Sunday, July 13, 2025
HomePopularದೇಶದ ಗಮನ ಸೆಳೆದ ಗ್ಯಾರಂಟಿ ಯೋಜನೆ ಯಾವುದೇ ತೊಂದರೆ ಆಗದಂತೆ ಅನುಷ್ಠಾನಗೊಳಿಸಿ - ಮೆಹರೋಜ ಖಾನ್

ದೇಶದ ಗಮನ ಸೆಳೆದ ಗ್ಯಾರಂಟಿ ಯೋಜನೆ ಯಾವುದೇ ತೊಂದರೆ ಆಗದಂತೆ ಅನುಷ್ಠಾನಗೊಳಿಸಿ – ಮೆಹರೋಜ ಖಾನ್

ದೇಶದ ಗಮನ ಸೆಳೆದ ಗ್ಯಾರಂಟಿ ಯೋಜನೆ ಯಾವುದೇ
ತೊಂದರೆ ಆಗದಂತೆ ಅನುಷ್ಠಾನಗೊಳಿಸಿ – ಮೆಹರೋಜ ಖಾನ್
ಬೀದರ್ : ಇಡೀ ದೇಶದ ಹಾಗೂ ವಿಶ್ವದ ಗಮನ ಸೆಳೆದಿರುವ ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಡಿ ಯಾವುದೇ ರೀತಿಯ ತೊಂದರೆಯಾಗದAತೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹರೋಜ್ ಖಾನ್ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬೀದರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಪ್ರತಿ ವರ್ಷ 52 ಸಾವಿರ ಕೋಟಿ ರೂ. ಖರ್ಚು ಮಾಡಿ ಸ್ವಾವಲಂಬಿ ಬದುಕು ಕೊಟ್ಟ ಗ್ಯಾರಂಟಿ ಯೋಜನೆಗಳು ಇಡಿ ದೇಶದ ಹಾಗೂ ವಿಶ್ವದ ಗಮನ ಸೆಳೆದಿವೆ. ಬೀದರನಲ್ಲಿ ಶೇ. 98 ರಷ್ಟು ಪ್ರಗತಿ ಸಾಧಿಸಲಾಗಿದೆಯೆಂದರು.
ಗ್ಯಾರಂಟಿ ಯೋಜನೆಗಳಿಂದ ಬಡ ಹಾಗೂ ಮಾಧ್ಯಮ ವರ್ಗದ ಜನರ ಆರ್ಥಿಕ ಸಂಕಷ್ಟಗಳಿಗೆ ಸಾಕಷ್ಟು ಪರಿಹಾರ ನೀಡುವ ಮೂಲಕ ಅವರಲ್ಲಿ ಶಕ್ತಿ ತುಂಬಿದೆ. ಕೋಟ್ಯಾಂತರ ಫಲಾನುಭವಿಗಳು ಸಣ್ಣಪುಟ್ಟ ಉದ್ಯೋಗ ಸ್ಥಾಪಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಬೀದರ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಪ್ರಚಾರಕ್ಕಾಗಿ ಕಾಲೇಜುಗಳಲ್ಲಿ ಹಾಗೂ ಯುವಕರಲ್ಲಿ ವಿಶೇಷ ಪ್ರಚಾರ ಆಂದೋಲನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಶಾಲಾ ಕಾಲೇಜುಗಳು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಬಸ್‌ಗಳು ಸರಿಯಾದ ಸಮಯಕ್ಕೆ ಸಂಚರಿಸುವAತೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ನಿಲುಗಡೆಗಳಲ್ಲಿ ನಿಲ್ಲಿಸುವಂತೆ ಸೂಚಿಸಲಾಯಿತು. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯು ಕಳ್ಳ ಸಾಗಾಣಿಕೆಯಲ್ಲಿ ಕಂಡುಬAದು ಅನೇಕ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ನ್ಯಾಯ ಬೆಲೆ ಅಂಗಡಿಗಳಿಗೆ ಎಚ್ಚರಿಕೆ ನೀಡುವಂತೆ ಸೂಚಿಸಲಾಯಿತಲ್ಲದೆ ಕಳ್ಳ ಸಾಗಾಟದಲ್ಲಿ ಕಂಡುಬAದ ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುದೆಂದು ತಿಳಿಸಲಾಯಿತು.

