ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ ಗಟ್ಟಿ: ರಂಭಾಪುರಿ ಜಗದ್ಗುರುಗಳು
ಬೀದರ್: ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಿಂದ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯ ಗಟ್ಟಿಗೊಳ್ಳಲಿದೆ ಎಂದು ಪರಮ ಪೂಜ್ಯ ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.
ಜಿಲ್ಲೆಯ ಬಸವಕಲ್ಯಾಣ ನಗರದ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಸೆ.22ರಿಂದ ಆ..2ರ ವರೆಗೆ ಬಸವಕಲ್ಯಾಣದಲ್ಲಿ ಜರುಗಲಿರುವ ಶರನ್ನವರಾತ್ರಿ 34ನೇ ದಸರಾ ಧರ್ಮ ಸಮ್ಮೇಳನದ ದ್ವಿತೀಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಧರ್ಮ, ಧರ್ಮಗಳ ಹಾಗೂ ಜಾತಿ, ಜಾತಿಗಳ ನಡುವೆ ಕಲಹ ಉಲ್ಬಣಗೊಂಡಿವೆ. ಸಮಾಜದಲ್ಲಿನ ಸೌಹಾರ್ದತೆ ಹಾಗೂ ಭಾತೃತ್ವ ಭಾವನೆ ಅಳಿವಿನ ಅಂಚಿನಲ್ಲಿದೆ. ವಿನಾಶದ ಅಂಚಿಗೆ ಜಾರುತ್ತಿರುವ ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸದಾಚಾರ, ಸಂಸ್ಕಾರ, ಸಂಪ್ರದಾಯ, ಸಮೃದ್ಧಿ ಬಲಗೊಳ್ಳಬೇಕಾದರೆ ಈ ಧರ್ಮ ಸಮ್ಮೇಳನದ ಅಗತ್ಯವಿದೆ ಎಂದು ಪುನರೂಚ್ಛರಿಸಿದರು.
1992ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಪ್ರಥಮ ದಸರಾ ದರ್ಬಾರ ಜರುಗಿದ್ದು, ಕಳೆದ ವರ್ಷ 33ನೇ ದಸರಾ ದರ್ಬಾರ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೆರೆ ಗ್ರಾಮದಲ್ಲಿ ಜರುಗಿತು. ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಬಸವಕಲ್ಯಾಣ ಶಾಸಕ ಶರಣು ಸಲಗಾರ ಹಾಗೂ ಜಗದ್ಗುರುಗಳ ಬಳಗ 34ನೇ ದಸರಾ ದರ್ಬಾರ್ ಬಸವಕಲ್ಯಾಣದಲ್ಲಿ ಮಾಡುವುದಾಗಿ ಕೇಳಿಕೊಂಡಿದ್ದರು ಅದಕ್ಕೆ ಜಗದ್ಗುರುಗಳು ಒಪ್ಪಿಗೆ ಸೂಚಿಸಿ ಈ ವರ್ಷ 34ನೇ ದಸರಾ ದರ್ಬಾರ್ ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಜರುಗುತ್ತಿರುವುದು ಜಗದ್ಗುರುಗಳಿಗೆ ಹಂಡೆ ಹಾಲು ಕುಡಿದಷ್ಟು ಸಂತೋಷವಾಗಿದೆ. ಕಳೆದ ಒಂದು ವರೆ ತಿಂಗಳ ಹಿಂದಷ್ಟೇ ಹಾರಕೂಡ ಶ್ರೀಮಠದಲ್ಲಿ ದಸರಾ ದರ್ಬಾರ್ ನ ಮೊದಲನೇ ಪೂರ್ವಭಾವಿ ಸಭೆ ಜರುಗಿದ್ದು, ಆ ಸಮಯದಲ್ಲಿ ಹರಕುಡ ಶ್ರೀಗಳ ಶಿಷ್ಯವೃಂದದವರಿಂದ ಅರ್ಧ ಕೋಟಿಗೂ ಅಧಿಕ ಹಣ ಸಂಗ್ರಹಣೆ ಮಾಡಿರುವುದು ಬಹಳ ಸಂತೋಷದ ವಿಷಯ. ಇಂದು ಎರಡನೇ ಸಭೆ ಜರುಗುತ್ತಿದ್ದು ಇದು ಸಮಾಜದಲ್ಲಿ ಒಂದು ವಿಶಿಷ್ಟತೆ ಹಾಗೂ ಐಕ್ಯತೆ ಭಾವನೆ ಬೇರೂರಲು ಇದು ಸಹಕಾರಿಯಾಗಲಿದೆ ಎಂದರು.

