ಬೀದರ ನಗರದಲ್ಲಿ ಕಿರಣ್ ಸಂಗೀತ ಪಾಠಶಾಲೆ ಉದ್ಘಾಟನಾ ಸಮಾರಂಭ
ಬೀದರ್ : ನಗರದ ವಿಜ್ಞಾನ ವರ್ದಿನಿ ಪಬ್ಲಿಕ್ ಸ್ಕೂಲ್ ಬಿಗ್ ಬಜಾರ್ ಹತ್ತಿರ ದಿನಾಂಕ 15/06/25 ರಂದು ಸಾಯಂಕಾಲ 6 ಗಂಟೆಗೆ ಕಿರಣ್ ಸಂಗೀತ ಪಾಠಶಾಲೆ ಪೂಜ್ಯ ಬಿ.ಕೆ ಸುನಂದಾ ದೀದಿ ಹಾಗೂ ಬಿ. ಕೆ ಸುಮಂಗಲಾ ದೀದಿ ಅವರು ಉದ್ಘಾಟಿಸಲಿದ್ದಾರೆ.
ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ಹಾಗೂ ಸರಸ್ವತಿ ಮಾತೆಯವರ ಪೂಜೆಯೊಂದಿಗೆ ಭಕ್ತಿ ಸಂಗೀತದ ಸುದೆ ಹರಿಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಸಂಗೀತ ಕಲಾವಿದರು ಖ್ಯಾತ ಸಾಹಿತಿ ಹಾಗೂ ಚಿಂತಕರು ರಾಜಕೀಯ ಮುಖಂಡರು ಹಾಗೂ ಸಂಗೀತ ಪಾಠಶಾಲೆಯ ಮಕ್ಕಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಿರಣ್ ಹಿರೇಮಠ ಕಲಾ ಬಳಗದವರಿಂದ ಸಂಗೀತ ರಸಮಂಜರಿ ಜರಗಲಿದೆ.
ಕಾರಣ ದಯವಿಟ್ಟು ಸಂಗೀತ ಕಲಾ ಬಳಗದವರು ಆಗಮಿಸಬೇಕೆಂದು ಓಂ ಶಿವಶಕ್ತಿ ಸತ್ಸಂಗ ಬಳಗವು ಪ್ರಕಟಣೆ ತಿಳಿಸಿದೆ.