ಗೃಹಲಕ್ಷಿö್ಮÃ ಯೋಜನೆಯಡಿ ಕೆಲ ಮಹಿಳೆಯರಿಗೆ ಐಟಿ ಹಾಗೂ ಜಿಎಸ್‌ಟಿ ತೆರಿಗೆ ಸಮಸ್ಯೆಯಿಂದಾಗಿ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಅಂಥ ಗೃಹಿಣಿಯರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಮೆಹರೋಜ್ ಖಾನ್ ತಿಳಿಸಿದರು.
ಗ್ರಾಮ ಒನ್ ಕೇಂದ್ರಗಳಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ತೊಂದರೆ ನೀಡಿದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ಯಾರಂಟಿ ಯೋಜನೆಗಖ ಯಶಸ್ವಿ ಹಿನ್ನೆಲೆಯಲ್ಲಿ ಮನೆ ಮನೆ ಗ್ಯಾರಂಟಿ ವಿಶೇಷ ಆಂದೋಲವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವುದೆಂದು ಸಹ ಅವರು ತಿಳಿಸಿದರು.
ಜಿಲ್ಲೆಯ ಒಟ್ಟು ಕುಟುಂಬದ ಮಹಿಳಾ ಮುಖ್ಯಸ್ಥೆಯ ಹೆಸರಿನಲ್ಲಿರುವ ಪಡಿತರ ಚೀಟಿಗಳ ಸಂಖ್ಯೆ: 381970 ಇವರಲ್ಲಿ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮೇ ಅಂತಕ್ಕೆ 374323 ಫಲನುಭವಿಗಳು ನೊಂದಾಣಿಯಾಗಿರುತ್ತಾರೆ. ಬೀದರ ಜಿಲ್ಲೆಯಲ್ಲಿ ಗೃಹಲಕ್ಷೀ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಮಾಹೆಯಾನ 2000 ರೂ. ರಂತೆ ಇಲ್ಲಿಯವರೆಗೆ 1197.64 ಕೋಟಿ ಹಣವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ತಾಲೂಕುವಾರು ಫಲಾನುಭವಿಗಳ ಸಂಖ್ಯೆ ಬೀದರ (91371), ಬಸವಕಲ್ಯಾಣ (63170), ಭಾಲ್ಕಿ (62421), ಹುಮನಾಬಾದ (48224), ಚಿಟಗುಪ್ಪಾ (43904), ಔರಾದ (35565), ಕಮಲನಗರ (19579), ಹುಲಸೂರ (10089) ಆಗಿರುತ್ತಾರೆಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ 13,13,305 ಫಲಾನುಭವಿಗಳು (3,57,286 ಪಡಿತರ ಚೀಟಿಗಳು) 333.28 ಕೋಟಿ ರೂಪಾಯಿ ಅನುದಾನ ಬಳಕೆಯಾಗಿದೆ. ಜುಲೈ 2023 ರಿಂದ ಜನವರಿ 2025 ರವರಿಗೆ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಯ ಮೊತ್ತವನ್ನು ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿತ್ತು. ಜನವರಿ 2025ರ ಮಾಹೆಯ ಡಿಬಿಟಿ ಮೂಲಕ ವರ್ಗಾವಣೆ ಬಾಕಿ ಇರುತ್ತದೆ ಹಾಗೂ ಫೆಬ್ರವರಿ 2025ರಿಂದ 10ಕೆಜಿ ಅಕ್ಕಿ ನೀಡಲಾಗುತ್ತಿದೆ ಮತ್ತು ಪಡಿತರ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟ ಆಗದಂತೆ ನೋಡಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುವನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 10489 ನೊಂದಣಿಯಾಗಿದ್ದು ಅದರಲ್ಲಿ 7961 ಪದವಿ ಅಭ್ಯರ್ಥಿಗಳು ಮತ್ತು 148 ಡಿಪ್ಲೋಮಾ ಅಭ್ಯರ್ಥಿಗಳು ಫಲಾನುಭವಿಗಳಿಗೆ 15.98 ಕೋಟಿ ರೂಪಾಯಿ ಅನುದಾನ ಬಳಕೆಯಾಗಿದೆ. ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಒಟ್ಟು 3,49,588 ಫಲಾನುಭವಿಗಳಿದ್ದು 327.69 ಕೋಟಿ ಹಣವನ್ನು ಬಳಕೆಯಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 11-06-2023 ರಿಂದ 31-05-2025 ರವರಿಗೆ ಮಹಿಳಾ ಮತ್ತು ಬಾಲಕಿಯರು ಒಟ್ಟು ಸೇರಿ 8.15 ಕೋಟಿ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ ಹಾಗೂ ವಿಭಾಗದ ವಾಹನದಲ್ಲಿ ಪ್ರತಿ ದಿನ ಸರಾಸರಿ 1.3 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ ಇದಕ್ಕೆ 233.27 ಕೋಟಿ ಸಂದಾಯವಾಗಿದೆ ಹಾಗೂ ಪ್ರತಿ ದಿನ ಪ್ರಯಾಣಿಕರಿಂದ ಸರಾಸರಿ 32.40 ಲಕ್ಷ ರೂಪಾಯಿ ಸಾರಿಗೆ ಆದಾಯ ಸಂದಾಯವಾಗಿದೆ. ವಿದ್ಯಾರ್ಥಿಗಳಿಗೆ ಬಸ್ಸುಗಳ ಸಮಸ್ಯೆಯಾಗದಂತೆ ಸಾರಿಗೆ ಸಂಸ್ಥೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಬೀದರ ಜಿಲ್ಲೆಯಲ್ಲಿ ಒಟ್ಟು 8,01,86,364 ಫಲಾನುಭವಿಗಳಿದ್ದು, ಈವರೆಗೆ 2,107.86 ಕೋಟಿ ಹಣ ಬಳಕೆಯಾಗಿದೆ. ಪ್ರಾಮಾಣಿಕವಾಗಿ ಜನರಿಗೆ ಪಂಚ ಗ್ಯಾರಂಟಿಗಳು ತಲುಪಿಸುವ ಕೆಲಸ ಹಾಗೂ ಇವುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯ ಸಂಬAಧಪಟ್ಟ ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ಬದೊಲೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರ ಎಮ್.ಎಚ್, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ರಮೇಶ್ ಪಾಟೀಲ್, ಕೆ.ಕೆ.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾAತ ಪುಲೇಕರ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿ. ಪ್ರಭಾಕರ ಸೇರಿದಂತೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3