8ನೇ ಶತಮಾನದಲ್ಲಿ ತ್ರಿಪುರ ಅಂತ ಕೆರೆ ನಿರ್ಮಿಸಿದವರು ಪರಮಪೂಜ್ಯ ರೇವಣಸಿದ್ದ ಜಗದ್ಗುರುಗಳು, ಈ ಪರಿಸರದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದವರು ಪೂಜ್ಯರುದ್ರಮಣಿ ಜಗದ್ಗುರುಗಳು ಅವರ ಜೀವಂತ ಸಮಾಧಿ ತ್ರಿಪುರಾಂತ ಗವಿಮಠದಲ್ಲಿದೆ. ಗವಿಮಠದ ಬಗ್ಗೆ ಅಪಪ್ರಚಾರ ಮಾಡುವುದಾಗಲಿ ಅಥವಾ ಹೀಯಾಳಿಸುವುದಾಗಲಿ ಮಾಡಿದರೆ ಅಂಥವರ ಪಾಲಿಗೆ ಕೆಟ್ಟ ಘಳಿಗೆ. ಇಲ್ಲಿಯ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನವರ ಮೂರ್ತಿ ಅನಾವರಣವನ್ನು ರಂಭಾಪುರಿ ಜಗದ್ಗುರುಗಳು ಮಾಡಿರುವುದು ಬಹಳ ಸಂತಸದ ವಿಷಯ ಬಸವಣ್ಣನವರ ಬಗ್ಗೆ ಬಹಳಷ್ಟು ಹೇಳಿಕೊಳ್ಳುವವರು ಆ ಸಮಯದಲ್ಲಿ ಯಾರು ಬಂದಿರಲಿಲ್ಲ. ಸ್ವತಃ ರಂಭಾಪುರಿ ಜಗದ್ಗುರುಗಳು ಬಂದು ಬಸವಣ್ಣನವರ ಮೂರ್ತಿ ಅನಾವರಣ ಮಾಡಿರುವುದು ಸಮಾಜಕ್ಕೆ ಒಂದು ಹೊಸ ಸಂದೇಶ ನೀಡಿದೆ ಎಂದು ಮಾಜಿ ಮಂತ್ರಿಗಳು ಶತಾಯುಷಿಗಳಾದ ಡಾ.ಭೀಮಣ್ಣ ಖಂಡ್ರೆ ಅವರು ಹೇಳಿದ್ದರು. ಬಸವಣ್ಣನವರು ಅನುಭವ ಮಂಟಪದಲ್ಲಿ ಸರ್ವ ಸಮುದಾಯವನ್ನು ಗೌರವಿಸಿದ ಹಾಗೆ ಅದಕ್ಕೂ ಪೂರ್ವದಲ್ಲಿ ಜಗದಾದಿ ಜಗದ್ಗುರು ರೇಣುಕಾಚಾರ್ಯರು 18 ಜಾತಿ ಪಂಗಡದವರಿಗೆ ಲಿಂಗ ದೀಕ್ಷೆ ನೀಡಿ ಆ ಕಾಲದಲ್ಲಿಯೇ ವೀರಶೈವ ಪರಂಪರೆಗೆ ಭದ್ರ ಬುನಾದಿ ಹಾಕಿದರು ಎಂದರು.
