ಘೋಡಂಪಳ್ಳಿ ಹತ್ತಿರ ರಸ್ತೆ ಅಪಘಾತ ಸಂಭವಿಸಿದ ಸ್ಥಳಕ್ಕೆ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಪರಿಶೀಲನೆ
ಬೀದರ್ : ರಸ್ತೆ ಬದಿಯಲ್ಲಿ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಪ್ರಾಣಕ್ಕೆ ಅಪಾಯವಾಗುವಂತಹ ತೆರೆದ ಬಾವಿಗಳು ಕ್ಷೇತ್ತದಲ್ಲಿ ಎಲ್ಲಿಯೂ ಇರಕೂಡದು. ಈ ಬಗ್ಗೆ ಸಮೀಕ್ಷೆ ನಡೆಸಿ ಅಂತಹ ಬಾವಿಗಳನ್ನು ಮುಚ್ಚಲು ಅಥವಾ ಬೇಲಿ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಲ್ಲಿ ದುರಂತಕ್ಕೆ ಕಾರಣವಾದ ತೆರೆದಬಾವಿ ತಕ್ಷಣವೇ ಮುಚ್ಚುವಂತೆ ಸೂಚನೆ ನೀಡಿದರು.
ಸಾಂತ್ವನ: ದುರಂತದಲ್ಲಿ ಅಸುನೀಗಿದ ಘೋಡಂಪಳ್ಳಿ ಗ್ರಾಮದ ಲಕ್ಷ್ಮೀಕಾಂತ ಜೋಶಿ, ರವೀಂದ್ರ ಮೋನಪ್ಪ ಅವರ ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಪಘಾತದಲ್ಲಿ ಲಕ್ಷ್ಮೀಕಾಂತ ಜೋಶಿ ಮೃತಪಟ್ಟ ಸುದ್ದಿ ತಿಳಿದು ಅವರ ತಾಯಿ ಶಾರದಾಬಾಯಿ ಅವರು ಆಘಾತಕ್ಕೊಳಗಾಗಿ ಕೊನೆಯುಸಿರೆಳೆದಿರುವುದಕ್ಕೆ ಶಾಸಕರು ದಿಗ್ಭ್ರಮೆ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ. ಬಳಿಕ ಎಲ್ಲರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಶೃದ್ಧಾಂಜಲಿ ಸಲ್ಲಿಸಿದರು. ಘಟನೆಯಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಕುರಿತು ವೈಧ್ಯರೊಂದಿಗೆ ದೂರವಾಣಿ ಮೂಲಕ ವಿಚಾರಿಸಿದರು.