Sunday, July 13, 2025
HomePopularಬೀದಿ ಬದಿ ವ್ಯಾಪಾರಿಗಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ

ಬೀದಿ ಬದಿ ವ್ಯಾಪಾರಿಗಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ

ಬೀದಿ ಬದಿ ವ್ಯಾಪಾರಿಗಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ
ಬೀದರ್ :- ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳು, ಜುಸ್ ಸೆಂಟರ್, ಚಿಕನ್ ಮತ್ತು ಕಬಾಬ್ ಸೆಂಟರ್, ಟಿ ಅಂಗಡಿಗಳು, ಜಿಲೇಬಿ ತಯಾರಕರು, ಚೈನಿಸ್ ಫಾಸ್ಟ ಪುಡ್, ಟೀಫಿನ್ ಸೆಂಟರ್, ಚಾರ್ಟ ಭಂಡಾರ್‍ಗಳ ಇತರೆ ಆಹಾರ ಪದಾರ್ಥಗಳ ಮಾರಾಟಗಾರರಲ್ಲಿ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕಾಪಾಡಬೇಕೆಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ಸಂತೋಷ ತಿಳಿಸಿದರು.

ಅವರಿಂದು ಆಹಾರ ಸುರಕ್ಷತೆ ಮತ್ತು ಔಷದ ಆಡಳಿತ, ಆಯುಕ್ತರು ಬೆಂಗಳೂರು ಇವರ ಆದೇಶದ ಮೇರೆಗೆ ವಿಶೇಷ ಆಂದೋಲವನ್ನು ಹಮ್ಮಿಕೊಂಡು ಬೀದಿ ಬದಿ ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಗುತ್ತಿದೆಂದರು.
ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006, ನಿಯಮ 2011ರನ್ವಯ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ, ನೈರ್ಮಲ್ಯತೆ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸುವುದು ಮತ್ತು ತಾಲೂಕಾ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸುವುದರ ಮುಖಾಂತರ ಆಹಾರ ಸುರಕ್ಷತೆ ಮತ್ತು ಔಷದ ಆಡಳಿತದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ 50 ನೋಂದಣಿ ಮಾಡಿಸುವುದು. (ನೋಂದಣಿಗೆ 100 ರೂ. ಪರವಾನಿಗೆಗೆ 2000 & ತಯಾರಕರಿಗೆ 3000 ರೂ ಮಾತ್ರ) ಪರವಾನಿಗೆ ಹಾಗೂ ನೋಂದಣಿ ಮಾಡಿಸಲು ಬ್ರೋಕರ ಅಥವಾ ಅಧಿಕಾರಿಗಳನ್ನು ಹಣ ನೀಡದೆ ತಾವೆ ಆನ್ ಲೈನ ಮುಂಖಾಂತರ ಪಡೆದುಕೋಳ್ಳಿ ಎಂದು ತೀಳಿಸಲಾಗಿದೆ ಹಾಗೂ ಸ್ವಚ್ಛೆತೆಯನ್ನು ಕಾಪಾಡುವುದು ಅಡುಗೆ ತಯಾರಕರ ವೈದ್ಯಕಿಯ ಪ್ರಮಾಣ ಪತ್ರ ಮತ್ತು ಡ್ರೆಸ್ ಕೋಡ ಹ್ಯಾಂಡ ಗ್ಲೋಸ್, ಕ್ಯಾಪಗಳನ್ನು ಕಡ್ಡಾಯವಾಗಿ ಬಳಕೆ ಮಾಡಲು ತಿಳಿಸಿದರು.
ಅದೇ ರೀತಿ ಬೀದರ ಜಿಲ್ಲೆಯ ಇಂದು ಎಲ್ಲಾ ತಾಲೂಕುಗಳಿಂದ ಓಟ್ಟು 70 ಬೀದಿ ಬದಿ ವ್ಯಾಪಾರಿಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದರು.
****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3