Friday, January 16, 2026
HomePopularನಕಲಿ ವೈದರಿಗೆ ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ

ನಕಲಿ ವೈದರಿಗೆ ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ

ನಕಲಿ ವೈದರಿಗೆ ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಆದೇಶ
ಬೀದರ್ – ಔರಾದ (ಬಿ) ತಾಲ್ಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ನಕಲಿ ವೈದ್ಯರಾದ ನಾರಾಯಣರಾವ ಕುಲರ್ಕಣಿ, ಬಸವರಾಜ ಒಂಟೆ ಇವರಿಗೆ ತಲಾ 50,000 ರೂ. ಹಾಗೂ ಸ್ಟಾಫ್ ನರ್ಸ ಪ್ರೇಮ ಜಿರಗೆ ಇವರಿಗೂ 1,00,000 ರೂ. ದಂಡ ವಿಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಆದೇಶ ಹೊರಡಿಸಿರುತ್ತಾರೆ
ಅವರು ಗುರುವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ನೊಂದಣಿ ಮತ್ತು ಕುಂದು ಕೂರತೆ ಪರಿಹಾರ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂದೆ ವೈದ್ಯ ವೃತ್ತಿ ನಡೆಸದಂತೆ ಎಚ್ಚರಿಕೆ ನೀಡಿರುತ್ತಾರೆ ಮತ್ತು ಆರ್ಯುವೇದ ವೈದ್ಯರಾದ ಡಾ. ರಂಜಿತ ಬಿರಾದರ ಇವರಿಗೆ ಕರ್ನಾಟಕ ಆರ್ಯುವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಮಂಡಳಿಯಿAದ ಪ್ರಮಾಣ ಪತ್ರ ಪಡೆದು ಕೆ.ಪಿ.ಎಂ.ಇ ನೋಂದಣಿ ಮಾಡಿಸಿ ಅದೇ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸಬೇಕೆಂದು ಎಚ್ಚರಿಕೆ ನೀಡಿರುತ್ತಾರೆ.

ಔರಾದ(ಬಿ) ತಾಲೂಕಿನ ಮುಧೋಳ(ಬಿ)ಗ್ರಾಮದಲ್ಲಿರುವ ನಕಲಿ ವೈದ್ಯರಾದ ನಾರಾಯಣರಾವ ಕುಲರ್ಕಣಿ, ಬಸವರಾಜ ಒಂಟೆ ಹಾಗೂ ಸ್ಟಾಫ್ ನರ್ಸ ಪ್ರೇಮ ಜಿರಗೆ ಇವರು ಯಾವುದೇ ವೈದ್ಯಕೀಯ ಪದವಿ ಪಡೆಯದೆ ವೈದ್ಯಕೀಯ ಪದವಿ ನಡೆಸುತ್ತೀದ್ದಾರೆ ಎಂದು ದೂರ ಬಂದ ಪ್ರಯುಕ್ತ ಔರಾದ(ಬಿ) ತಾಲ್ಲೂಕಿನ ಆರೋಗ್ಯ ಅಧಿಕಾರಿಗಳಾದ ಡಾ|| ಗಾಯತ್ರಿ ಹಾಗೂ ಜಿಲ್ಲಾ ಕೆ.ಪಿ.ಎಮ.ಇ ನೋಡಲ ಅಧಿಕಾರಿಗಳಾದ ಡಾ||ದಿಲೀಪ್ ಡೋಂಗ್ರೆ ಅವರು ಸದರಿ ಗ್ರಾಮಕ್ಕೆ ಭೇಟಿ ನೀಡಿ ಕ್ಲಿನಿಕಗಳನ್ನು ಸೀಜ ಮಾಡಿರುತ್ತಾರೆ.
ಔರಾದ(ಬಿ) ತಾಲೂಕಿನ ಎಕಂಬಾ ಗ್ರಾಮದಲ್ಲಿ ಡಾ. ರಂಜಿತ ಬಿರಾದರ ಇವರು ಮಹಾರಾಷ್ಟ ರಾಜ್ಯದಿಂದ ಆರ್ಯುವೇದ ಪದ್ದತಿಯಲ್ಲಿ ಪದವಿ ಹೊಂದಿದ್ದು ಇಲ್ಲಿ ಅಲೋಪತಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಆದರೆ ಕರ್ನಾಟಕ ರಾಜ್ಯದಲ್ಲಿ ವೈದ್ಯ ವೃತ್ತಿ ನಡೆಸಬೇಕಾದರೆ ಕೆ.ಪಿ.ಎಂ.ಇ ಕಾಯ್ದೆ ಪ್ರಕಾರ ಕರ್ನಾಟಕ ಆರ್ಯುವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಮಂಡಳಿಯಿAದ ಪ್ರಮಾಣ ಪತ್ರ ಪಡೆದು ಕೆ.ಪಿ.ಎಂ.ಇ ನೋಂದಣಿ ಮಾಡಿಸಿ ಅದೇ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸಬೇಕಾಗಿರುತ್ತದೆ. ಇದು ಕೆ.ಪಿ.ಎಂ.ಇ ಕಾಯ್ದೆ 2007 ಕಲಂ 19 ಮತ್ತು 22 ಸ್ಪಷ್ಟ ಉಲ್ಲಂಘನೆಯಾಗಿರುವುದರಿAದ ಕ್ರಮಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ||ಧ್ಯಾನೇಶ್ವರ ನಿರಗುಡೆ ಜಿಲ್ಲಾ ಕೆ.ಪಿ.ಎಮ.ಇ ನೋಡಲ ಅಧಿಕಾರಿಗಳಾದ ಡಾ||ದಿಲೀಪ್ ಡೋಂಗ್ರೆ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ|| ಗಾಯತ್ರಿ, ಡಾ|| ಸಂಗಾರೆಡ್ಡಿ,ಡಾ|| ಶಿವಕುಮಾರ ಸಿದ್ದೇಶ್ವರ, ಡಾ.ರವಿ ಕಲಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3