ಮೇ 22 ರಿಂದ ಆ ಎರಡರವರೆಗೆ ನಡೆಯಲಿರುವ ಈ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಜಗದ್ಗುರುಗಳು 10 ದಿವಸ ವಿಶಿಷ್ಟ ಪೋಷಕದಲ್ಲಿ ವಿಭಿನ್ನವಾಗಿ ಕಾಣುವರು. ಹಾಗೆ ಬೆಳಿಗ್ಗೆಯಿಂದ ನಿರಂತರವಾಗಿ ವೇದ ಘೋಷದೊಂದಿಗೆ ಆರಂಭವಾಗುವ ಬೆಳಗಿನ ಕಾರ್ಯಕ್ರಮವು ಇಷ್ಟಲಿಂಗ ಪೂಜಾ ಅನುಷ್ಠಾನ, ಧರ್ಮ ಸಮ್ಮೇಳನ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು ಈ ಭಾಗದಲ್ಲಿ ಒಂದು ಹೊಸ ಆಯಾಮವನ್ನು ಈ ಸಮ್ಮೇಳನದಿಂದ ನಿರ್ಮಿಸಲಿದೆ ಎಂದು ಜಗದ್ಗುರುಗಳು ಪ್ರತಿಪಾದಿಸಿದರು.
ಹಾರಕೂಡದ ಪೂಜ್ಯ ಡಾ ಚನ್ನವೀರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಕಲ್ಯಾಣ ಇದು ಸನಾತನ ಸಂಸ್ಕೃತಿ ಜೊತೆಗೆ ಧಾರ್ಮಿಕ, ವೈಚಾರಿಕ, ಸೈದ್ಧಾಂತಿಕ ಹಾಗೂ ಸಹಿಷ್ಣುತಾ ಭಾವವುಳ್ಳ ನೆಲೆಯಾಗಿದೆ. ಈ ನೆಲೆಯಲ್ಲಿ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಜರುಗುವ ಮೂಲಕ ಬಸವ ಪರಂಪರೆ ಹಾಗೂ ಸನಾತನ ಸಂಸ್ಕೃತಿ ಎರಡು ಸಮ್ಮಿಲನಗೊಂಡು ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗೆ ಒಂದು ಹೊಸ ಕಳೆ ಬರಲಿದೆ ಎಂಬ ಆಶಾಭಾವ ನಮ್ಮಲ್ಲಿದೆ ಎಂದು ತಿಳಿಸಿದರು.

ಮೇಕಕರ್, ತಡೋಳಾ ಹಾಗೂ ಡುಣಗಾಪುರದ ಪೂಜ್ಯ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಗವಿಮಠದ ಪೂಜ್ಯ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಶ್ರೀನಿವಾಸ ಸರಡಗಿಯ ಪೂಜ್ಯ ರೇವಣಸಿದ್ದೇಶ್ವರ ಸ್ವಾಮಿಗಳು ಮಾತನಾಡಿದರು.
ಹುಡುಗಿಯ ಪೂಜ್ಯ ವಿರುಪಾಕ್ಷ ಶಿವಾಚಾರ್ಯರು, ಮುಚಳಂಬ ಶ್ರೀಗಳು, ಗಡಿಗೌಡಗಾಂವ ಶ್ರೀಗಳು, ಎದ್ಲಾಪುರ ಶ್ರೀಗಳು ಕಲ್ಲೂರು ಶ್ರೀಗಳು, ಮುಡುಬಿಯ ಚಂದ್ರಶೇಖರ ಪಾಟೀಲ್, ರಾಜಕುಮಾರ ಸಿರಗಾಪುರ, ಕಲಬುರ್ಗಿಯ ಶಿವಶರಣಪ್ಪ ಸೀರಿ, ಬೀದರ್ ನ ರವೀಂದ್ರ ಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
ಬಸವಕಲ್ಯಾಣ ಶಾಸಕ ಶರಣು ಸರ್ವರನ್ನು ಸ್ವಾಜಗದ್ಗುರುಗ
ಳು
