Friday, January 16, 2026
Homeಜಿಲ್ಲೆಆತ್ಮವಿಶ್ವಾಸದಿಂದ ಮುಟ್ಟಿನ ದಿನಗಳು ನಿರ್ವಹಣೆ ಮಾಡಬೇಕು - ಅನೀತಾ

ಆತ್ಮವಿಶ್ವಾಸದಿಂದ ಮುಟ್ಟಿನ ದಿನಗಳು ನಿರ್ವಹಣೆ ಮಾಡಬೇಕು – ಅನೀತಾ

ಆತ್ಮವಿಶ್ವಾಸದಿಂದ ಮುಟ್ಟಿನ ದಿನಗಳು ನಿರ್ವಹಣೆ ಮಾಡಬೇಕು – ಅನೀತಾ
ಬೀದರ್ – ಸರ್ಕಾರದ ಆದೇಶದಂತೆ ಪ್ರತಿ ವರ್ಷದಂತೆ ಈ ವರ್ಷವು “ಮುಟ್ಟಿನ ನೈರ್ಮಲ್ಯ ದಿನ” ವನ್ನು ಆಚರಿಸಲಾಗುತ್ತಿದೆ. ಋತುಚಕ್ರದ ಅವಧಿ, ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟೆರಿ ಪ್ಯಾಡ್ ಹಾಗೂ ಮೆನುಸ್ಟುçವಲ್ ಕಪ್ ಹಾಗೂ ವೈಯಕ್ತಿಕ ಸ್ವಚ್ಛತೆ ಮತ್ತು ಪೌಷ್ಠಿಕ ಆಹಾರದ ಕುರಿತು ಬೀದರ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಅನೀತಾ ಮಾಹಿತಿ ನೀಡಿದರು.
ಅವರು ಬುಧವಾರ ಡಾ|| ಬಿ.ಆರ್ ಅಂಬೇಡ್ಕರ ವಸತಿ ನಿಲಯ ಮೈಲೂರು ಬೀದರದಲ್ಲಿ ಹಮ್ಮಿಕೊಂಡಿದ್ದ “ಮುಟ್ಟಿನ ಸ್ನೇಹಿ ಪ್ರಪಂಚಕ್ಕಾಗಿ ಎಲ್ಲರೂ ಒಗ್ಗೂಡೋಣ” ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ “ಮುಟ್ಟಿನ ನೈರ್ಮಲ್ಯ ದಿನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳೆಯರು ಋತುಚಕ್ರದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಆತ್ಮ ವಿಶ್ವಾಸದಿಂದ ಮುಟ್ಟಿನ ದಿನಗಳನ್ನು ನಿರ್ವಹಣೆ ಮಾಡಬೇಕು ಎಂದರು.
ಬೀದರ ಆರ್.ಕೆ.ಎಸ್.ಕೆ ಸಂಯೋಜಕರಾದ ವನಜಾಕ್ಷಿ ಅವರು ಮಾತನಾಡಿ, ಜೀವ ಸೃಷ್ಠಿಯ ಮೂಲಕ್ರಿಯೆಯೇ ಋತುಚಕ್ರ, ಜೀವ ಜಗತ್ತನ್ನು ಮುಂದುವರೆಸಲು ಅಗತ್ಯವಾದ ಒಂದು ಕ್ರಿಯೆಯೇ ಋತುಚಕ್ರವಾಗಿದೆ. ಇದು ದೇವರು ಕೊಟ್ಟ ವರವಾಗಿದೆ ಹಾಗೂ ಪ್ರಕೃತಿಯ ನಿಯಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಐಸಿಟಿಸಿ ಸಂಯೋಜಕರಾದ ವಿಜಯಲಕ್ಷಿಂ, ವಸತಿ ನಿಲಯದ ವಾರ್ಡನ ಸೋನಿಕಾ, ವಸತಿ ನಿಲಯದ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
*****
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3