊಮ್ಮಿದ್ದು ನಮ್ಮ ಕಾಲೇಜಿಗೆ ಒಂದು ಹೆಮ್ಮೆಯ ವಿಷಯವಾಗಿದೆ. ಆದ್ದರಿಂದ ಕರ್ನಾಟಕ ಕಾಲೇಜಿನ ಸಹಕಾರದೊಂದಿಗೆ, ಬಸವರಾಜ ಜಾಬಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಶಿವಶಂಕರ ಟೋಕರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.